ವೀಳ್ಯದೆಲೆಯ ಶುಭ ಸೂಚನೆಯ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯ ಇಲ್ಲ. ಎಲ್ಲ ಮಂಗಳಕರ ಸಮಾರಂಭದಲ್ಲಿ ವೀಳ್ಯದೆಲೆ ಇದ್ದೇ ಇರುತ್ತದೆ. ಆಯುರ್ವೇದದ ಪ್ರಕಾರ ವೀಳ್ಯದೆಲೆಯನ್ನು ಜಗಿಯುವುದರಿಂದ ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸಬಹುದು. ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ವೀಳ್ಯದೆಲೆಯು ಆರೋಗ್ಯವನ್ನು ಬಲಪಡಿಸುವಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ. ಜತೆಗೆ ಕೆಲ ಗಂಭೀರ ಮತ್ತು ಮಾರಣಾಂತಿಕ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ವೀಳ್ಯದೆಲೆಯನ್ನು ಸೇವನೆಯಿಂದ ಆಗುವ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಇದನ್ನು ಓದಿ: 1 ವರ್ಷದೊಳಗಿನ ಶಿಶುವಿಗೆ ಹಸುವಿನ ಹಾಲು ನೀಡುವುದು ಸೇಫಲ್ಲ; ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ..
- ದಿನವಿಡೀ ದೌರ್ಬಲ್ಯ ಮತ್ತು ಆಯಾಸ ಅನುಭವಿಸುತ್ತಿದ್ದರೆ ವೀಳ್ಯದೆಲೆ ಸೇವಿಸಲು ಪ್ರಾರಂಭಿಸಿ. ವೀಳ್ಯದೆಲೆ ಈ ಸಮಸ್ಯೆ ಹೋಗಲಾಡಿಸಲು ಸಹಾಯಕವಾಗಿದೆ. ನೆಗಡಿ ಮತ್ತು ಕೆಮ್ಮು ಹೋಗಲಾಡಿಸಲು ವೀಳ್ಯದೆಲೆಯನ್ನೂ ಬಳಸಬಹುದು.
- ವೀಳ್ಯದೆಲೆಯ ರಸವನ್ನು ಕುಡಿಯುವುದರಿಂದ ಹೃದಯದ ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸಬಹುದು. ಅಂದರೆ ಮಾರಣಾಂತಿಕ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ವೀಳ್ಯದೆಲೆಗಳನ್ನು ಬಳಸಬಹುದು.
- ವೀಳ್ಯದೆಲೆಯು ಕರುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಮಲಬದ್ಧತೆಯಂತಹ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಪಡೆಯಲು ವೀಳ್ಯದೆಲೆ ರಾಮಬಾಣ ಎಂದರೆ ತಪ್ಪಲ್ಲ.
- ವೀಳ್ಯದೆಲೆಯು ಕ್ಯಾನ್ಸರ್ ಹೋರಾಟದ ಪ್ರಯೋಜನಗಳನ್ನು ಹೊಂದಿರುವ ಫೈಟೊಕೆಮಿಕಲ್‌ಗಳನ್ನು ಹೊಂದಿದೆ. ಇದರಿಂದ ಕ್ಯಾನ್ಸ್ರ್ ಹೆಚ್ಚಾಗುವ ಅಪಾಯವನ್ನು ತಡೆಯುತ್ತದೆ.
- ನೀವು ಔಷಧ ತೆಗೆದುಕೊಳ್ಳದೆ ಜ್ವರವನ್ನು ಗುಣಪಡಿಸಲು ಬಯಸಿದರೆ, ಸುಮಾರು 3 ಮಿಲಿ ವೀಳ್ಯದ ಎಲೆಯ ಸಾರವನ್ನು ಬಿಸಿ ಮಾಡಿ ಕುಡಿಯಿರಿ. ಮೂರ್ಛೆ ರೋಗ ಬಂದರೂ ವೀಳ್ಯದೆಲೆ ಸೇವಿಸುವುದು ಸೂಕ್ತ.
- ಮೊಡವೆಗಳು ತುರಿಕೆ ಮತ್ತು ದೇಹದ ವಾಸನೆಗಳಿಗೆ ಉತ್ತಮ ನೈಸರ್ಗಿಕ ಚಿಕಿತ್ಸೆ ಎಂದರೆ ವೀಳ್ಯದೆಲೆ ಸೇವಿಸುವುದು. ಚರ್ಮದಲ್ಲಿ ಸೂಕ್ಷ್ಮವಾಗಿ ಅಡಗಿರುವ ಕೊಳೆಯನ್ನು ಹೊರತೆಗೆಯುವ ಮೂಲಕ ಚರ್ಮವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಜತೆಗೆ ಮೃದುವಾದ ಮತ್ತು ಹೊಳೆಯುವ ಚರ್ಮವನ್ನು ಒದಗಿಸುತ್ತದೆ. ಅಲರ್ಜಿಯ ವಿರುದ್ಧ ಹೋರಾಡುತ್ತದೆ.
ಗರ್ಭಾವಸ್ಥೆಯಲ್ಲಿ ದೇಹದಲ್ಲಿ ಮಾತ್ರವಲ್ಲ ಮನಸ್ಸಿನಲ್ಲಿಯೂ ದೊಡ್ಡ ಬದಲಾವಣೆಯಾಗುತ್ತಾ?; ಅಧ್ಯಯನವೊಂದು ತಿಳಿಸಿದಿಷ್ಟು..