ಹೊಟ್ಟೆಯ ಕೊಬ್ಬು ಕಡಿಮೆ ಮಾಡುವ ಅದ್ಭುತ ಯೋಗ ಆಸನಗಳು! Yoga asanas

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಇತ್ತೀಚಿನ ದಿನಗಳಲ್ಲಿ ಹಲವಾರು ಜನರು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ
  • ತ್ತಡದ ಕೆಲಸ, ಅನಿಯಮಿತ ಆಹಾರ ಪದ್ಧತಿ, ನಿದ್ರೆಯ ಕೊರತೆ ಹೊಟ್ಟೆಯ ಕೊಬ್ಬಿಗೆ ಕಾರಣ
  • ಯೋಗ ಮಾಡುವುದು ನಿಮ್ಮ ತೂಕವನ್ನು ನಿರ್ವಹಿಸಲು ಮತ್ತು ಸುರಕ್ಷಿತವಾಗಿ ಸಮತೋಲಿಸುವ ಮಾರ್ಗವಾಗಿದೆ
  • ನಿಯಮಿತ ಅಭ್ಯಾಸದಿಂದ ಇದು ಜೀರ್ಣಕ್ರಿಯೆಯನ್ನು ಸುಧಾರಿಸಿ, ಒತ್ತಡವನ್ನು ಕಡಿಮೆ ಮಾಡಬಹುದು
Yoga asanas: ಇತ್ತೀಚಿನ ದಿನಗಳಲ್ಲಿ ಹಲವಾರು ಜನರು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ ಹೆಚ್ಚುವರಿ ಹೊಟ್ಟೆಯ ಕೊಬ್ಬು ಕೂಡ ಒಂದು. ಒತ್ತಡದ ಕೆಲಸ, ಅನಿಯಮಿತ ಆಹಾರ ಪದ್ಧತಿ, ನಿದ್ರೆಯ ಕೊರತೆ ಮತ್ತು ಮಾನಸಿಕ ಒತ್ತಡ ಇವೆಲ್ಲವೂ ಇದಕ್ಕೆ ನೇರ ಕಾರಣವಾಗಿರುತ್ತದೆ. ತ್ವರಿತ ತೂಕ ನಷ್ಟವನ್ನು ಸಹಾಯ ಮಾಡುವ ಅನೇಕ ಕ್ರ್ಯಾಶ್​ ಡಯಟ್​ಗಳು ಹಾಗೂ ಕಟ್ಟುಪಾಡುಗಳು ಇದ್ದರೂ ದೀರ್ಘಕಾಲವಾಗಿ ಅವುಗಳ ಬಳಕೆ ಆರೋಗ್ಯಕ್ಕೆ ಒಳ್ಳೆಯದಲ್ಲ.
ಯೋಗ ಮಾಡುವುದು ನಿಮ್ಮ ತೂಕವನ್ನು ನಿರ್ವಹಿಸಲು ಮತ್ತು ಸುರಕ್ಷಿತವಾಗಿ ಸಮತೋಲಿಸುವ ಮಾರ್ಗವಾಗಿದೆ. ಇದನ್ನು ಪ್ರತಿನಿತ್ಯ ಮಾಡುವುದಿಂದ ಒಂದೇ ಸಮನೆ ಹೊಟ್ಟೆ ಕೊಬ್ಬು ಕರಗದಿದ್ದರೂ, ನಿಯಮಿತ ಅಭ್ಯಾಸದಿಂದ ಇದು ಜೀರ್ಣಕ್ರಿಯೆಯನ್ನು ಸುಧಾರಿಸಿ, ಒತ್ತಡವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಹಾಗಿದ್ದರೆ, ಹೊಟ್ಟೆಯ ಕೊಬ್ಬನ್ನು ಕರಗಿಸುವ ಈ ಪ್ರಮುಖ ಯೋಗಗಳನ್ನು ಪ್ರತಿನಿತ್ಯ ಅಭ್ಯಾಸ ಮಾಡಿ.

1. ಭುಜಂಗಾಸನ

ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸಲಿಕೊಳ್ಳಲು ಭುಜಂಗಾಸನವು ಅತ್ಯುತ್ತಮ ಆಸನಗಳಲ್ಲಿ ಒಂದಾಗಿದೆ. ಇದು ಹೊಟ್ಟೆಯ ಸ್ನಾಯುಗಳನ್ನು ಹಿಗ್ಗಿಸುವುದರ ಜೊತೆಗೆ ರಕ್ತದ ಅರಿವನ್ನು ಹೆಚ್ಚಿಸುತ್ತದೆ. ಈ ಆಸನವು ಜೀರ್ಣಕ್ರಿಯೆಯನ್ನು ಸುಧಾರಿಸಿ ಬೆನ್ನು ನೋವಿಗೆ ತ್ವರಿತ ಪರಿಹಾರವನ್ನು ನೀಡುತ್ತದೆ. ಹಾಗಾಗಿ ಪ್ರತಿನಿತ್ಯ ಬೆಳಿಗ್ಗೆ 5 ನಿಮಿಷಗಳ ಕಾಲ ಈ ಅಭ್ಯಾಸವನ್ನು ಮಾಡಿ.


