ಗರ್ಭಾವಸ್ಥೆಯ ಮಧುಮೇಹ; ತಪ್ಪದೇ ತಿಳಿಯಿರಿ ಉಪಯುಕ್ತ ಮಾಹಿತಿ

Untitled design (2)
Published on

| ಡಾ. ರಕ್ಷಾ ರಾವ್

ಗರ್ಭಾವಸ್ಥೆಯ ಮಧುಮೇಹ ಎಂದರೇನು? ಇದನ್ನು ಜೆಸ್ಟೇಷನಲ್ ಡಯಬಿಟೀಸ್ ಮೆಲಿಟಸ್(GDM) ಎನ್ನುತ್ತಾರೆ. ಇದರಲ್ಲಿ ಗರ್ಭಿಣಿಯ ದೇಹದಲ್ಲಿ ಇನ್ಸುಲಿನ್ ಹಾರ್ವೇನ್ ಸರಿ ಪ್ರಮಾಣದಲ್ಲಿದ್ದರೂ, ದೇಹವು ಅದನ್ನು ಪರಿಣಾಮಕಾರಿಯಾಗಿ ಬಳಸುವುದಿಲ್ಲ. ಜೀವಕೋಶಗಳಿಂದ ಹೀರಿಕೊಳ್ಳುವ ಬದಲು, ಗ್ಲೂಕೋಸ್ ರಕ್ತದಲ್ಲಿ ಸಂಗ್ರಹವಾಗುತ್ತದೆ.

ಟೈಪ್ -1 ಮಧುಮೇಹಕ್ಕಿಂತ ಜಿಡಿಎಂ ವಿಭಿನ್ನ. ಏಕೆಂದರೆ ಇಲ್ಲಿ ಇನ್ಸುಲಿನ್ ಕೊರತೆ ಇಲ್ಲ; ಗರ್ಭಾವಸ್ಥೆಯಲ್ಲಿನ ಇತರ ಹಾರ್ವೇನುಗಳು ಇನ್ಸುಲಿನ್ ಅನ್ನು ಕಡಿಮೆ ಪರಿಣಾಮಕಾರಿಯನ್ನಾಗಿ ಮಾಡುತ್ತವೆ, ಗರ್ಭಾವಸ್ಥೆಯ ನಂತರ ಮದುಮೇಹದ ಲಕ್ಷಣಗಳು ಕಣ್ಮರೆಯಾಗುತ್ತವೆ. ಅಪಾಯಕಾರಿ ಅಂಶಗಳು. ಅಧಿಕ ತೂಕ ಅಥವಾ ಬೊಜ್ಜು ಮಧುಮೇಹದ ಕುಟುಂಬ ಇತಿಹಾಸ ಮೊದಲ ಗರ್ಭಾವಸ್ಥೆಯಲ್ಲಿ 4 ಕೆಜಿಗಿಂತ ಹೆಚ್ಚಿನ ತೂಕದ ಶಿಶುವಿಗೆ ಜನ್ಮ ನೀಡಿರುವುದು. ಫ್ರಿಕನ್-ಅಮೆರಿಕನ್, ಅಮೆರಿಕನ್-ಇಂಡಿಯನ್, ಏಷ್ಯನ್-ಅಮೆರಿಕನ್ ಮಹಿಳೆಯರು, ಹಿಸ್ಪಾನಕ್, ಲ್ಯಾಟಿನೋ ಅಥವಾ ಪೆಸಿಫಿಕ್ ದ್ವೀಪವಾಸಿಗಳು ಹೆಚ್ಚಿನ ಅಪಾಯ ಹೊಂದಿರುತ್ತಾರೆ.

ಗರ್ಭಾವಸ್ಥೆಯಲ್ಲಿ ಮಧುಮೇಹ ಪತ್ತೆ ಹೇಗೆ?

ಈ ಪರೀಕ್ಷೆಯನ್ನು ಅಮೆರಿಕನ್ ಡಯಬಿಟೀಸ್ ಅಸೋಸಿಯೇಷನ್ ಶಿಫಾರಸ್ಸು ಮಾಡಿದೆ. ಮಧುಮೇಹದ ಅಪಾಯಕಾರಿ ಅಂಶಗಳನ್ನು ಹೊಂದಿದ ಮಹಿಳೆಯರಲ್ಲಿ ಮೊದಲ ತಪಾಸಣೆಯಲ್ಲಿ, ಹಾಗೂ ಬೇರೆ ಅಪಾಯವಿಲ್ಲದ ಮಹಿಳೆಯರಲ್ಲಿ ಗರ್ಭಾವಸ್ಥೆಯ 5-6 (24-28 ವಾರಗಳ) ತಿಂಗಳ ಹತ್ತಿರ ಪರೀಕ್ಷೆ ಮಾಡಿಸಬೇಕು. ಪ್ರಸವದ ನಂತರ ಕೂಡ ಜಿಡಿಎಂ ಖಚಿತವಾದವರು, 6 ವಾರ, 3 ತಿಂಗಳವರೆಗೂ ರಕ್ತದಲ್ಲಿ ಗ್ಲೂಕೋಸ್ ತಪಾಸಣೆ ಮಾಡಿಸುತ್ತಿರಬೇಕು.

