

ಅನೇಕ ಆಹಾರಗಳಲ್ಲಿ ಕರಿಬೇವಿನ ಎಲೆಗಳನ್ನು ಬಳಸುವುದು ಗೊತ್ತೆ ಇದೆ. ಕರಿಬೇವಿನ ಎಲೆಯನ್ನು ಬಳಸುವುದರಿಂದ ಚಟ್ನಿ ಅಥವಾ ಸಾಂಬಾರ್ ತುಂಬಾ ರುಚಿಯಾಗಲಿದೆ. ಕರಿಬೇವು ರುಚಿ ಮತ್ತು ಸುವಾಸನೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಇದು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ಹೊಂದಿದೆ. ಕರಿಬೇವಿನ ಎಲೆಗಳು ಔಷಧೀಯ ಗುಣಗಳಿಂದ ಸಮೃದ್ಧವಾಗಿವೆ ಮತ್ತು ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳನ್ನು ಜಗಿಯುವುದು ತುಂಬಾ ಪ್ರಯೋಜನಕಾರಿ.
ಇದನ್ನು ಓದಿ:
ಕಬ್ಬಿಣಾಂಶ, ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಸಿ ಮುಂತಾದ ಅನೇಕ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಕರಿಬೇವಿನ ಎಲೆಗಳು ಅನೇಕ ದೈಹಿಕ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಕರಿಬೇವಿನ ಎಲೆಗಳನ್ನು ಸಿಹಿಬೇವು ಎಂದೂ ಕರೆಯುತ್ತಾರೆ. ನೀವು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 7 ರಿಂದ 8 ಕರಿಬೇವಿನ ಎಲೆಗಳನ್ನು ನೀರಿಗೆ ನೆನೆಹಾಕಿ ಬಳಿಕ ಅದನ್ನು ಅಗಿದು ತಿನ್ನುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು.