ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ಪದಾರ್ಥಗಳು ನಿಮ್ಮ ಮೊದಲ ಆದ್ಯತೆಯಾಗಿರಲಿ | Health Tips

Untitled design - 2024-11-03T200314.046
Published on

ಪ್ರಸ್ತುತ ಕಳಪೆ ಜೀವನಶೈಲಿ, ಹವಾಮಾನ ಬದಲಾವಣೆ ಹೀಗೆ ಒಂದಲ್ಲಾ ಒಂದು ಕಾರಣಕ್ಕೆ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಇತ್ತೀಚೆಗೆ ಕೆಮ್ಮು, ನೆಗಡಿ, ಶೀತ ಮುಂತಾದ ಸಮಸ್ಯೆಗಳು ಸಾಮಾನ್ಯವಾಗಿದೆ. ಈ ಸಮಯದಲ್ಲಿ ರೋಗನಿರೋಧಕ ಶಕ್ತಿ ಸ್ವಲ್ಪ ದುರ್ಬಲವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವತ್ತ ಗಮನ ಹರಿಸಬೇಕು. ಈ ಸಮಯದಲ್ಲಿ ನೀವು ಯಾವ ಆಹಾರ ಸೇವಿಸುತ್ತೀರಿ ಎಂಬುದು ಮುಖ್ಯವಾಗಿರುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಯಾವ ಆಹಾರ ಸೇವಿಸಬೇಕು ಎಂಬುದನ್ನು ಇಲ್ಲಿ ತಿಳಿಸಲಾಗಿದೆ. (Health Tips)

ತರಕಾರಿಗಳು ಮತ್ತು ಗಿಡಮೂಲಿಕೆಗಳು ಜೀವಸತ್ವಗಳು, ಖನಿಜಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಇದು ದೇಹದ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು ಅವಶ್ಯಕವಾಗಿದೆ. ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ತರಕಾರಿಗಳು ತುಂಬಾ ಸಹಾಯ ಮಾಡುತ್ತವೆ.

ಪಾಲಕ್ ಸೊಪ್ಪು

ಪಾಲಕ್ ಸೊಪ್ಪನ್ನು ಸೇವಿಸುವುದು ತುಂಬಾ ಪ್ರಯೋಜನಕಾರಿ. ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಇದು ಪ್ರಯೋಜನಕಾರಿ ಮಾತ್ರವಲ್ಲ, ಇದನ್ನು ಸೇವಿಸುವುದರಿಂದ ನಮ್ಮ ಚರ್ಮ ಮತ್ತು ಕೂದಲಿಗೆ ಉತ್ತಮ ಪ್ರಯೋಜನಗಳನ್ನು ನೀಡುತ್ತದೆ. ಪಾಲಕ್ ಸೊಪ್ಪು ವಿಟಮಿನ್ ಎ, ವಿಟಮಿನ್ ಸಿ ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳಂತಹ ಅನೇಕ ಪೌಷ್ಟಿಕಾಂಶಗಳನ್ನು ಹೊಂದಿದೆ. ಇದು ನಿಮ್ಮನ್ನು ರೋಗಗಳಿಂದ ದೂರವಿರಿಸಲು ಸಹಾಯ ಮಾಡುತ್ತದೆ

ಬಾಳೆಹಣ್ಣು

ಬಾಳೆಹಣ್ಣು ಪೌಷ್ಟಿಕಾಂಶದ ಉಗ್ರಾಣವಾಗಿದೆ. ನೀವು ಇದನ್ನು ಸಲಾಡ್ ರೂಪದಲ್ಲಿ ಬಳಸಬಹುದು ಅಥವಾ ಸ್ವಲ್ಪ ಉಪ್ಪು ಸೇರಿಸಿದ ನಂತರ ಅದನ್ನು ತಿನ್ನಬಹುದು. ಬೇಯಿಸುವ ಮೂಲಕವೂ ತಿನ್ನಬಹುದು. ವಿಟಮಿನ್ ಕೆ, ವಿಟಮಿನ್ ಎ ಮತ್ತು ವಿಟಮಿನ್ ಸಿ ನಂತಹ ಅನೇಕ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಹಸಿರು ಬೀನ್ಸ್​​

ಬೀನ್ಸ್​​​ ಪೌಷ್ಟಿಕಾಂಶದ ನಿಧಿಯಾಗಿದೆ. ಅವುಗಳಲ್ಲಿ ಕ್ಯಾಲೊರಿಗಳ ಪ್ರಮಾಣವು ತುಂಬಾ ಕಡಿಮೆಯಾಗಿದೆ ಮತ್ತು ಇದು ತೂಕವನ್ನು ಕಡಿಮೆ ಮಾಡಲು ನಿಮಗೆ ಸಾಕಷ್ಟು ಸಹಾಯ ಮಾಡುತ್ತದೆ. ಇದು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ವಿಟಮಿನ್ ಎ ಮತ್ತು ಸಿ ಯಂತಹ ಪೌಷ್ಟಿಕಾಂಶದ ಅಂಶಗಳನ್ನು ಒಳಗೊಂಡಿದೆ. ನಿಮ್ಮ ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.

ಗಿಡಮೂಲಿಕೆ ಪ್ರಯೋಜನ

ತುಳಸಿ, ದಾಲ್ಚಿನ್ನಿ, ಫೆನ್ನೆಲ್, ಶುಂಠಿ, ಇತ್ಯಾದಿ ಸೇರಿದಂತೆ ಅನೇಕ ಗಿಡಮೂಲಿಕೆಗಳನ್ನು ಸೇವಿಸಬಹುದು. ಇದ್ಉ ನಮ್ಮ ದೇಹವನ್ನು ಒಳಗಿನಿಂದ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net