ಮೊಡವೆ ಕಲೆಯು ನಿಮ್ಮ ಮುಖದ ಸೌಂದರ್ಯವನ್ನು ಹಾಳು ಮಾಡುತ್ತಿದೆಯೇ?; ಸಮಸ್ಯೆ ಪರಿಹಾರಕ್ಕೆ ಇಲ್ಲಿದೆ ಮನೆಮದ್ದು | Health Tips

pigm 1
Published on

ಮುಖದಲ್ಲಿನ ಮೊಡವೆ ಮತ್ತು ಅದರ ಕಲೆಗಳನ್ನು ಹೋಗಲಾಡಿಸುವುದು ತುಂಬಾ ಕಷ್ಟ. ಈ ಸಮಸ್ಯೆಯಿಂದ ಹೊರಬರುವುದೇಗೆ ಎಂದು ಆಲೋಚಿಸುತ್ತಿದ್ದೀರಾ. ನಿಮಗಾಗಿಯೇ ಈ ಹೆಲ್ತ್​​ ಟಿಪ್ಸ್​​. ಮುಖದಲ್ಲಿನ ಮೊಡವೆ ಮತ್ತು ಅದರ ಕಲೆಯನ್ನು ತೆಗೆದುಹಾಕಲು ಮನೆಯಲ್ಲಿನ ಈ ವಸ್ತು ಸಾಕು. ಯಾವುದು ಆ ವಸ್ತು ಎಂದು ಆಲೋಚಿಸುತ್ತಿದ್ದೀರಾ. ಕಲೆ ಕಡಿಮೆ ಮಾಡಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ ತ್ರಿಫಲದ ಪುಡಿ. ತ್ರಿಫಲ ಪುಡಿಯನ್ನು ಆಮ್ಲಾ, ವಿಭಿತಕಿ ಮತ್ತು ಹರಿತಕಿ ಈ ಮೂರರಿಂದ ಮಾಡಲಾಗಿದೆ. (Health Tips)

ತ್ರಿಫಲಾ ಪುಡಿಯಿಂದ ಆಗುವ ಪ್ರಯೋಜನಗಳು:

  • ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುವ ಮೂಲಕ ಚರ್ಮವನ್ನು ಪುನರ್ಯೌವನಗೊಳಿಸುತ್ತದೆ.
  • ಈ ಪೌಡರ್‌ನಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಚರ್ಮದ ಮೇಲಿನ ಕಲೆಗಳನ್ನು ಕಡಿಮೆ ಮಾಡುತ್ತದೆ.
  • ಉತ್ಕರ್ಷಣ ನಿರೋಧಕಗಳು, ವಿಟಮಿನ್​​ ಸಿ ಸಮೃದ್ಧವಾಗಿದ್ದು, ಇದು ಚರ್ಮವನ್ನು ಹೈಡ್ರೀಕರಿಸುತ್ತದೆ.
  • ಪಿಗ್ಮೆಂಟೇಶನ್​​​ ಅನ್ನು ಕಡಿಮೆ ಮಾಡಲು ಪ್ರಯೋಜನಕಾರಿ
  • ಇದು ಚರ್ಮದ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ತ್ರಿಫಲ ಪುಡಿಯನ್ನು ಬಳಸುವುದು ಹೇಗೆ?

ತ್ರಿಫಲ ಪುಡಿಯನ್ನು ಫೇಸ್ ಪ್ಯಾಕ್‌ನಂತೆ ಅಥವಾ ಫೇಸ್ ಮಾಸ್ಕ್‌ನಂತೆ ಬಳಸಬಹುದು. 2 ಚಮಚ ತ್ರಿಫಲ ಪುಡಿ, 2 ಟೀಸ್ಪೂನ್​​ ರೋಸ್​​ ವಾಟರ್​ ಎರಡನ್ನು ಮಿಶ್ರಣ ಮಾಡಿ ಮುಖದ ಮೇಲೆ ಹಚ್ಚಿ 10 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ಚರ್ಮದ ಅಲರ್ಜಿ ಇರುವವರು ಇದನ್ನು ಬಳಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ ನಂತರ ಬಳಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net