2. ದೋಣಿ ಭಂಗಿ

ದೋಣಿ ಭಂಗಿ ಯೋಗವು ಅತ್ಯಂತ ಪರಿಣಾಮಕಾರಿ ಕೋರ್ ಸ್ಟ್ರೆಂಥನಿಂಗ್ ಆಸನಗಳಲ್ಲಿ ಒಂದಾಗಿದೆ. ಇದು ಹೊಟ್ಟೆಯ ಕೊಬ್ಬು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಭಂಗಿಯು ದೇಹಕ್ಕೆ ಹೆಚ್ಚು ಶಕ್ತಿ ನೀಡುವುದರ ಜೊತೆಗೆ ಕ್ಯಾಲರಿಯನ್ನು ಸುಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಹಾಗೆಯೇ ಇದು ಹೊಟ್ಟೆಯ ಸ್ನಾಯುಗಳನ್ನು ಸಂಕೋಚಿಸಿ ವಿಸ್ತರಣೆ ಮಾಡಿ, ಕೊಬ್ಬು ಸಂಗ್ರಹವನ್ನು ಕರಗಿಸಲು ಸಹಾಯ ಮಾಡುತ್ತದೆ.

3. ಧನುರಾಸನ

ಧನುರಾಸನ ಯೋಗವು ಅತ್ಯಂತ ಶಕ್ತಿಶಾಲಿ ಬ್ಯಾಕ್‌ಬೆಂಡ್ ಆಸನಗಳಲ್ಲಿ ಒಂದಾಗಿದೆ. ಇದು ಹೊಟ್ಟೆಯ ಕೊಬ್ಬು ಕಡಿಮೆ ಮಾಡಲು ಬಹಳ ಪರಿಣಾಮಕಾರಿ, ಏಕೆಂದರೆ ಇದು ಹೊಟ್ಟೆಯ ಸ್ನಾಯುಗಳನ್ನು ತೀವ್ರವಾಗಿ ಸ್ಟ್ರೆಚ್ ಮಾಡಿ ಬಲಪಡಿಸುತ್ತದೆ. ಇದು ಜೀರ್ಣಕಾರಿ ಅಂಗಗಳನ್ನು ಉತ್ತೇಜಿಸುವುದರ ಜೊತೆಗೆ ಅನಿಲ ಸಂಬಂಧಿತ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಪ್ರತಿದಿನ ಬೆಳಿಗ್ಗೆ 5 ನಿಮಿಷಗಳ ಕಾಲ ಈ ಆಸನವನ್ನು ಅಭ್ಯಾಸ ಮಾಡಿ.

4. ಕುಂಭಕಾಸನ

ಈ ಯೋಗವು ಕಾಣಲು ತುಂಬಾ ಸರಳವಾಗಿರಬಹುದು. ಆದರೆ, ಇದು ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಏಕೆಂದರೆ ಇದು ಪೂರ್ತಿ ದೇಹದ ಸ್ನಾಯುಗಳನ್ನು ತೀವ್ರವಾಗಿ ದಂಡಿಸುತ್ತದೆ. ಇದು ನಿಮ್ಮ ತೋಳುಗಳು, ಭುಜಗಳು ಮತ್ತು ಕಾಲುಗಳ ಜೊತೆಗೆ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಬೆಳಿಗ್ಗೆ ಯೋಗ ಮಾಡುವ ಸಮಯದಲ್ಲಿ ಈ ಆಸನವನ್ನು ಮಾಡುವುದು ಉತ್ತಮ.
5. ಪವನಮುಕ್ತಾಸನ
ಪವನಮುಕ್ತಾಸನ ಯೋಗವು ಬಹಳ ಸರಳ ಮತ್ತು ಪರಿಣಾಮಕಾರಿ ಆಸನಗಳಲ್ಲಿ ಒಂದಾಗಿದೆ. ಇದು ವಿಶೇಷವಾಗಿ ಹೊಟ್ಟೆಯ ಕೊಬ್ಬು ಕಡಿಮೆ ಮಾಡಲು ಮತ್ತು ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ. ಇದು ಹೊಟ್ಟೆಯ ಮೇಲೆ ನೇರವಾಗಿ ಒತ್ತಡ ಬೀರುವುದರಿಂದ ಕೊಬ್ಬು ಕರಗಲು ಸಹಾಯವಾಗುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net