Health Tips | ಚಾಕೊಲೇಟ್​ ತಿನ್ನುವುದರಿಂದ ಮೊಡವೆ ಬರುತ್ತದೆಯೇ; ತಜ್ಞರು ಹೇಳುವುದೇನು?

Untitled-design-2024-09-25T203915.692
Published on

ಇತ್ತೀಚೆಗೆ ಮೊಡವೆ ಸಮಸ್ಯೆಗಳ ಬಗ್ಗೆ ಸಾಕಷ್ಟು ಕೇಳುತ್ತಿದ್ದೇವೆ. ನಾನಾ ಕಾರಣಗಳಿಗೆ ಮೊಡವೆಗಳು ಬರುಬಹುದು. ಆದರೆ 60 ವರ್ಷಗಳ ಹಿಂದೆ ಚಾಕೊಲೇಟ್‌ ತಿನ್ನುವುದರಿಂದ ಮೊಡವೆಗಳು ಬರುತ್ತವೆ ಎಂದು ಮೊದಲ ಬಾರಿಗೆ ಹೇಳಲಾಗಿತ್ತು. 60 ವರ್ಷಗಳ ನಂತರವೂ ಅನೇಕ ಜನರು ಚಾಕೊಲೇಟ್ ತಿನ್ನುವುದರಿಂದ ಮೊಡವೆ ಉಂಟಾಗುತ್ತದೆ ಎಂದು ನಂಬುತ್ತಾರೆ. ಹಾಗಾದ್ರೆ ಚಾಕೊಲೇಟ್​​ ತಿನ್ನುವುದರಿಂದ ಮುಖದ ಮೇಲೆ ಕಲೆಗಳು ಅಥವಾ ಮೊಡವೆಗಳು ಬರಬಹುದು ಎಂಬ ಮಾತು ನಿಜವೇ? ಅಥವಾ ಮಕ್ಕಳನ್ನು ಚಾಕೊಲೇಟ್​ನಿಂದ ದೂರವಿಡಲು ಪಾಲಕರು ಆಡುವ ಸುಳ್ಳೇ? ಸಂಶೋಧನೆ ಹೇಳಿರುವುದೇನು ಎಂಬುದನ್ನು ಇಲ್ಲಿ ತಿಳಿಸಲಾಗಿದೆ. Health Tips

ಚಾಕೊಲೇಟ್ ಮತ್ತು ಮೊಡವೆಗಳ ನಡುವಿನ ಸಂಬಂಧದ ಕುರಿತು 1960ರ ದಶಕದಲ್ಲಿ ಹಲವಾರು ಅಧ್ಯಯನಗಳನ್ನು ಮಾಡಲಾಯಿತು. ಆದರೆ ಚಾಕೊಲೇಟ್ ತಿಂದರೆ ಮೊಡವೆ ಉಂಟಾಗುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳು ಇಲ್ಲ ಎಂದು ಸಮೀಕ್ಷೆಯೊಂದು ತಿಳಿಸಿದೆ. ಅಂದು ನಡೆದ ಅತಿ ದೊಡ್ಡ ಸಮೀಕ್ಷೆ ಇದಾಗಿದೆ ಎನ್ನಲಾಗಿದೆ. ಕೇವಲ 65 ಜನರನ್ನು ಸಮೀಕ್ಷೆಗೆ ಒಳಪಡಿಸಲಾಇತ್ತು ಎಂಬ ಕಾರಣಕ್ಕೆ ಫಲಿತಾಂಶದ ವಿರುದ್ಧ ಟೀಕೆ ವ್ಯಕ್ತವಾಗಿತ್ತು.

ಮೊಡವೆಗಳಿಗೆ ಚಾಕೊಲೇಟ್‌ಗಳು ಸಹ ಕಾರಣವಾಗಬಹುದು. ಆದರೆ ಇತ್ತೀಚಿನ ಅನೇಕ ಸಮೀಕ್ಷೆಗಳು ಮೊಡವೆಗಳು ಮುಖ್ಯವಾಗಿ ನಮ್ಮ ಆಹಾರದಿಂದ ಉಂಟಾಗುತ್ತವೆ ಎಂದು ತೋರಿಸುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಕೊಬ್ಬು, ಡೈರಿ ಉತ್ಪನ್ನಗಳು ಮತ್ತು ಸಕ್ಕರೆಯಲ್ಲಿ ಹೆಚ್ಚಿನ ಪಾಶ್ಚಿಮಾತ್ಯ ಆಹಾರಕ್ರಮವು ಕಾರಣವಾಗಿದೆ ಎಂದು ಹೇಳಲಾಗುತ್ತದೆ.

