ನಿತ್ಯ ಬೀಟ್​ರೂಟ್​ ಜ್ಯೂಸ್​​​ ಕುಡಿಯೋದ್ರಿಂದ ಎಷ್ಟೆಲ್ಲ ಲಾಭವಿದೆ ಗೊತ್ತಾ?..Beetroot Juice

Beetroot Juice Benefits
Beetroot Juice Benefits
Published on

ಪ್ರಮುಖ ಮುಖ್ಯಾಂಶಗಳು

  • ನಿತ್ಯ ಬೀಟ್​ರೂಟ್​ ಜ್ಯೂಸ್​ ಕುಡಿಯುವುದರಿಂದ ಸಿಗುವ ಲಾಭಗಳೇನು?
  • ರಕ್ತದೊತ್ತಡ, ರಕ್ತ ಹೀನತೆ, ಚರ್ಮದ ಕಾಂತಿಗೆ ಬೀಟ್​ರೂಟ್​ ಜ್ಯೂಸ್​ ರಾಮಬಾಣ
  • ಬೀಟ್​ರೂಟ್​​​ ಜ್ಯೂಸ್​ನೊಂದಿಗೆ ಯಾವ ಪದಾರ್ಥ ಸೇರಿಸಿ ಸೇವಿಸಬಹುದು
Beetroot Juice Benefits: ಬೀಟ್​ರೂಟ್​ ನೆಲದಡಿ ಬೆಳೆಯುವ ಸಿಹಿ ಗಡ್ಡಯಾಗಿದ್ದು, ಸಾಮಾನ್ಯವಾಗಿ ಇದನ್ನು ಹಲವರು ದ್ವೇಷಿಸುತ್ತಿದ್ದಾರೆ. ರಕ್ತದ ಮಟ್ಟ ಹೆಚ್ಚಾಗುತ್ತದೆ ಎನ್ನುವ ಕಾಳಜಿವುಳ್ಳ ಕೆಲವರು ಮಾತ್ರ ಇದನ್ನು ಪಲ್ಯದಲ್ಲೋ, ಹಸಿಯಾಗಿಯೋ ತಿನ್ನಲು ಪ್ರಯತ್ನಿಸುತ್ತಾರೆ. ಇದನ್ನು ಕತ್ತರಿಸಿದಾಗ ಕೈಯಲ್ಲಾಗುವ ಮಾರ್ಕ್​ ಹಾಗೂ ರಕ್ತದ ಬಣ್ಣ ಕಂಡು ಕೈ ಸೌಂದರ್ಯ ಹಾಳಾಗುತ್ತದೆ ಎಂದು ಇದರ ಬಳಕೆಗೆ ಹಿಂದೇಟು ಹಾಕೋರು ಇದ್ದಾರೆ. ಆದರೆ, ಬೇಡ ಎಂದು ಮೂಗುಮುರಿಯುವ ಮುನ್ನ ಗಮನಿಸಿ..ನಿತ್ಯ ಬೀಟ್​ರೂಟ್​ ಜ್ಯೂಸ್​ ಕುಡಿಯುವುದರಿಂದ ಆರೋಗ್ಯಕ್ಕೆ ನಾನಾ ವಿಧದಲ್ಲಿ ಲಾಭವಿದೆ.
ಹೌದು ಬೀಟ್​ರೂಟ್​ನಲ್ಲಿ ವಿಟಮಿನ್​, ಖನಿಜಾಂಶ, ಆಂಟಿ ಆಕ್ಸಿಡೆಂಟ್​, ನೈಸರ್ಗಿಕ ನೈಟ್ರೇಟ್​​​ಗಳಿಂದ ಸಮೃದ್ಧವಾಗಿದೆ. ನಿತ್ಯ ಇದನ್ನು ಬೀಟ್​ರೂಟ್​ ಜ್ಯೂಸ್​ ಅಥವಾ ಕಚ್ಚಾ ರೂಪದಲ್ಲಿ ಬೀಟ್​ರೂಟ್​ ಸೇವನೆ ಮಾಡೋದ್ರಿಂದ ದೇಹದ ರಕ್ತದ ಮಟ್ಟ ಹೆಚ್ಚಾಗಲು, ಚರ್ಮದ ಕಾಂತಿ ವೃದ್ಧಿ, ತೂಕ ಕಾಪಾಡಿಕೊಳ್ಳಲು, ಯಕೃತ್ತಿನ ಸಮಸ್ಯೆ ಸೇರಿದಂತೆ ನಾನಾ ವಿಧದಲ್ಲಿ ದೇಹಕ್ಕೆ ಆರೋಗ್ಯಕ. ಹಾಗಾದ್ರೆ ಇದನ್ನು ಬಳಕೆ ಮಾಡೋದು ಹೇಗೆ..ಯಾವ ರೀತಿ ಆರೋಗ್ಯಕಾರಿಯಾಗಿ ಕೆಲಸ ಮಾಡುತ್ತದೆ ಎನ್ನುವುದು ನೋಡೋಣ.

