

ಬ್ರಿಟನ್: ನೈಸರ್ಗಿಕ ಪ್ರಕ್ರಿಯೆಗಳನ್ನು ನಿಲ್ಲಿಸಬಾರದು ಎಂದು ಹಿರಿಯರು ಹೇಳುತ್ತಾರೆ. ಹಾಗೆ ಮಾಡಿದರೆ ಮುಂದೆ ಅನೇಕ ಅನಾಹುತಗಳನ್ನು ಎದುರಿಸಬೇಕಾಗುತ್ತದೆ ಎಂದೂ ಎಚ್ಚರಿಸುತ್ತಾರೆ. ಆದರೆ ಕೆಲವರು ಈ ರೀತಿಯ ವಿಷಯಗಳನ್ನು ತುಂಬಾ ಲಘುವಾಗಿ ಪರಿಗಣಿಸಿ ನಿರ್ಲಕ್ಷಿಸುತ್ತಾರೆ. ಹೀಗೆ ಮಾಡಿ ವ್ಯಕ್ತಿಯೊಬ್ಬ ಸೀನು ತಡೆಯಲು ಹೋಗಿ ಜೀವನವನ್ನೇ ಪಣಕ್ಕಿಟ್ಟಿರುವ ಘಟನೆ ನಡೆದಿದೆ.
ಇದನ್ನೂ ಓದಿ: ಪತ್ನಿ ಹತ್ಯೆಗೈದು ಮೃತದೇಹದ ಪಕ್ಕದಲ್ಲಿಯೇ ಮಲಗಿದ್ದ ಪತಿ..
ಬ್ರಿಟನ್ನ 34 ವರ್ಷದ ವ್ಯಕ್ತಿಯೊಬ್ಬ ವ್ಯಕ್ತಿಯೊಬ್ಬನಿಗೆ ಸೀನು ಬಂದಿದ್ದು, ಈ ವೇಳೆ ಆತ ಸೀನು ಬರದಂತೆ ಮೂಗು ಮತ್ತು ಬಾಯಿಯನ್ನು ಬಿಗಿಯಾಗಿ ಮುಚ್ಚಿಕೊಂಡಿದ್ದ. ಸೀನು ನಿಲ್ಲಿಸಿದ ನಂತರ ಆತ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು, ಯಾವುದೇ ಆಹಾರವನ್ನು ನುಂಗಲು ಆಗದೇ ಇರುವುದು, ಗಂಟಲಿನಲ್ಲಿ ಏನೋ ಕಿರಿಕಿರಿ, ಕುತ್ತಿಗೆ ಊತ, ಅಸಹನೀಯ ನೋವು ಹೀಗೆ ಅನೇಕ ತೊಂದರೆಗಳು ಕಾಣಿಸಿಕೊಂಡಿದ್ದು ಆತ ಆಸ್ಪತ್ರೆಗೆ ತೆರಳಿದ್ದಾನೆ.