ಕಾರ್ನ್​ಫ್ಲೋರ್​​​ ಫೇಸ್​ಪ್ಯಾಕ್​​; ಗ್ಲೋಯಿಂಗ್​ ಸ್ಕಿನ್​​ ಪಡೆಯಲು ಸಿಂಪಲ್​ ಮಾರ್ಗ | Health Tips

Mark-Zuckerberg-worlds-second-richest-person-does-another-Shah-Jahan-for-wife-Priscilla-2
Published on

ಅಂದವಾಗಿ ಕಾಣಲು ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ. ಹೊಳೆಯುವ ಮತ್ತು ಮೃದು ತ್ವಚೆ ನಮ್ಮದಾಗಬೇಕು ಎಂಬ ಬಯಕೆ ಎಲ್ಲರಲ್ಲೂ ಇರುತ್ತದೆ. ಇಲ್ಲಿ ನಾವು ನಿಮಗೆ ಮನೆಯಲ್ಲೇ ಸಿದ್ಧಪಡಿಸಿ ಬಳಸಬಹುದಾದ ಫೇಸ್​ಪ್ಯಾಕ್​ ಕುರಿತು ಹೇಳುತ್ತಿದ್ದೇವೆ. ಕಾರ್ನ್​ಫ್ಲೋರ್​​​ ಕೇವಲ ಅಡುಗೆ ಮನೆಗೆ ಮಾತ್ರವಲ್ಲ ಈಗ ನಮ್ಮ ಸೌಂದರ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಇದು ನೈಸರ್ಗಿಕ ಎಕ್ಸ್‌ಫೋಲಿಯಂಟ್ ಆಗಿದ್ದು ಚರ್ಮವನ್ನು ಮೃದುವಾಗಿ ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.(Health Tips)

ಕಾರ್ನ್​​ಫ್ಲೋರ್ ನೈಸರ್ಗಿಕ ಎಫ್ಫೋಲಿಯೇಟಿಂಗ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವ ಮೂಲಕ ಚರ್ಮವನ್ನು ಸ್ವಚ್ಛಗೊಳಿಸುತ್ತದೆ. ಹಾಗಾದ್ರೆ ಮೊದಲಿಗೆ ಕಾರ್ನ್​ಫ್ಲೋರ್​ ಫೇಸ್​ಪ್ಯಾಕ್​​ನಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ.

  • ರಕ್ತ ಪರಿಚಲನೆಯನ್ನು ಹೆಚ್ಚಿಸಿ ಮುಖಕ್ಕೆ ಕಾಂತಿ ತರಲು ಸಹಾಯ ಮಾಡುತ್ತದೆ.
  • ಕಾರ್ನ್​​ಫ್ಲೋರ್ ವಿಟಮಿನ್ ಮತ್ತು ಮಿನರಲ್​​ ಗಳನ್ನು ಹೊಂದಿದ್ದು ಚರ್ಮದ ಪೌಷ್ಟಿಕಾಂಶದ ಕೊರತೆಯನ್ನು ನೀಗಿಸುತ್ತದೆ ಮತ್ತು ಆರೋಗ್ಯಕರವಾಗಿರಿಸುತ್ತದೆ.
  • ಮೊಡವೆಗಳನ್ನು ಕಡಿಮೆ ಮಾಡಲು ಸಹ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.
  • ಚರ್ಮವನ್ನು ಬಿಗಿಗೊಳಿಸಲು ಸಹ ಪ್ರಯೋಜನಕಾರಿಯಾಗಿದೆ. ಇದು ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕಾರ್ನ್​ಫ್ಲೋರ್​ ಫೇಸ್​ಪ್ಯಾಕ್​​ ಮಾಡಲು ಬೇಕಾಗುವ ಪದಾರ್ಥಗಳು:

  • ಕಾರ್ನ್​​ಫ್ಲೋರ್​​- 2 ಚಮಚ
  • ಮೊಸರು- 1 ಚಮಚ
  • ರೋಸ್​​ ವಾಟರ್​- 3 ಚಮಚ
  • ಜೇನುತುಪ್ಪ- 1 ಟೀಸ್ಪೂನ್

ಫೇಸ್ ಪ್ಯಾಕ್ ತಯಾರಿಸುವುದು ಹೇಗೆ?:

ಮೊದಲಿಗೆ ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಕಾರ್ನ್​​ಫ್ಲೋರ್​​ ಮತ್ತು ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ರೋಸ್ ವಾಟರ್ ಮತ್ತು ಜೇನುತುಪ್ಪವನ್ನು ಸೇರಿಸಿ ನಯವಾದ ಪೇಸ್ಟ್ ತಯಾರಿಸಿ. ಸಿದ್ಧಪಡಿಸಿದ ಪ್ಯಾಕ್​ ಅನ್ನು ಮುಖಕ್ಕೆ ಅಪ್ಲೈ ಮಾಡಿ ಬಳಿಕ 15 ನಿಮಿಷಗಳ ಕಾಲ ಬಿಡಿ. ಸಮಯ ಮುಗಿದ ನಂತರ ನಿಮ್ಮ ಮುಖವನ್ನು ಸಾಮಾನ್ಯ ನೀರಿನಿಂದ ತೊಳೆಯಿರಿ. ಒಮ್ಮೆ ಬಳಸಿದ ನಂತರ ನಿಮ್ಮ ಮುಖದ ಮೇಲೆ ಸಂಗ್ರಹವಾಗಿರುವ ಕೊಳೆಯು ಹೇಗೆ ನಿವಾರಣೆಯಾಗುತ್ತದೆ ಎಂಬುದನ್ನು ನೋಡಿ. ನೀವು ವಾರಕ್ಕೆ ಎರಡು ಬಾರಿ ಇದನ್ನು ಬಳಿಸಿ. ಒಂದು ವೇಳೆ ನಿಮ್ಮ ಸ್ಕಿನ್​​ ಸೂಕ್ಷ್ಮವಾಗಿದ್ದರೆ ವೈದ್ಯರನ್ನು ಸಂಪರ್ಕಿಸಿದ ನಂತರ ಬಳಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net