ರಕ್ತಹೀನತೆ ತಡೆಗಟ್ಟುತ್ತೆ

ಬೀಟ್​ರೂಟ್​ನಲ್ಲಿ ಕಬ್ಬಿಣಾಂಶ, ನೈಟ್ರೇಟ್​, ಪೋಲೈಟ್​ ಸಮೃದ್ಧವಾಗಿದೆ. ನಿತ್ಯ ಇದನ್ನು ಜ್ಯೂಸ್​ ರೂಪದಲ್ಲಿ ಉಪ್ಪು, ಸಿಹಿ ಯಾವುದು ಬೆರೆಸದೆ ಸೇವನೆ ಮಾಡಿದರೆ, ಹಲವರಲ್ಲಿ ಕಾಡುವ ರಕ್ತ ಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ ಎನ್ನುವುದು ಹಲವು ಅಧ್ಯಯನದ ವರದಿಗಳಿಂದ ತಿಳಿದುಬಂದಿದೆ.

ರಕ್ತದೊತ್ತಡಕ್ಕೂ ಮದ್ದು

ಬೀಟ್​ರೂಟ್​ನಲ್ಲಿರುವ ನೈಸರ್ಗಿಕ ನೈಟ್ರೇಟ್​ ಅಂಶವವು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೇಹಕ್ಕೆ ಸೇರಿವ ನೈಟ್ರೇಟ್​ ನೈಟ್ರಿಕ್​ ಆಸಿಡ್​ ಆಗಿ ಪರಿವರ್ತನೆಗೊಂಡು ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ. ಇದರಿಂದ ರಕ್ತಸಂಚಾರ ಸುಗಮಗೊಂಡು ಅಧಿಕವಾಗುವ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ.

ಯಕೃತ್ತಿನ ಆರೋಗ್ಯ ಸ್ನೇಹಿ

ಯಕೃತ್ತಿನಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕಲು ಬೀಟ್​ರೂಟ್​ ಸಹಾಯ ಮಾಡುತ್ತದೆ. ಬೀಟ್​ರೂಟ್​ನಲ್ಲಿರುವ ಬೀಟಾಲೈನ್ ಎನ್ನುವ ಆಂಟಿ ಆಕ್ಸಿಡೆಂಟ್​ ಅಂಶವು ಲಿವರ್​ ಕಾರ್ಯಕ್ಷಮತೆಯನ್ನು ಸುಧಾರಿಸಿ, ಅನಗತ್ಯವಾಗಿ ಸಂಗ್ರಹವಾಗುವ ಕೊಬ್ಬಿನ ಅಂಶವನ್ನು ಹೊರದೂಡುತ್ತದೆ.

ಚರ್ಮಕಾಂತಿ ಹೆಚ್ಚಳ

ಬೀಟ್​ರೂಟ್​ನಲ್ಲಿರುವ ಆಂಟಿ ಆಕ್ಸಿಡೆಂಟ್​ ಮತ್ತು ವಿಟಮಿನ್​​ ಸಿ ಅಂಶ ಚರ್ಮದ ಕೋಶಗಳನ್ನು ರಕ್ಷಿಸುತ್ತದೆ. ಇವು ದೇಹದಲ್ಲಿನ ರಕ್ತವನ್ನು ಆಗಾಗ್ಗೆ ಶುದ್ಧೀಕರಿಸುವ ಮೂಲಕ ಮೊಡವೆ ಹಾಗೂ ಕಲೆಗಳು ಕಡಿಮೆಯಾಗುವಂತೆ ಮಾಡಿ ನೈಸರ್ಗಿಕವಾಗಿ ಕಾಂತಿಯನ್ನು ನೀಡಲು ಸಹಾಯ ಮಾಡುತ್ತದೆ.
ಬೀಟ್​ರೂಟ್​ ಜ್ಯೂಸ್ ಸೇವಿಸುವಾಗ ಇದರ ಜೊತೆಗೆ ಸೇಬು, ನಿಂಬು ಹುಳಿ, ಕ್ಯಾರೆಟ್​​, ಶುಂಠಿಯನ್ನು ಸೇರಿಸಿ ಸೇವಿಸಬಹುದು. ಈ ಪದಾರ್ಥಗಳಲ್ಲಿರುವ ನೈಸರ್ಗಿಕ ಅಂಶವು ದೇಹಕ್ಕೆ ಸೇರಿ, ಆರೋಗ್ಯ ಸುಧಾರಿಸುವಂತೆ ನೋಡಿಕೊಳ್ಳುತ್ತದೆ,(ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net