

ಬಡವರ ಬಾದಾಮಿ ಎಂದು ಕರೆಯಲ್ಪಡುವ ಕಡಲೆಕಾಯಿಯನ್ನು ಇಷ್ಟಪಡದವರೇ ಇಲ್ಲ. ಉಪವಾಸದ ಸಮಯದಲ್ಲಿ, ಸಂಜೆ ಸಮಯದಲ್ಲಿ ತಿನ್ನಲು ಬಯಸುತ್ತಾರೆ. ಅಲ್ಲದೆ ಚಿತ್ರಾನ್ನ, ಪುಳಿಯೋಗರೆ, ವಾಂಗಿಬಾತ್, ಚಟ್ನಿಯಲ್ಲಿ ಕಡಲೆಕಾಯಿ ಇಲ್ಲದಿದ್ರೆ ರುಚಿಯೇ ಇಲ್ಲವೇನೋ ಎನ್ನಿಸುತ್ತದೆ. ಕಡಲೆಕಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಉಪಯೋಗ ಇದೆ ಗೊತ್ತಾ? ಅದರಲ್ಲೂ ಬೇಯಿಸಿದ ಕಡಲೆಕಾಯಿ ತಿನ್ನುವುದರಿಂದ ಪ್ರಯೋಜನ ಜಾಸ್ತಿ. ಆ ಪ್ರಯೋಜನಗಳೇನು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಬೇಯಿಸಿದ ಕಡಲೆಕಾಯಿ ಹುರಿದ ಕಡಲೆಕಾಯಿಗಿಂತ ಹೆಚ್ಚು ಪ್ರಯೋಜನಕಾರಿ. ಬೇಯಿಸಿದ ಕಡಲೆಕಾಯಿಯಲ್ಲಿ ಹುರಿದ ಕಡಲೆಕಾಯಿಗಿಂತ ಹೆಚ್ಚಿನ ಫೈಬರ್ ಮತ್ತು ಅಗತ್ಯ ಪೋಷಕಾಂಶಗಳಿವೆ. ಈ ಜನರು ಬೇಯಿಸಿದ ಕಡಲೆಕಾಯಿಯನ್ನು ತಿನ್ನಬಾರದು. ಕರುಳಿನಲ್ಲಿ ಉಬ್ಬುವುದು ಮತ್ತು ಹೊಟ್ಟೆಯಲ್ಲಿ ಅತಿಯಾದ ಅನಿಲ ರಚನೆಯಿಂದ ಬಳಲುತ್ತಿರುವ ಜನರು ಬೇಯಿಸಿದ ಕಡಲೆಕಾಯಿಯನ್ನು ತಿನ್ನುವುದನ್ನು ತಪ್ಪಿಸಬೇಕು.