ಮೆಂತ್ಯ ಕಾಳು ನೋಡಲು ಸಣ್ಣದಿರಬಹುದು, ಆದರೆ ಪ್ರಯೋಜನ ಮಾತ್ರ ಬಲು ದೊಡ್ಡದು..

methi
Published on

ಬೆಂಗಳೂರು: ಪ್ರತಿಯೊಬ್ಬರೂ ತಮ್ಮ ನೆಚ್ಚಿನ ಅಡುಗೆ ಮಾಡುವಾಗ ನಿಯಮಿತವಾಗಿ ಬೆಳ್ಳುಳ್ಳಿ ಅಥವಾ ಮೆಣಸನ್ನು ಬಳಸುತ್ತಾರೆ. ಆದರೆ ಇದೇ ರೀತಿ ಅನೇಕ ಪೋಷಕಾಂಶಗಳನ್ನು ಹೊಂದಿರುವ ಮೆಂತ್ಯ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳುವುದಿಲ್ಲ. ಸ್ವಲ್ಪ ಕಹಿಯಾದ ಇದನ್ನು ಹೆಚ್ಚಾಗಿ ಭಾರತೀಯ, ಉತ್ತರ ಆಫ್ರಿಕನ್ ಮತ್ತು ಮಧ್ಯಪ್ರಾಚ್ಯ ಪಾಕಪದ್ಧತಿಗಳಲ್ಲಿ ಬಳಸಲಾಗುತ್ತದೆ. ಆದರೆ ಅಡುಗೆಯಲ್ಲಿ ಮೆಂತ್ಯವನ್ನು ಸೇರಿಸುವುದರಿಂದ ನಿಮ್ಮ ಆಹಾರಕ್ಕೆ ಹೆಚ್ಚು ಪರಿಮಳವನ್ನು ನೀಡುವುದಿಲ್ಲವಾದರೂ ಇದು ದೇಹಕ್ಕೆ ಹಲವಾರು ಪ್ರಯೋಜನವನ್ನು ನೀಡುತ್ತದೆ.

ಇದನ್ನೂ ಓದಿ: ಸೀನನ್ನು ಬಲವಂತವಾಗಿ ತಡೆ ಹಿಡಿದ ವ್ಯಕ್ತಿ: ಮುಂದೆ ನಡೆದದ್ದು ಮಾತ್ರ ಜೀವನ ಪೂರ್ತಿ ಮರೆಯೊಲ್ಲ ಈತ..

ಮೆಂತ್ಯ ಬೀಜಗಳು ಜೀರ್ಣಕ್ರಿಯೆ ಮತ್ತು ದೇಹದಿಂದ ಕಾರ್ಬೋಹೈಡ್ರೇಟ್‌ಗಳು ಮತ್ತು ಸಕ್ಕರೆಯನ್ನು ಹೀರಿಕೊಳ್ಳುವುದನ್ನು ತಡೆಯುವ ಇತರ ಸಂಯುಕ್ತಗಳನ್ನು ಹೊಂದಿದ್ದು, ಮೆಂತ್ಯ ಬೀಜಗಳಲ್ಲಿ ಕರಗುವ ಫೈಬರ್ ಮತ್ತು ಸಂಯುಕ್ತಗಳು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಜತೆಗೆ ಇದು ಆರೋಗ್ಯಕರ ಟೆಸ್ಟೋಸ್ಟೆರಾನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ

ಮೆಂತ್ಯವು ಹೆಚ್ಚಿನ ಫೈಬರ್​​ನ್ನು ಹೊಂದಿರುವುದರಿಂದ ಹಸಿವನ್ನು ನಿಗ್ರಹಿಸುವ ಮೂಲಕ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಮೆಂತ್ಯವು ಫೈಬರ್, ಖನಿಜಗಳು ಮತ್ತು ಇತರ ಪೋಷಕಾಂಶಗಳನ್ನು ಹೊಂದಿರುತ್ತದೆ. ಒಂದು ಚಮಚ ಬೀಜಗಳು ದೈನಂದಿನ ಮೌಲ್ಯದ 20% ಕಬ್ಬಿಣ, 7% ಮ್ಯಾಂಗನೀಸ್ ಮತ್ತು 5% ಮೆಗ್ನೀಸಿಯಮ್​​ನ್ನು ಒದಗಿಸುತ್ತದೆ.

ಮೆಂತ್ಯ ಬೀಜಗಳಲ್ಲಿರುವ ಲೋಳೆಯು ಜಠರಗರುಳಿನ ಕಿರಿಕಿರಿಯನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಇದು ಎದೆಯುರಿ ಮತ್ತು ಆಸಿಡ್ ರಿಫ್ಲಕ್ಸ್‌ಗೆ ಒಳ್ಳೆಯದು ಎಂದು ಭಾವಿಸಲಾಗಿದೆ. ಮೆಂತ್ಯದಲ್ಲಿ ಕಂಡುಬರುವ ಸಪೋನಿನ್‌ಗಳು ಕೊಬ್ಬಿನ ಆಹಾರದಿಂದ ದೇಹವು ಕೊಲೆಸ್ಟ್ರಾಲ್​​ನ್ನು ಹೀರಿಕೊಳ್ಳುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಪತ್ನಿ ಹತ್ಯೆಗೈದು ಮೃತದೇಹದ ಪಕ್ಕದಲ್ಲಿಯೇ ಮಲಗಿದ್ದ ಪತಿ..

ಮೆಂತ್ಯವು ರಕ್ತಹೀನತೆಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಎದೆ ಹಾಲು ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಈ ವಿಷಯವು ಸಾಮಾನ್ಯ ಮಾಹಿತಿ ಮತ್ತು ಸಲಹೆಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ಸ್ವಂತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net