Feel Dizzy : ಕೆಲವೊಮ್ಮೆ ನೀವು ಸ್ವಲ್ಪ ಸಮಯದವರೆಗೆ ಕುಳಿತು ಅಥವಾ ಮಲಗಿ ಎದ್ದಾಗ, ಇದ್ದಕ್ಕಿದ್ದಂತೆ ತೆಲೆ ತಿರುಗಿದ ಅನುಭವ ಆಗುತ್ತದೆ. ಈ ರೀತಿಯ ಅನುಭವ ಬಹುತೇಕ ಮಂದಿಗೆ ಆಗಿರುತ್ತದೆ. ಆದರೆ, ಇದು ಪ್ರತಿ ಬಾರಿಯೂ ಸಂಭವಿಸುವುದಿಲ್ಲ, ಸಾಂದರ್ಭಿಕವಾಗಿ ನಡೆಯುತ್ತದೆ. ನಿಮಗೇನಾದರೂ ಈ ಸಮಸ್ಯೆ ಇದ್ದರೆ, ಖಂಡಿತವಾಗಿಯೂ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಈ ರೀತಿಯ ಸಮಸ್ಯೆಯನ್ನು ಆರ್ಥೋಸ್ಟಾಟಿಕ್ ಹೈಪೊಟೆನ್ಷನ್ ಎಂದು ಕರೆಯುತ್ತೇವೆ. ಇದು ಹಠಾತ್ ತಲೆನೋವು ಮತ್ತು ತಲೆತಿರುಗುವಿಕೆ ಮುಂತಾದ ಲಕ್ಷಣಗಳನ್ನು ಉಂಟುಮಾಡಬಹುದು.