

Gifts : ಮನೆಯ ಲಕ್ಷ್ಮಿ ಹೆಂಡತಿಯೇ. ಹೆಂಡತಿಯನ್ನು ಸಂತೋಷವಾಗಿಡುವ ಪುರುಷನಿಗೆ ಲಕ್ಷ್ಮಿ ದೇವಿಯು ಸಂಪತ್ತಿನ ಸುರಿಮಳೆಗೈಯುತ್ತಾಳೆ ಎಂದು ಜ್ಯೋತಿಷ್ಯ ಹೇಳುತ್ತದೆ. ನಿಮ್ಮ ಹೆಂಡತಿಯನ್ನು ಸಂತೋಷವಾಗಿಡಲು 'ಈ' 5 ಉಡುಗೊರೆಗಳನ್ನು ನೀಡಿ.
1.ಪಾಕೆಟ್ ಮನಿ ನೀಡಿ
ನಿಮ್ಮ ಗಳಿಕೆಯಲ್ಲಿ ಸಲ್ಪವನ್ನು ನಿಮ್ಮ ಹೆಂಡತಿಗೆ ಪಾಕೆಟ್ ಆಗಿ ನೀಡಿ. ನಿಮ್ಮ ಸಂಬಳದ ಸಲ್ಪ ಭಾಗವನ್ನು ನಿಮ್ಮ ಮನೆಯ ಲಕ್ಷ್ಮೀಗೆ ನೀಡುವುದರಿಂದ ನಿಮಗೆ ಹಣದ ಕೊರತೆ ಉಂಟಾಗುವುದಿಲ್ಲ. ಸದಾ ಮನೆಯಲ್ಲಿ ಆರ್ಥಿಕ ಪ್ರಗತಿ ಇರುತ್ತದೆ.
2.ಪತ್ನಿ ಸಲಹೆ ಪಡೆಯಿರಿ
ಹೆಂಡತಿ ಕೂಡ ನಿಮ್ಮ ಜೀವನದ ಒಂದು ಭಾಗವಾಗಿರುವುದರಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳವ ಮುನ್ನ ನಿಮ್ಮ ಹೆಂಡತಿಯೊಂದಿಗೆ ಚರ್ಚಿಸಿ. ಪ್ರತಿಯೊಂದು ನಿರ್ಧಾರದಲ್ಲಿ ಅವಳ ಬಳಿ ಸಲಹೆ ಪಡೆಯಿರಿ. ಹೆಂಡತಿಯನ್ನು ಗೌರವಿಸುವುದರಿಂದ ಲಕ್ಷ್ಮೀದೇವಿಯೂ ಸಂತೋಷ ಪಡುತ್ತಾಳೆ.
3.ಶುಕ್ರವಾರ ಸಿಹಿತಿಂಡಿ ಸೇವಿಸಿ
ಶುಕ್ರವಾರದಂದು ನಿಮ್ಮ ಹೆಂಡತಿಗೆ ಬಿಳಿ ಸಿಹಿತಿಂಡಿಗಳನ್ನು ತಿನ್ನಿಸಿ. ರಸಗುಲ್ಲಾ, ರಸಮಲೈ, ಬರ್ಫಿ, ಪೆಢೆ, ಏನು ಬೇಕಾದರೂ ಮಾಡಬಹುದು. ಬಿಳಿ ಸಿಹಿತಿಂಡಿಗಳು ಲಕ್ಷ್ಮಿ ದೇವಿಗೆ ತುಂಬಾ ಇಷ್ಟ.
4.ಸಾಮಾನುಗಳನ್ನು ಸಂಗ್ರಹಿಸಿಡಿ
ಅಡುಗೆಮನೆಯಲ್ಲಿ ಯಾವಾಗಲೂ ಪದಾರ್ಥಗಳನ್ನು ಸಂಗ್ರಹಿಸಿಡಿ. ಏನೂ ಖಾಲಿಯಾಗಲು ಬಿಡಬೇಡಿ. ಅಕ್ಕಿ, ಉಪ್ಪು, ಸಕ್ಕರೆ, ಬೇಳೆಕಾಳುಗಳು ಇತ್ಯಾದಿಗಳು ಖಾಲಿಯಾದಾಗ, ಅವುಗಳನ್ನು ತಕ್ಷಣ ತಂದುಕೊಡಿ. ಉಪ್ಪು ಮತ್ತು ಅನ್ನ ಎಂದಿಗೂ ಖಾಲಿಯಾಗಲು ಬಿಡಬೇಡಿ.
5. ಕೀಳಾಗಿ ಮಾತನಾಡಬೇಡಿ.
ಕೆಲವು ಪುರುಷರು ತಮ್ಮ ಹೆಂಡತಿಯರನ್ನು ಎಲ್ಲರ ಮುಂದೆ ಟೀಕಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಹೆಂಡತಿಯನ್ನು ಟೀಕಿಸುವ ಪುರುಷನ ಜೀವನದಲ್ಲಿ ಲಕ್ಷ್ಮಿ ಬರುವುದಿಲ್ಲ. ಅವನು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.(ಏಜೆನ್ಸೀಸ್)
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.