ಹದಿಹರೆಯದವರು ಅಥವಾ ವಯಸ್ಕರಲ್ಲಿ ದೀರ್ಘಕಾಲದ ಮೊಡವೆಗಳಿಗೆ ಜೆನೆಟಿಕ್ಸ್ ಮುಖ್ಯ ಕಾರಣವಾಗಿದೆ ಎಂದು ಲಂಡನ್ ಕಿಂಗ್ಸ್ ಕಾಲೇಜ್‌ನ ಕ್ಲಿನಿಕಲ್ ಉಪನ್ಯಾಸಕ ಮತ್ತು ಚರ್ಮರೋಗ ತಜ್ಞ ಬೀಬಿ ಡು-ಹರ್ಪುರ್ ಹೇಳುತ್ತಾರೆ. ಚರ್ಮವು ಡ್ರೈ ಆಗುವುದನ್ನು ತಡೆಯಲು ತೈಲ ಉತ್ಪಾದಿಸುವ ಗ್ರಂಥಿಗಳ ಪ್ರಮಾಣವು ನಮ್ಮ ವಂಶವಾಹಿಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅವರು ಹೇಳುತ್ತಾರೆ.

ಅದಷ್ಟೆ ಅಲ್ಲ ಮೊಡವೆಗಳು ಬರುಲು ನಮ್ಮ ಸುತ್ತಲಿನ ಪರಿಸರವೂ ಕಾರಣವಾಗಿರಬಹುದು. ಪ್ರಸ್ತುತ ನಾವು ಅನುಸರಿಸುತ್ತಿರುವ ಜೀವನಶೈಲಿ ನಮ್ಮ ದೇಹಕ್ಕೆ ಒಳ್ಳೆಯದಲ್ಲ. ಮೊಡವೆಗಳು ಅದೇ ವಿಷಯವನ್ನು ಹೇಳಲು ನಮ್ಮ ದೇಹವು ನೀಡುವ ಸಂಕೇತವಾಗಿದೆ ಎಂದು ಅವರು ಹೇಳಿದರು.

ಚಾಕೊಲೇಟ್‌ನಲ್ಲಿರುವ ವಿವಿಧ ಪದಾರ್ಥಗಳು ಮೊಡವೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ನೋಡಲು ಕೆಲವು ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ. ಆದರೆ ಅವರು ನಿಖರವಾದ ನಿರ್ಣಯಗಳನ್ನು ನೀಡಲು ಸಾಧ್ಯವಾಗಲಿಲ್ಲ. ಆದರೆ ಮೊಡವೆಗಳ ಮೇಲೆ ಶುದ್ಧ ಡಾರ್ಕ್ ಚಾಕೊಲೇಟ್ ಬೀರುವ ಪರಿಣಾಮದ ಬಗ್ಗೆ 2011 ರಲ್ಲಿ ಅಧ್ಯಯನವನ್ನು ನಡೆಸಲಾಯಿತು.

ಚಾಕೊಲೇಟ್‌ನಲ್ಲಿರುವ ಪ್ರತಿಯೊಂದು ಘಟಕಾಂಶವು ಮೊಡವೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನೋಡಲು ಸಂಶೋಧನೆ ಮಾಡಲಾಗಿದೆ. ಚಾಕೊಲೇಟ್‌ಗಳು ತೀವ್ರವಾದ ಮೊಡವೆ ಒಡೆಯುವಿಕೆಯ ಕಾರಣಗಳಲ್ಲಿ ಒಂದಾಗಿದೆ ಎಂದು ಕಂಡುಬಂದಿದೆ. ಆ ಸಂಶೋಧನೆಯ ಭಾಗವಾಗಿ ಕೇವಲ 10 ಜನರನ್ನು ಮಾತ್ರ ಸಂಶೋಧನೆ ಮಾಡಲಾಗಿದೆ. ಸಂಶೋಧನೆಯನ್ನು ದೊಡ್ಡ ಗುಂಪಿನಲ್ಲಿ ಮಾಡಲಾಗಿಲ್ಲವಾದ್ದರಿಂದ ಫಲಿತಾಂಶಗಳು ಚರ್ಚೆಯಲ್ಲೇ ಉಳಿದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net