ಲಸ್ಸಿ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ? ತಿಳಿದ್ರೆ ದಿನನಿತ್ಯ ನೀವು ಲಸ್ಸಿ ಕುಡಿಯುತ್ತೀರಿ…

Untitled-design-89-1
Published on

ಬೇಸಿಗೆ ಬಂದ ತಕ್ಷಣ ಅನೇಕರು ಲಸ್ಸಿ ಕುಡಿಯಲು ಪ್ರಾರಂಭಿಸುತ್ತಾರೆ. ರುಚಿಯಲ್ಲಿ ಸಿಹಿ ಮತ್ತು ಹುಳಿ ಇರುವ ಲಸ್ಸಿಯನ್ನು ಬೇಸಿಗೆಯಲ್ಲಿ ಮಾತ್ರವಲ್ಲ ಎಲ್ಲ ಋತುವಿನಲ್ಲಿ ಕುಡಿಯಬಹುದು. ಕಾರ್ಬೋಹೈಡ್ರೇಟ್‌ಗಳು, ಸೋಡಿಯಂ, ಪ್ರೋಟೀನ್​​​, ಕ್ಯಾಲ್ಸಿಯಂ ಮತ್ತು ಫೈಬರ್‌ಗಳಿಂದ ಸಮೃದ್ಧವಾಗಿರುವ ಲಸ್ಸಿ ರುಚಿಕರವಾಗಿರುವುದರ ಜತೆಗೆ ಅನೇಕ ಪ್ರಯೋಜನಗಳನ್ನು ಹೊಂದಿದೆ. ಇದರಿಂದ ಆಗುವ ಲಾಭವನ್ನು ತಿಳಿದುಕೊಂಡರೆ ಲಸ್ಸಿಯನ್ನು ಕೇವಲ ರುಚಿಗಾಗಿ ಮಾತ್ರವಲ್ಲ ಆರೋಗ್ಯಕ್ಕಾಗಿಯೂ ಕುಡಿಯಲು ಪ್ರಾರಂಭಿಸುತ್ತೀರಿ.. ಏನಿದೆ ಪ್ರಯೋಜನ ಅಂತೀರಾ? ಇಲ್ಲಿದೆ ನೋಡಿ ಪೂರ್ಣ ಮಾಹಿತಿ

  • ಜೀರ್ಣಾಂಗ ವ್ಯವಸ್ಥೆ ಸುಧಾರಣೆ: ಲಸ್ಸಿ ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯು ಬಲಗೊಳ್ಳುತ್ತದೆ. ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಲಸ್ಸಿಯು ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ. ಇದು ಮಲಬದ್ಧತೆ, ಗ್ಯಾಸ್ ಮತ್ತು ಅಸಿಡಿಟಿಯಂತಹ ಅನೇಕ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಬೇಸಿಗೆಯಲ್ಲಿ ಇದನ್ನು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯು ಸುಧಾರಿಸುತ್ತದೆ ಮತ್ತು ಹೊಟ್ಟೆಯನ್ನು ಸಹ ಆರೋಗ್ಯಕರವಾಗಿರಿಸುತ್ತದೆ.
  • ಮೂಳೆಗಳನ್ನು ಬಲಪಡಿಸುತ್ತದೆ: ಲಸ್ಸಿ ಕುಡಿಯುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಇದಲ್ಲದೆ ಇದರ ಸೇವನೆಯು ಸ್ನಾಯು ನೋವನ್ನು ಸುಲಭವಾಗಿ ನಿವಾರಿಸುತ್ತದೆ. ಲಸ್ಸಿಯಲ್ಲಿ ಹೇರಳವಾಗಿರುವ ಕ್ಯಾಲ್ಸಿಯಂ ಆಯಾಸವನ್ನು ನಿವಾರಿಸಲು ತುಂಬಾ ಸಹಾಯಕವಾಗಿದೆ. ಪ್ರತಿದಿನ ಸೇವಿಸುವುದರಿಂದ ಹಲ್ಲುಗಳನ್ನು ಬಲಪಡಿಸುತ್ತದೆ.
  • ಶಾಖದಿಂದ ರಕ್ಷಣೆ: ಬೇಸಿಗೆಯಲ್ಲಿ ಶಾಖದ ಹೊಡೆತವನ್ನು ತಪ್ಪಿಸಲು ಬಯಸಿದರೆ ಪ್ರತಿದಿನ ಲಸ್ಸಿ ಸೇವನೆಯು ಪ್ರಯೋಜನಕಾರಿಯಾಗಿದೆ. ಲಸ್ಸಿಯನ್ನು ಕುಡಿಯುವುದರಿಂದ ಶಾಖದ ಹೊಡೆತದಿಂದ ರಕ್ಷಿಸಿಕೊಳ್ಳುವುದು ಮಾತ್ರವಲ್ಲದೆ ಸೂರ್ಯನ ಬೆಳಕಿನಿಂದ ಉಂಟಾಗುವ ತಲೆನೋವಿನಿಂದಲೂ ಪರಿಹಾರವನ್ನು ಪಡೆಯಬಹುದು.
  • ತೂಕ ಇಳಿಕೆಗೆ ಸಹಾಯಕ: ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಲಸ್ಸಿ ತುಂಬಾ ಉಪಯುಕ್ತವಾಗಿದೆ. ಲಸ್ಸಿ ಸೇವನೆಯು ತೂಕ ಇಳಿಸಲು ಸಹಾಯ ಮಾಡುತ್ತದೆ. ಇದಲ್ಲದೆ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಇದು ತುಂಬಾ ಪರಿಣಾಮಕಾರಿಯಾಗಿದೆ.
  • ರೋಗನಿರೋಧಕ ವ್ಯವಸ್ಥೆ ಸುಧಾರಣೆ: ಲಸ್ಸಿಯು ಲ್ಯಾಕ್ಟಿಕ್ ಆಮ್ಲ ಮತ್ತು ವಿಟಮಿನ್ ಡಿ ಯಿಂದ ಸಮೃದ್ಧವಾಗಿದೆ. ಇದು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ನಿಮ್ಮ ಚಯಾಪಚಯವನ್ನು ಮತ್ತಷ್ಟು ವೇಗಗೊಳಿಸುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net