ಒಂದು ತಿಂಗಳವರೆಗೆ ದಿನಕ್ಕೊಂದು ದಾಳಿಂಬೆ ಹಣ್ಣು ತಿಂದ್ರೆ ಏನಾಗುತ್ತೆ ಗೊತ್ತಾ?..Pomegranate

Pomegranate benefits
Pomegranate benefits
Published on: 

ಪ್ರಮುಖ ಮುಖ್ಯಾಂಶಗಳು

  • ದಿನಕ್ಕೊಂದು ದಾಳಿಂಬೆ ತಿಂದರೆ ಏನೆಲ್ಲ ಆರೋಗ್ಯ ಪ್ರಯೋಜನ ಲಭ್ಯವಾಗುತ್ತದೆ?
  • ದಾಳಿಂಬೆಯಲ್ಲಿದೆ ನಾರಿನಾಂಶ, ಜೀವಸತ್ವ, ಆಂಟಿ ಆಕ್ಸಿಡೆಂಟ್​ಗಳು
  • ಮುಖದ ತ್ವಚೆಯ ಕಾಂತಿ, ನೆನಪಿನ ಶಕ್ತಿ, ಮೂಳೆ ಗಟ್ಟಿ, ರಕ್ತಹೀನತೆ ತಡೆಯಲು ಸಹಕಾರಿ.
Pomegranate benefits: ದಾಳಿಂಬೆ ದುಬಾರಿ ಹಣ್ಣು ಎಂದು ಹಲವರು ಇದನ್ನು ಖರೀದಿ ಮಾಡಲು ಹಿಂದೇಟು ಹಾಕುತ್ತಾರೆ. ಆದರೆ, ಒಮ್ಮೆ ತಿನ್ನಲು ಶುರು ಮಾಡಿದರೆ ಆರೋಗ್ಯಕ್ಕೆ ನೀವು ಎಣಿಕೆ ಮಾಡದ್ದಷ್ಟು ಪ್ರಯೋಜನ ಕೊಡುವ ತಾಕತ್ತು ಈ ಹಣ್ಣಿನಲ್ಲಿ ಇದೆ. ಇವುಗಳಲ್ಲಿ ಇರುವ ನಾರಿನಾಂಶ, ಜೀವಸತ್ವ, ಆಂಟಿ ಆಕ್ಸಿಡೆಂಟ್​ಗಳು.. ಕೆಲವರಿಗೆ ಕಾಡುವ ರಕ್ತ ಹೀನತೆ, ಮೂಳೆ ಗಟ್ಟಿಗೊಳಿಸಲು, ಮುಖದ ತ್ವಚೆಯ ಕಾಂತಿ, ನೆನಪಿನ ಶಕ್ತಿ ಹೆಚ್ಚಿಸಲು ಸಹಕಾರಿ.
ದಿನಕ್ಕೊಂದು ದಾಳಿಂಬೆಯನ್ನು ಒಂದು ತಿಂಗಳ ಮಟ್ಟಿಗೆ ತಿಂದರೆ ಏನಾಗುತ್ತದೆ? ಏನೆಲ್ಲ ಲಾಭವನ್ನು ನಿಮ್ಮದಾಗಿಸಿಕೊಳ್ಳಬಹುದು. ದೇಹದ ಆರೋಗ್ಯಕ್ಕೆ ಯಾವ ರೀತಿಯಲ್ಲಿ ಸಹಕಾರಿ ಎನ್ನುವ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಕಾಂತಿಯುತ ಚರ್ಮ ನೀಡುವ ದಾಳಿಂಬೆ

