

ಮನೆಯಲ್ಲಿ ಮಾಡುವ ಯಾವುದೇ ರುಚಿಕರ ಅಡುಗೆಯು ಜೀರಿಗೆ ಇಲ್ಲದೆ ಪೂರ್ಣಗೊಳ್ಳುವುದಿಲ್ಲ. ಜೀರಿಗೆಯನ್ನು ಸೇರಿಸುವುದರಿಂದ ಆಹಾರದ ರುಚಿ ಬದಲಾಗುತ್ತದೆ. ಜೀರಿಗೆಯ ಬಳಕೆಯಿಂದ ನಾವು ರುಚಿಯನ್ನು ಹೆಚ್ಚಿಸುವುದರ ಜತೆಗೆ ಹಲವಾರು ಪ್ರಯೋಜನಗಳನ್ನು ಪಡೆಯುತ್ತೇವೆ. ಜೀರಿಗೆಯನ್ನು ಅನೇಕ ರೋಗಗಳನ್ನು ಗುಣಪಡಿಸಲು ಸಹ ಬಳಸಬಹುದು.(Health Tips )
ಆಯುರ್ವೇದದಲ್ಲಿ ಜೀರಿಗೆಯನ್ನು ಪ್ರಮುಖ ಔಷಧವೆಂದು ಪರಿಗಣಿಸಲಾಗಿದೆ. ಜೀರಿಗೆಯಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶ ಇದೆ. ಅಲ್ಲದೆ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು, ಕೊಬ್ಬುಗಳು ಮತ್ತು ಫೈಬರ್‌ಗಳು ಸಮೃದ್ಧವಾಗಿವೆ. ಆಯುರ್ವೇದದಲ್ಲಿ ಮೂರು ವಿಧದ ಜೀರಿಗೆಯನ್ನು ಉಲ್ಲೇಖಿಸಲಾಗಿದೆ. ಇದರಲ್ಲಿ ಕಪ್ಪು ಜೀರಿಗೆ, ಬಿಳಿ ಜೀರಿಗೆ ಮತ್ತು ಅರಣ್ಯ ಜೀರಿಗೆ (ಇದು ಕಾಡು ಜೀರಿಗೆ) . ಬಿಳಿ ಜೀರಿಗೆಯನ್ನು ಹೆಚ್ಚಾಗಿ ಭಾರತೀಯ ಮನೆಗಳಲ್ಲಿ ಮಸಾಲೆಯಾಗಿ ಬಳಸಲಾಗುತ್ತದೆ.
ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ: ಜೀರಿಗೆಯಲ್ಲಿ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳಂತಹ ಅಂಶಗಳಿವೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದು ಸ್ವತಂತ್ರ ರಾಡಿಕಲ್ ಮತ್ತು ಅನೇಕ ರೀತಿಯ ಸೋಂಕುಗಳಿಂದ ಉಂಟಾಗುವ ಹಾನಿಯಿಂದ ನಮ್ಮ ದೇಹವನ್ನು ರಕ್ಷಿಸಲು ಸಹಾಯ ಮಾಡುತ್ತದೆ.‘
ತೂಕ ಇಳಿಸಲು ಸಹಕಾರಿ: ಜೀರಿಗೆಯನ್ನು ಬಳಸುವುದರಿಂದ ನಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ದೇಹದಲ್ಲಿರುವ ಹೆಚ್ಚುವರಿ ಕೊಬ್ಬು ತ್ವರಿತವಾಗಿ ಹೊರಹಾಕಲ್ಪಡುತ್ತದೆ. ಇದನ್ನು ಸೇವಿಸುವುದರಿಂದ ತೂಕವನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು.
ಅಜೀರ್ಣ ನಿವಾರಣೆ: ಜೀರಿಗೆಯ ಸೇವನೆಯಿಂದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಗುಣವಾಗುತ್ತವೆ. ಕೊತ್ತಂಬರಿ ಸೊಪ್ಪು ಮತ್ತು ಜೀರಿಗೆಯನ್ನು ತುಪ್ಪದಲ್ಲಿ ಬೇಯಿಸಿ ಊಟಕ್ಕೆ ಅರ್ಧ ಗಂಟೆ ಮೊದಲು ತಿಂದರೆ ಅದು ವಾತ ಪಿತ್ತ ದೋಷ ಮತ್ತು ಅಜೀರ್ಣ ನಿವಾರಣೆಗೆ ಪ್ರಯೋಜನಕಾರಿಯಾಗಿದೆ.
