

ಇಂದಿನ ಜೀವನಶೈಲಿಯಲ್ಲಿ ತ್ವಚೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಧೂಳು, ಒತ್ತಡ, ಸೌಂದರ್ಯವರ್ಧಕಗಳ ಅಡ್ಡಪರಿಣಾಮ ಹೀಗೆ ಹಲವು ಕಾರಣಗಳಿವೆ. ವಿಶೇಷವಾಗಿ ಮುಖದಲ್ಲಿನ ಮೊಡವೆ ಮತ್ತು ಅದರ ಕಲೆಗಳನ್ನು ಹೋಗಲಾಡಿಸುವುದು ತುಂಬಾ ಕಷ್ಟ. ಇಂತಹ ಸಮಸ್ಯೆಗಳಿಂದ ನಮ್ಮನ್ನು ಹೊರತರಲೆಂದೆ ಆಯುರ್ವೇದ ಚಿಕಿತ್ಸೆಗಳು ನಮಗೆ ವರದಾನವಾಗಿದೆ. ಆಯುರ್ವೇದದಲ್ಲಿ ಅನೇಕ ಔಷಧೀಯ ಸಸ್ಯಗಳಿವೆ. ಅವುಗಳಲ್ಲಿ ನಮ್ಮ ತ್ವಚೆಯಿಂದ ಮೊಡವೆಗಳು, ಅದರ ಕಲೆಗಳನ್ನು ತೆಗೆದುಹಾಕಿ ಸೌಂದರ್ಯವನ್ನು ಹೆಚ್ಚಿಸುತ್ತದೆ ತ್ರಿಫಲದ ಪುಡಿ ಒಂದಾಗಿದೆ. ಇದು ಅತ್ಯಂತ ಹಳೆಯ ಮತ್ತು ಪರಿಣಾಮಕಾರಿ ಔಷಧ ಆಗಿದೆ.
ತ್ರಿಫಲ ಪುಡಿ: ತ್ರಿಫಲ ಪುಡಿ ಎಂದರೆ ಮೂರು ಹಣ್ಣುಗಳಿಂದ ಮಾಡಲ್ಪಟ್ಟಿರುವುದು. ಆಮ್ಲಾ, ವಿಭಿತಕಿ ಮತ್ತು ಹರಿತಕಿ ಈ ಮೂರರಿಂದ ಮಾಡಲಾಗಿದೆ. ಈ ಮೂರು ಹಣ್ಣುಗಳು ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ.
ತ್ರಿಫಲಾ ಪುಡಿಯಿಂದ ಆಗುವ ಪ್ರಯೋಜನಗಳು:
ತ್ರಿಫಲ ಪುಡಿಯನ್ನು ಬಳಸುವುದು ಹೇಗೆ?: ತ್ರಿಫಲ ಪುಡಿಯನ್ನು ಫೇಸ್ ಪ್ಯಾಕ್‌ನಂತೆ ಅಥವಾ ಫೇಸ್ ಮಾಸ್ಕ್‌ನಂತೆ ಬಳಸಬಹುದು. 2 ಚಮಚ ತ್ರಿಫಲ ಪುಡಿ, 2 ಟೀಸ್ಪೂನ್ ರೋಸ್ ವಾಟರ್ ಎರಡನ್ನು ಮಿಶ್ರಣ ಮಾಡಿ ಮುಖದ ಮೇಲೆ ಹಚ್ಚಿ 10 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ಚರ್ಮದ ಅಲರ್ಜಿ ಇರುವವರು ಇದನ್ನು ಬಳಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ ನಂತರ ಬಳಸಿ.