2022ರ ಪ್ಲಸೀಬೋ ನಿಯಂತ್ರಿತ ಅಧ್ಯಯನದ ಪ್ರಕಾರ ಒಂದು ತಿಂಗಳವರೆಗೂ ದಿನಕ್ಕೊಂದರಂತೆ ದಾಳಿಂಬೆ ತಿನ್ನುವುದರಿಂದ ಚರ್ಮವು ಕಾಂತಿಯುಕ್ತವಾಗಿ ಮಾರ್ಪಡುತ್ತದೆ. ತೀರ ಸುಕ್ಕುಗಟ್ಟುವುದು ಕಡಿಮೆಯಾಗುತ್ತದೆ. ಒದರಲ್ಲಿರುವ ವಿಟಮಿನ್​ ಸಿ, ಉತ್ಕರ್ಷಣ ನಿರೋಧಕ ಚರ್ಮ ಹಾನಿಯಾಗುವುದನ್ನು ತಡೆಯುತ್ತದೆ. ಕಾಲಜನ್​ ಉತ್ಪಾದನೆಯಿಂದಾಗಿ ಚರ್ಮದ ಸುಕ್ಕು ಕಡಿಮೆಯಾಗುತ್ತದೆ.

ಹೃದಯದ ಚೈತನ್ಯಕ್ಕೆ ನಾಂದಿ

ದಾಳಿಂಬೆ ಹೆಚ್ಚು ಸಹಕಾರಿಯಾಗೋದು ನಿಮ್ಮ ಹೃದಯ ಕಾಪಾಡಲು. NIH ಪ್ರಕಟಿಸಿದ ವರದಿ ಪ್ರಕಾರ ಎಂಟು ವಾರ ದಿನ ದಾಳಿಂಬೆ ತಿನ್ನುವುದು ಹಿಮೋಡಯಾಲಿಸಿಸ್​ಗೆ ಒಳಗಾಗುವ ಜನರಲ್ಲಿ ರಕ್ತದೊತ್ತಡ ಮತ್ತು ಟ್ರೈಗ್ಲಿಸರೈಡ್​ ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರಕ್ತದಲ್ಲಿ ಕೊಲೆಸ್ಟ್ರಾಲ್ ಶೇಖರಣೆಯಾಗುವುದನ್ನು ತಪ್ಪಿಸುತ್ತದೆ.

ನೆನಪಿನ ಶಕ್ತಿ ಹೆಚ್ಚಳಕ್ಕೆ ಸಹಾಯ

2023ರ NIH ಸಂಶೋಧನೆ ಪ್ರಕಾರ ಮೆದುಳನ್ನು ಚುರುಕಾಗಿಡಲು ದಾಳಿಂಬೆ ಸಹಾಯ ಮಾಡುತ್ತದೆ. 230 ಮಿಲಿ ಗ್ರಾಂ ದಾಳಿಂಬೆ ಸೇವನೆ ಮಾಡುವುದರಿಂದ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎನ್ನಲಾಗುತ್ತದೆ. ಮಧ್ಯಮ ಮತ್ತು ವಯಸ್ಕರಿಗೆ ಇದು ಇನ್ನಷ್ಟು ಸಹಕಾರಿ.

ಜೀರ್ಣಕ್ರಿಯೆ ಸುಧಾರಣೆ

ಇದರಲ್ಲಿರುವ ನಾರಿನಾಂಶವು ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ಸಹಾಯ ಮಾಡುವುದರಿಂದ ಜೀರ್ಣ ವ್ಯವಸ್ಥೆಯನ್ನು ಆರೋಗ್ಯವಾಗಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಸಹಕಾರಿ

ಪದೇ ಪದೇ ಹುಷಾರಿಲ್ಲದೆ ಹಾಸಿಗೆ ಹಿಡಿಯುತ್ತಿದ್ದರೆ, ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇಳಿಕೆಯಾಗಿದೆ ಎಂದು ಅರ್ಥ ಹೀಗಾಗಿ. ಒಂದು ಬೌಲ್​ ತುಂಬಾ ದಾಳಿಂಬೆ ಹಣ್ಣನ್ನು ಸೇವನೆ ಮಾಡುವುದರಿಂದ ಆಂಟಿ ಫಂಗಲ್​​ ಮತ್ತು ಆಂಟಿ ಬ್ಯಾಕ್ಟೀರಿಯಾ ವೃದ್ಧಿಗೆ ಸಹಾಯ ಮಾಡುತ್ತದೆ, (ಏಜೆನ್ಸೀಸ್).