ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುವ ಕೆಲವು ಪ್ರಾಥಮಿಕ ಸಮಸ್ಯೆಗೆ ಮನೆಯಲ್ಲಿ ಬಳಕೆ ಮಾಡುವ ಕೆಲವು ಮಸಾಲೆ ಪದಾರ್ಥಗಳೇ ಮದ್ದು. ಅದರಲ್ಲಿ ಲವಂಗಾ ಕೂಡ ಒಂದು. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಹಾಗೂ ಪೋಷಕಾಂಶಗಳು ದೇಹಕ್ಕೆ ಸಹಕಾರಿ. ನಿತ್ಯ ಒಂದರಿಂದ ಎರಡು ಲವಂಗವನ್ನು ಸೇವಿಸಿದರೆ, ಜೀರ್ಣಕ್ರಿಯೆ , ಬಾಯಿ ವಾಸನೆ, ರಕ್ತದಲ್ಲಿನ ಸಕ್ಕರೆ ಮಟ್ಟ ಸೇರಿದಂತೆ ನಾನಾ ಸಮಸ್ಯೆ ತಡೆಗಟ್ಟಬಹುದಾಗಿದೆ. ಹಾಗಾದರೆ ಇದನ್ನು ಬಳಕೆ ಮಾಡೋದು ಹೇಗೆ, ಯಾವ ಅನಾರೋಗ್ಯಕ್ಕೆ ಮದ್ದು ಎನ್ನುವುದನ್ನು ನೋಡೋಣ.