ಜ್ವರವನ್ನು ಕಡಿಮೆ ಮಾಡುತ್ತದೆ: ಜೀರಿಗೆಯಲ್ಲಿ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕಂಡುಬರುತ್ತವೆ. ಯಾರಿಗಾದರೂ ಮಲಬದ್ಧತೆಯೊಂದಿಗೆ ಜ್ವರವಿದ್ದರೆ ಜೀರಿಗೆಯನ್ನು ಬಳಸಿ ಆಯುರ್ವೇದ ಪರಿಹಾರದಿಂದ ಗುಣಪಡಿಸಬಹುದು. ಜೀರಿಗೆಯನ್ನು ಹಸುವಿನ ಹಾಲಿನಲ್ಲಿ ನೆನೆಸಿ ಒಣಗಲು ಬಿಡಿ. ಅದು ಆರಿದ ನಂತರ ಪುಡಿ ಮಾಡಿ ಅದಕ್ಕೆ ಸಕ್ಕರೆ ಹಾಕಿ. ಇದನ್ನು ಸೇವಿಸುವುದರಿಂದ ತೀವ್ರ ಜ್ವರದಲ್ಲಿಯೂ ಉಪಶಮನ ದೊರೆಯುತ್ತದೆ ಹಾಗೂ ದೇಹದಲ್ಲಿನ ದೌರ್ಬಲ್ಯ ದೂರವಾಗುತ್ತದೆ. ಇದನ್ನು ಬಳಸುವ ಮುನ್ನ ಒಮ್ಮೆ ವೈದ್ಯರನ್ನು ಸಂಪರ್ಕಿಸಿ.
ಹಸಿವನ್ನು ಹೆಚ್ಚಿಸುತ್ತದೆ: ಕೆಲವೊಮ್ಮೆ ಕೆಲ ದೈಹಿಕ ದೌರ್ಬಲ್ಯದಿಂದ ಹಸಿವಿನ ಕೊರತೆ ಪ್ರಾರಂಭವಾಗುತ್ತದೆ. ಜ್ವರದ ಸಮಯದಲ್ಲಿಯೂ ಹಸಿವಿನ ಕೊರತೆಯ ಸಮಸ್ಯೆ ಇರುತ್ತದೆ. 3 ಗ್ರಾಂ ಜೀರಿಗೆಯನ್ನು ಸ್ವಲ್ಪ ನಿಂಬೆ ರಸದೊಂದಿಗೆ ಬೆರೆಸಿ ಉಪ್ಪಿನೊಂದಿಗೆ ಸೇವಿಸಿದರೆ ಹಸಿವು ಹೆಚ್ಚಾಗುತ್ತದೆ. ಯಾರಿಗಾದರೂ ಜ್ವರ ಬಂದರೆ ಸ್ವಲ್ಪ ಜೀರಿಗೆ ಕಷಾಯ ಹಾಕಿ ಬಾಯಿ ಮುಕ್ಕಳಿಸಿದರೆ ಹಸಿವು ಕಡಿಮೆಯಾಗುವುದಿಲ್ಲ.
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ: ಜೀರಿಗೆಯನ್ನು ಸೇವಿಸುವುದರಿಂದ, ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಇದು ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ. ಮಧುಮೇಹ ರೋಗಿಗಳು ಜೀರಿಗೆಯಿಂದ ಪ್ರಯೋಜನ ಪಡೆಯಬಹುದು.
ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ: ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಾಯಕವಾಗಿದೆಯೆಂದು ಸಾಬೀತುಪಡಿಸುತ್ತದೆ. ಇದು ಹೃದಯ ಸಂಬಂಧಿ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ರಕ್ತದೊತ್ತಡವನ್ನು ಸಮತೋಲನಗೊಳಿಸುತ್ತದೆ ಮತ್ತು ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ.