ಬೋಳು ತಲೆ ನಿಮ್ಮನ್ನು ಕಾಡುತ್ತಿದೆಯೇ?; ಈ ಸಮಸ್ಯೆಗೆ ಸಿಂಪಲ್​ ಪರಿಹಾರ ಇಲ್ಲಿದೆ.. | Health Tips

Untitled-design-4-2
Published on

ಸುಂದರವಾದ ಕೇಶರಾಶಿಯು ಅಂದವನ್ನು ಹೆಚ್ಚಿಸುತ್ತದೆ. ತಲೆಗೂದಲು ಉದುರುವಿಕೆ ಪ್ರಸ್ತುತ ಎಲ್ಲರನ್ನೂ ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆಯಾಗಿದೆ. ಅದಕ್ಕೆ ಜೀವನಶೈಲಿ, ಆಹಾರಕ್ರಮ ಇನ್ನೂ ಹಲವು ಕಾರಣಗಳಿರಬಹುದು. ಅದರಲ್ಲೂ ಇದರಿಂದ ಹೆಚ್ಚು ಮುಜುಗರ ಅನುಭವಿಸುವವರು ಹುಡುಗರು. ಹುಡುಗಿಯರಿಗೆ ತಲೆಕೂದಲು ಉದುರಿ ಅಂದ ಹಾಳು ಮಾಡುತ್ತದೆ ಎಂಬ ಚಿಂತೆ ಕಾಡುವುದು ಕಡಿಮೆ. ಏಕೆಂದರೆ ಹುಡುಗಿಯರಿಗೆ ಉದ್ದನೆಯ ಕೂದಲಿರುವ ಕಾರಣ ಕೂದಲು ಉದುರಿದರು ಬೋಳಾಗಿ ಕಾಣುವುದಿಲ್ಲ. ಆದರೆ ಹುಡುಗರಿಗೆ ಹಾಗಲ್ಲ, ಸ್ವಲ್ಪ ಕೂದಲು ಉದುರಿದರು ತಲೆ ಬೋಳಾಗಿ ಕಾಣಲು ಪ್ರಾರಂಭಿಸುತ್ತದೆ.

ಈ ಸಮಸ್ಯೆಗೆ ಪರಿಹಾರ ಏನು ಎಂದು ಆಲೋಚಿಸುತ್ತಿದ್ದೀರಾ. ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸಲು ಮತ್ತು ಕೂದಲು ಉದುರುವಿಕೆಯನ್ನು ತಡೆಯುವುದು ಹೇಗೆ ಎಂದು ಯೋಚಿಸುತ್ತಿರುವವರಿಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಏನೆಂದರೆ ಮನೆಯಲ್ಲೇ ಇರುವ ಪದಾರ್ಥಗಳನ್ನು ಬಳಸಿ ಕೂದಲು ಉದುರುವಿಕೆಯನ್ನ ತಡೆಯಲು ಟೋನರ್​ ತಯಾರಿಸುವುದುನ್ನು ಇಲ್ಲಿ ತಿಳಿಸಲಾಗಿದೆ. ಈ ಟೋನರ್​ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಟೋನರ್ ತಯಾರಿಸಲು ಬೇಕಾಗಿರುವ ಪದಾರ್ಥಗಳು:

  • ಕಲೋಂಜಿ: 1 ಟೀಸ್ಪೂನ್
  • ಮೆಂತ್ಯ: 1 ಟೀಸ್ಪೂನ್
  • ನೀರು: 1 ಗ್ಲಾಸ್
  • ಸಾಸಿವೆ ಎಣ್ಣೆ: 1 ಟೀಸ್ಪೂನ್
  • ಸ್ಪ್ರೇ ಬಾಟಲ್: 1

ಟೋನರ್​ ತಯಾರಿಸುವ ವಿಧಾನ:

ಮೊದಲಿಗೆ ಪ್ಯಾನ್ ಅದನ್ನು ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ನಂತರ ಬಾಣಲೆಯಲ್ಲಿ 1 ಚಮಚ ಕಲೋಂಜಿ ಬೀಜಗಳು, 1 ಚಮಚ ಮೆಂತ್ಯ ಮತ್ತು ಒಂದು ಲೋಟ ನೀರು ಸೇರಿಸಿ ಕುದಿಯಲು ಬಿಡಿ. ನೀರು ಕುದಿಯಲು ಪ್ರಾರಂಭಿಸಿದಾಗ ಅದಕ್ಕೆ 1 ಚಮಚ ಸಾಸಿವೆ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಬಳಿಕ 5 ನಿಮಿಷ ಚೆನ್ನಾಗಿ ಕುದಿಯಲು ಬಿಡಿ. ಚೆನ್ನಾಗಿ ಕುದಿಯುತ್ತಾ ಅದರ ಗಂಧ ಬರುವಾಗ ಸಿದ್ಧವಾಗಿದೆ ಎಂದು ಅರ್ಥಮಾಡಿಕೊಳ್ಳಿ. ಬಳಿಕ ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ.
ರಾತ್ರಿ ಮಲಗುವ ಮೊದಲು ಇದನ್ನು ಬಳಸಿ ಬೆಳಗ್ಗೆ ಕೂದಲನ್ನು ತೊಳೆಯಿರಿ. ಈ ಟೋನರ್ ಸಹಾಯದಿಂದ ನಿಮ್ಮ ಕೂದಲು ಬೆಳೆಯುತ್ತದೆ, ಕೂದಲು ಉದುರುವುದು ಸಹ ನಿಲ್ಲುತ್ತದೆ ಮತ್ತು ಹೊಸ ಕೂದಲು ಕೂಡ ಬೆಳೆಯಲು ಪ್ರಾರಂಭಿಸುತ್ತದೆ. ನಿಮ್ಮದು ಸೆನ್ಸಿಟಿವ್​​ ಸ್ಕಿನ್​ ಆಗಿದ್ದರೆ ಬಳಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net