ಮುಖದ ಗ್ಲೋ ಹೆಚ್ಚಿಸಲು ಸಾವಿರಾರು ರೂಪಾಯಿ ವೇಸ್ಟ್ ಮಾಡಬೇಡಿ; ಮನೆಯಲ್ಲೇ ಈ ಸೀಕ್ರೆಟ್ ಟೋನರ್ ಟ್ರೈ ಮಾಡಿ ನೋಡಿ! Glowing Skin Tips

Glowing Skin Tips ಸಾಂದರ್ಭಿಕ ಚಿತ್ರ
Glowing Skin Tips ಸಾಂದರ್ಭಿಕ ಚಿತ್ರ
Published on
Glowing Skin Tips: ಪ್ರತಿಯೊಬ್ಬರೂ ತಮ್ಮ ಚರ್ಮವು ದೋಷರಹಿತವಾಗಿ, ಸದಾ ತಾರುಣ್ಯದಿಂದ ಕೂಡಿರಬೇಕೆಂದು ಬಯಸುತ್ತಾರೆ. ಆದರೆ ಇಂದಿನ ಬಿಡುವಿಲ್ಲದ ಆಧುನಿಕ ಜೀವನಶೈಲಿ, ಧೂಳು, ಹವಾವೇದನೆ ಬದಲಾವಣೆ, ಕಲುಷಿತ ವಾತಾವರಣ ಮತ್ತು ಅತಿಯಾದ ಮಾನಸಿಕ ಒತ್ತಡವು ನಮ್ಮ ಚರ್ಮದ ಆರೋಗ್ಯವನ್ನು ಕೆಡಿಸುತ್ತಿದೆ. ಇದರ ನೇರ ಪರಿಣಾಮವಾಗಿ ಅಕಾಲಿಕ ವಯಸ್ಸಾಗುವಿಕೆ, ಮುಖದ ಮೇಲೆ ತೆರೆದ ರಂಧ್ರಗಳು, ಕಪ್ಪು ಕಲೆಗಳು ಹಾಗೂ ಸೂಕ್ಷ್ಮ ರೇಖೆಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ.
ನಿಮಗೂ ಈ ಸಮಸ್ಯೆ ಇದ್ದರೆ, ಪಾರ್ಲರ್‌ಗೆ ಹೋಗುವ ಅಗತ್ಯವೇ ಇಲ್ಲ. ಬದಲಾಗಿ ಸೌತೆಕಾಯಿ, ಗ್ರೀನ್ ಟೀ ಮತ್ತು ರೋಸ್ ವಾಟರ್ ಬಳಸಿ ಮನೆಯಲ್ಲಿಯೇ ಆಂಟಿಆಕ್ಸಿಡೆಂಟ್ ಟೋನರ್ ಅನ್ನು ಹೇಗೆ ತಯಾರಿಸಬೇಕೆಂದು ನಾವಿಂದು ನಿಮಗೆ ತೋರಿಸಿಕೊಡಲಿದ್ದೇವೆ. ಈ ಟೋನರ್ ಬಳಸುವುದರಿಂದ ಇದು ನಿಮ್ಮ ಚರ್ಮವನ್ನು ಸುಗಮಗೊಳಿಸುತ್ತದೆ ಜೊತೆಗೆ ಕಲೆಗಳನ್ನು ಕಡಿಮೆ ಮಾಡುತ್ತದೆ.
ಮುಖದ ಅಂದ ಹೆಚ್ಚಿಸುವ ನೈಸರ್ಗಿಕ ಟೋನರ್ !

ಕೇವಲ ಒಂದು ತಿಂಗಳು ನಿಯಮಿತವಾಗಿ ಬಳಸುವುದರಿಂದ ನಿಮಗೆ ಸ್ವಚ್ಛ ಮತ್ತು ದೋಷರಹಿತ ಮೈಬಣ್ಣ ಸಿಗುತ್ತದೆ. ಈ ಟೋನರ್‌ನಲ್ಲಿರುವ ಸೌತೆಕಾಯಿ ಚರ್ಮವನ್ನು ಹೈಡ್ರೇಟ್ ಆಗಿರಿಸುವುದರ ಜೊತೆಗೆ ಗ್ರೀನ್ ಟೀ ಕಲೆಗಳನ್ನು ತೆಗೆದುಹಾಕಲು ಫ್ರೀ ರಾಡಿಕಲ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಜೊತೆಗೆ ರೋಸ್​ ವಾಟರ್​ ನಿಮ್ಮ ಮುಖಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.

ಟೋನರ್​ ತಯಾರಿಸುವುದು ಹೇಗೆ?

ಬೇಕಾಗುವ ಸಾಮಾಗ್ರಿಗಳು

* 1 ಸಣ್ಣ ಸೌತೆಕಾಯಿ
* 1 ಟೀ ಚಮಚ ಹಸಿರು ಚಹಾ ಎಲೆಗಳು
* ಅರ್ಧ ಕಪ್ ರೋಸ್ ವಾಟರ್
* ಅರ್ಧ ಕಪ್ ನೀರು
* 1 ವಿಟಮಿನ್ ಇ ಕ್ಯಾಪ್ಸುಲ್
* ಸ್ಪ್ರೇ ಬಾಟಲ್
ಮೊದಲು ಅರ್ಧ ಕಪ್ ನೀರನ್ನು ಕುದಿಸಿ. ಗ್ರೀನ್ ಟೀ ಬ್ಯಾಗ್ ಅಥವಾ ಎಲೆಗಳನ್ನು ಸೇರಿಸಿ 5-7 ನಿಮಿಷಗಳ ಕಾಯಿಸಲು ಬಿಡಿ. ನಂತರ ನೀರನ್ನು ಸ್ವಲ್ಪ ತಣ್ಣಗಾಗಿಸಿ ಅದನ್ನು ಸೋಸಿ. ತುರಿದ ಸೌತೆಕಾಯಿಯನ್ನು ಸ್ವಚ್ಛವಾದ ಹತ್ತಿ ಬಟ್ಟೆ ಅಥವಾ ಜರಡಿ ಬಳಸಿ ಹಿಂಡಿ, ಅದರ ಎಲ್ಲಾ ರಸವನ್ನು ಹೊರತೆಗೆಯಿರಿ.
ನಂತರ ಒಂದು ಸ್ವಚ್ಛವಾದ ಬಟ್ಟಲಿನಲ್ಲಿ ಅರ್ಧ ಕಪ್​ ಸೌತೆಕಾಯಿ ರಸ, ಅರ್ಧ ಕಪ್ ಕುದಿಸಿದ ಹಸಿರು ಚಹಾ ಮತ್ತು ಅರ್ಧ ಕಪ್ ರೋಸ್ ವಾಟರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಿಮ್ಮ ಚರ್ಮ ತುಂಬಾ ಒಣಗಿದ್ದರೆ, ವಿಟಮಿನ್ ಇ ಕ್ಯಾಪ್ಸುಲ್ ಅನ್ನು ತೆಗೆದುಕೊಂಡು ಅದರ ಎಣ್ಣೆಯನ್ನು ಈ ಮಿಶ್ರಣಕ್ಕೆ ಸೇರಿಸಿ. ತಯಾರಾದ ದ್ರವವನ್ನು ಸ್ವಚ್ಛವಾದ ಸ್ಪ್ರೇ ಬಾಟಲಿಗೆ ಸುರಿಯಿರಿ. ಬಳಸಲು ಸಿದ್ಧವಾಗುವವರೆಗೆ ಯಾವಾಗಲೂ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net