ನಿಮ್ಮಲ್ಲಿನ ಈ ಅಭ್ಯಾಸಗಳೆ ಕೂದಲಿನ ಹಾನಿಗೆ ಕಾರಣ; ನಿಮಗಾಗಿ ಹೆಲ್ತಿ ಟಿಪ್ಸ್​​ | Health Tips

Untitled design - 2024-10-30T194735.960
Published on

ಸುಂದರವಾದ, ಉದ್ದವಾದ, ದಪ್ಪ ಕೂದಲು ಬೇಕೆಂಬುದು ಎಲ್ಲರ ಇಷ್ಟವಾಗಿರುತ್ತದೆ. ನಮ್ಮ ಅಂದವನ್ನು ಹೆಚ್ಚಿಸುವುದರಲ್ಲಿ ಇದರ ಪಾತ್ರವೂ ಬಹಳಷ್ಟಿದೆ. ಪ್ರಸ್ತುತ ಜೀವನಶೈಲಿಯಲ್ಲಿ ಕೂದಲು ಉದುರುವಿಕೆ, ತೇಳುವಾಗಿ ಇರುವುದು, ಉದುರಿದ ಕೂದಲು ಬೆಳೆಯದಿರುವುದು ಹೀಗೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ.

ಹೇರ್ ಸೀರಮ್ ಆಗಿರಲಿ ಅಥವಾ ಹೇರ್ ಪ್ಯಾಕ್ ಆಗಿರಲಿ ನಮ್ಮ ಕೂದಲಿನ ಆರೈಕೆಗಾಗಿ ಏನು ಮಾಡಿದರು ಫಲಿತಾಂಶ ಮಾತ್ರ ನೀವು ಅಂದುಕೊಂಡಂತೆ ಬರುತ್ತಿಲ್ಲವೆ. ಕೂದಲಿನ ಆರೈಕೆ ಮಾಡುವತ್ತಾ ಗಮನ ಹರಿಸುತ್ತೇವೆ. ಆದರೆ ನಮಗೆ ಗೊತ್ತಿಲ್ಲದೆ ನಮ್ಮ ಕೂದಲಿಗೆ ಹಾನಿಯುಂಟುಮಾಡುವ ಕೆಲವು ಅಭ್ಯಾಸಗಳನ್ನು ಅಳವಡಿಸಿಕೊಳ್ಳುತ್ತೇವೆ.

ಕೂದಲಿನ ಆರೋಗ್ಯವನ್ನು ಹಾಳುಮಾಡುವ ಅಭ್ಯಾಸಗಳು

  • ನಾವು ಸುಂದರವಾಗಿ ಕಾಣಬೇಕೆಂಬ ಕಾರಣಕ್ಕೆ ಬಳಸುವ ಉತ್ಪನ್ನಗಳು. ಇದು ನಮ್ಮ ಕೆಟ್ಟ ಅಭ್ಯಾಸವಾಗಿದೆ. ನೀವು ತಪ್ಪು ಉತ್ಪನ್ನವನ್ನು ಬಳಸಿದಾಗ ಅದು ನಿಮ್ಮ ಕೂದಲು ಮತ್ತು ನೆತ್ತಿಗೆ ಹೊಂದಿಕೆಯಾಗುವುದಿಲ್ಲ. ಆಗ ಕೂದಲು ಉದುರುವಿಕೆ ಆರಂಭವಾಗಬಹುದು.
  • ನಿಯತಕಾಲಿಕವಾಗಿ ಟ್ರಿಮ್ ಮಾಡದಿರುವುದು ಸ್ಪ್ಲಿಟ್​​ ಎಂಡ್ಸ್​ಗೆ ಕಾರಣವಾಗಬಹುದು. ಆದ್ದರಿಂದ 6-8 ವಾರಗಳಿಗೊಮ್ಮೆ ಟ್ರಿಮ್ ಮಾಡಿ ಇದರಿಂದ ನಿಮ್ಮ ಕೂದಲು ಆರೋಗ್ಯಕರವಾಗಿ ಉಳಿಯುವುದರ ಜತೆಗೆ ಬೆಳೆಯುತ್ತದೆ.
  • ಸ್ನಾನ ಮಾಡಿ ಬಂದ ಬಳಿಕ ಕೂದಲಿನ ನೀರನ್ನು ಒರೆಸಲು ಯಾವ ಟವೆಲ್ ಬಳಸುತ್ತೇವೆ ಎಂಬುದು ಮುಖ್ಯ. ಮೃದುವಾದ ಮೈಕ್ರೋಫೈಬರ್ ಟವೆಲ್ ಬಳಸಿದರೆ ಉತ್ತಮ. ಇದು ಕೂದಲಿನ ಆರೋಗ್ಯ ಮತ್ತು ಹೊಳಪನ್ನು ಸುಧಾರಿಸುತ್ತದೆ ಮತ್ತು ಸುಕ್ಕುಗಟ್ಟುವುದನ್ನು ತಡೆಯುತ್ತದೆ.
  • ಪೋನಿಟೇಲ್ ಹಾಕುವಾಗ ಕೂದಲು ತುಂಡಾಗಬಹುದು. ಮತ್ತು ಅದು ನಿಮ್ಮ ಕೂದಲನ್ನು ಹಿಂದಕ್ಕೆ ಎಳೆಯುತ್ತದೆ. ಪೋನಿಟೇಲ್ ಅನ್ನು ತುಂಬಾ ಎತ್ತರವಾಗಿ ಹಾಕಬೇಡಿ.ಕೂದಲಿನ ರಂಧ್ರಗಳನ್ನು ಎಳೆದು ಹಾನಿಯನ್ನು ಉಂಟುಮಾಡಬಹುದು.
  • ಆರೋಗ್ಯವಂತ ಕೂದಲಿಗೆ ಕೆರಾಟಿನ್​ ಮುಖ್ಯವಾಗುತ್ತದೆ. ಇದು ಒಂದು ರೀತಿಯ ಪ್ರೋಟೀನ್ ಆಗಿದೆ. ನಮ್ಮ ಕೂದಲು ದುರ್ಬಲಗೊಳ್ಳಲು ಕಾರಣವೆಂದರೆ ಅವುಗಳಲ್ಲಿನ ಪ್ರೋಟೀನ್ ಕೊರತೆ. ಆದ್ದರಿಂದ ನೀವು ವಿಶೇಷವಾಗಿ ನಿಮ್ಮ ಆಹಾರದಲ್ಲಿ ಪ್ರೋಟೀನ್ ಭರಿತ ಆಹಾರವನ್ನು ಸೇರಿಸಿಕೊಳ್ಳಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net