ಬಿರುಕು ಪಾದಗಳು ನಿಮ್ಮನ್ನು ಚಿಂತಿಸುವಂತೆ ಮಾಡಿದೆಯೇ?; ಸಮಸ್ಯೆ ಪರಿಹಾರಕ್ಕೆ ಇಲ್ಲಿದೆ​ Health Tips

foot 3
Published on

ಬಿರುಕು ಪಾದಗಳು ನಿಮ್ಮನ್ನು ಚಿಂತಿಸುವಂತೆ ಮಾಡಿದೆಯೇ?; ಸಮಸ್ಯೆ ಪರಿಹಾರಕ್ಕೆ ಇಲ್ಲಿದೆ​ Health Tips

ತೆಂಗಿನ ಎಣ್ಣೆ ಔಷಧಿ ಗುಣಗಳಿಂದ ಕೂಡಿದೆ. ಇದರಲ್ಲಿ ಉತ್ಕರ್ಷಣ ನಿರೋಧಕ, ಉರಿಯೂತ ನಿವಾರಕ, ಶಿಲೀಂಧ್ರ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಈ ಎಲ್ಲಾ ಗುಣಗಳು ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಿದೆ. (Health Tips)

ತೆಂಗಿನ ಎಣ್ಣೆಯನ್ನು ಕೂದಲು ಸದೃಢವಾಗಿ ಬೆಳೆಯಲು ಬಳಸುತ್ತಾರೆ. ಅದಷ್ಟಕ್ಕೆ ಅಲ್ಲಾ ಚರ್ಮದ ಆರೋಗ್ಯಕ್ಕೂ ತೆಂಗಿನಎಣ್ಣೆಯನ್ನು ಬಳಸಬಹುದು. ತೆಂಗಿನಎಣ್ಣೆಯನ್ನು ಬಳಸಿದರೆ ಚರ್ಮ ಕಪ್ಪಾಗುತ್ತದೆ ಎಂಬ ತಪ್ಪು ಗ್ರಹಿಕೆ ಕೆಲವಿರಿಗೆ ಇದೆ. ಆದರೆ ತೆಂಗಿನಎಣ್ಣೆ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಕೈ ಮತ್ತು ಕಾಲುಗಳು ತುಂಬಾ ಒರಟಾಗಿವೆ ಎಂದು ಚಿಂತಿಸುತ್ತಿದ್ದೀರಾ? ಕೈ ಮತ್ತು ಪಾದಗಳು ಮೃದುಗೊಳ್ಳುವಂತೆ ಮಾಡಲು ಇದು ಮನೆಯಲ್ಲೇ ಮಾಡಬಹುದಾದ ಸುಲಭ ವಿಧಾನವಾಗಿದೆ.

ಗ್ಲಿಸರಿನ್ ಮತ್ತು ನಿಂಬೆ ರಸವನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಬಳಸಬಹುದು. ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಗ್ಲಿಸರಿನ್ ಮತ್ತು ನಿಂಬೆ ರಸ, ತೆಂಗಿನ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಇದನ್ನು ಪ್ರತಿ ರಾತ್ರಿ ಮಲಗುವ ಮುನ್ನ ನಿಮ್ಮ ಕೈ ಮತ್ತು ಪಾದಗಳಿಗೆ ಹಚ್ಚಿಕೊಳ್ಳಿ. ಒಂದು ವಾರದಲ್ಲಿ ಬಿರುಕು ಬಿಟ್ಟಿರುವ ಪಾದಳು, ಒರಟಾಗಿರುವ ನಿಮ್ಮ ಕೈ ಮತ್ತು ಪಾದಗಳು ಮೃದುವಾಗುತ್ತವೆ.

ತೆಂಗಿನ ಎಣ್ಣೆಯಲ್ಲಿ ಗ್ಲಿಸರಿನ್​ ಬೆರೆಸಿ ಬಳಸುವುದರಿಂದ ಹೊರಚರ್ಮದ ಪದರವು ದಪ್ಪವಾಗುತ್ತದೆ. ಇದು ಯಾವುದೇ ರಾಸಾಯನಿಕಗಳು ಮತ್ತು ಕೊಳಕುಗಳಂತಹ ವಸ್ತುಗಳ ಸಂಪರ್ಕಕ್ಕೆ ಬರದಂತೆ ತಡೆಯುತ್ತ. ನಿಂಬೆರಸ ಸೇರಿಸಿರುವುದರಿಂದ ತ್ವಚೆಯನ್ನು ಕಾಂತಿಯುತಗೊಳಿಸಲು ಮತ್ತು ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಗಮನಿಸಿ: ಇದನ್ನು ಮುಖಕ್ಕೆ ಹಚ್ಚಬೇಡಿ. ಕೈ ಮತ್ತು ಪಾದಗಳಿಗೆ ಮಾತ್ರ ಬಳಸಬಹುದು. ನಿಮ್ಮ ಚರ್ಮವು ಸೂಕ್ಷ್ಮವಾಗಿದ್ದರೆ ಇದನ್ನು ಬಳಸುವ ಮುನ್ನ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net