ಮಣ್ಣಿನ ಪಾತ್ರೆಯನ್ನು ಮೊದಲ ಬಾರಿಗೆ ಬಳಸುವುದು ಹೇಗೆ?; ತಿಳಿದುಕೊಳ್ಳುವುದು ಬಹಳ ಮುಖ್ಯ | Health Tips

Untitled design (28)
Published on

ಇತ್ತೀಚಿನ ದಿನಗಳಲ್ಲಿ ನಾನ್-ಸ್ಟಿಕ್ ಜತೆಗೆ ಜನರು ಮಣ್ಣಿನ ಮಡಕೆಗಳನ್ನು ಸಹ ಬಳಸಲು ಪ್ರಾರಂಭಿಸಿದ್ದಾರೆ. ವಾಸ್ತವವಾಗಿ ನಮ್ಮ ಮನೆಗಳಲ್ಲಿ ಶತಮಾನಗಳಿಂದ ಮಣ್ಣಿನ ಮಡಕೆಗಳನ್ನು ಬಳಸಲಾಗುತ್ತಿದೆ. ಮಣ್ಣಿನ ಮಡಕೆಯನ್ನು ರೆಫ್ರಿಜರೇಟರ್​ಗಿಂತ ಉತ್ತಮವೆಂದು ಪರಿಗಣಿಸಲಾಗುತ್ತದೆ. ಬೇಸಿಗೆಯಲ್ಲಿ ಹೆಚ್ಚಿನ ಮನೆಗಳಲ್ಲಿ ರೆಫ್ರಿಜರೇಟರ್ ಬದಲಿಗೆ ಇದನ್ನು ಇಡಲಾಗುತ್ತದೆ. ಇದಲ್ಲದೆ ಇತ್ತೀಚಿನ ದಿನಗಳಲ್ಲಿ ಮಣ್ಣಿನ ಪ್ಯಾನ್ ಕೂಡ ಪ್ರವೃತ್ತಿಯಲ್ಲಿದೆ.(Health Tips)

ಆದರೆ ಹೆಚ್ಚಾಗಿ ಜನರು ಮಣ್ಣಿನ ಮಡಕೆಗಳನ್ನು ಸರಿಯಾಗಿ ಬಳಸುವುದಿಲ್ಲ. ಈಗ ನೀವು ಮೊದಲ ಬಾರಿಗೆ ಮಣ್ಣಿನ ಪ್ಯಾನ್ ಖರೀದಿಸುತ್ತಿದ್ದರೆ ನಿಮಗಾಗಿಯೇ ಈ ಮಾಹಿತಿ ನೀಡಲಾಗಿದೆ. ಮಣ್ಣಿನ ಪ್ಯಾನ್‌ ಬಳಸುವವರಿಗೆ ಈ ಲೇಖನದಿಂದ ಮೊದಲ ಪ್ರಯತ್ನದಲ್ಲಿ ಆಗುವ ತಪ್ಪುಗಳನ್ನು ತಪ್ಪಿಸಬಹುದು.

ಮನೆಗೆ ತಂದಿರುವ ಮಣ್ಣಿನ ಪ್ಯಾನ್​ ಅನ್ನು ಮೊದಲು ಅದನ್ನು 24 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ನಿಗದಿತ ಸಮಯದ ನಂತರ ಪ್ಯಾನ್ ಅನ್ನು ಹೊರತೆಗೆದು ಇಡೀ ದಿನ ಬಿಸಿಲಿನಲ್ಲಿ ಒಣಗಿಸಿ. ಈಗ ನೀವು ಮಣ್ಣಿನ ಪಾತ್ರೆಯ ಮೇಲೆ ಎಣ್ಣೆ ಹಚ್ಚಿ ಚೆನ್ನಾಗಿ ಗ್ರೀಸ್ ಮಾಡಬೇಕು. ಇಲ್ಲಿ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ಯಾವುದೇ ಎಣ್ಣೆಯನ್ನು ಬಳಸಬಹುದು.

ಎಣ್ಣೆ ಸವರಿದ ನಂತರವೂ ನೀವು ಪ್ಯಾನ್ ಅನ್ನು ಒಣಗಿಸಬೇಕು. ಅದಾದ ನಂತರ ಪ್ಯಾನ್ ಅನ್ನು ಗ್ಯಾಸ್ ಮೇಲೆ ಇರಿಸಿ ಮತ್ತು ಅಕ್ಕಿ ತೊಳೆದ ನಂತರ ಹೊರಬರುವ ನೀರನ್ನು ಪ್ಯಾನ್ ಮೇಲೆ ಸುರಿಯಿರಿ. ಈಗ ಗ್ಯಾಸ್ ಅನ್ನು ದೊಡ್ಡ ಉರಿಯಲ್ಲಿ ಹಾಕಿರುವ ಅಕ್ಕಿ ತೊಳೆದ ನೀರನ್ನು ಕುದಿಯಲು ಬಿಡಿ.

ಈಗ 5 ನಿಮಿಷ ಕುದಿಸಿದ ನಂತರ ನೀವು ಅಕ್ಕಿ ನೀರನ್ನು ಹೊರಗೆ ಎಸೆಯಬೇಕು. ಜತೆಗೆ ಉಪ್ಪು ಮತ್ತು ನಿಂಬೆ ರಸವನ್ನು ಸೇರಿಸಿ ಮತ್ತು ಮೃದುವಾದ ಸ್ಕ್ರಬ್ಬರ್‌ನಿಂದ ಉಜ್ಜಿಕೊಳ್ಳಿ. ಇದಾದ ನಂತರ ಅದನ್ನು ಶುದ್ಧ ನೀರಿನಿಂದ ತೊಳೆಯುವ ಮೂಲಕ ನೀವು ಮಣ್ಣಿನ ಪ್ಯಾನ್ ಬಳಸಲು ಸೂಕ್ತಗೊಳಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net