ಜಿಡಿಎಂಗಾಗಿ ಸ್ಕ್ರೀನಿಂಗ್ ಪರೀಕ್ಷೆಯು ವಿಶ್ವಾರೋಗ್ಯ ಸಂಸ್ಥೆಯಿಂದ ಶಿಫಾರಸು ಮಾಡಲಾದ ಮೌಖಿಕ ಗ್ಲೂಕೋಸ್ ಚಾಲೆಂಜ್ ಪರೀಕ್ಷೆ, 75 ಗ್ರಾಂ ಗ್ಲೂಕೋಸ್ ಕುಡಿದ 2 ಗಂಟೆ ನಂತರ, ರಕ್ಷದಲ್ಲಿನ ಗ್ಲೂಕೋಸ್ ಅನ್ನು ಪರೀಕ್ಷಿಸಲಾಗುತ್ತದೆ,140ಎಂಜಿ/ ಡಿಎಲ್ ಗಿಂತ ಹೆಚ್ಚಿನ ಮೌಲ್ಯ ಕಂಡುಬಂದಲ್ಲಿ, ಕೆಲವು ಆಹಾರ, ವ್ಯಾಯಾಮ ಸಲಹೆಗಳನ್ನು ನೀಡಿ,ಖಾಲಿ ಹೊಟ್ಟೆಯಲ್ಲಿ ಹಾಗು ಊಟದ 2 ಗಂಟೆ ನಂತರ ರಕ್ಷದ ಗ್ಲೂಕೋಸ್ ಪರೀಕ್ಷಿಸಿ, ಮೆಟ್ ಫಾರ್ವಿುನ್ ಔಷಧ ಇಲ್ಲವೇ ಇನ್ಸುಲಿನ್ ಚಿಕಿತ್ಸೆ ಪ್ರಾರಂಭಮಾಡಲಾಗುತ್ತದೆ.

ಟೈಪ್ ಒಂದು ಮಧುಮೇಹ

ಗರ್ಭಾವಸ್ಥೆಯಲ್ಲಿ ಟೈಪ್ ಒಂದು ಮಧುಮೇಹ ಮಾಡುವ ಭ್ರೂಣದ ಅನ್ಯೋನ್ಯತೆಗಳನ್ನು ಜಿಡಿಎಂ ಮಾಡುವುದಿಲ್ಲ. ಕಾರಣ ಇಲ್ಲಿ ಹೆಚ್ಚಿನ ಗ್ಲೂಕೋಸ್​ನ ಪರಿಣಾಮ 5 ತಿಂಗಳ ನಂತರದಿಂದ ಪ್ರಾರಂಭವಾಗುತ್ತದೆ. ಜಿಡಿಎಂನಿಂದ ಆಗುವ ತೊಡಕುಗಳು ಸಾಮಾನ್ಯವಾಗಿ ನಿರ್ವಹಿಸಬಲ್ಲಂತವಾಗಿರುತ್ತವೆ ಹಾಗೂ ತಡೆಗಟಲು ಸಾಧ್ಯವುಳ್ಳವುಗಳಾಗಿರುತ್ತವೆ. ಮೊದಲನೆಯದಾಗಿ ಹುಟ್ಟುವ ಶಿಶುವು ಮೊದಲ 3-4 ದಿನ ಹಲವಾರು ರಾಸಾಯನಿಕಗಳ ಅಸಮತೊಲನ, ಕಡಿಮೆ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮಟ್ಟಗಳಿಗೆ ಗುರಿಯಾಗುತ್ತದೆ.

ಫೀಟಲ್ ಮ್ಯಾಕ್ರೋಸೋಮಿಯಾ: ಎರಡನೆಯ ಪ್ರಮುಖ ಸಮಸ್ಯೆ ಫೀಟಲ್ ಮ್ಯಾಕ್ರೋಸೋಮಿಯಾ ಎಂಬುದರ ಅರ್ಥ ಗಣನೀಯವಾಗಿ ದೊಡ್ಡದಾದ ಶಿಶು. ಸಹಜವಾಗಿ ಭ್ರೂಣವು ಎಲ್ಲಾ ಪೋಷಕಾಂಶಗಳನ್ನು ನೇರವಾಗಿ ತಾಯಿಯ ರಕ್ತದಿಂದ ಪಡೆಯುತ್ತದೆ. ತಾಯಿಯ ರಕ್ತದಲ್ಲಿ ಹೆಚ್ಚಿನ ಗ್ಲೂಕೋಸ್ ಇದ್ದರೆ, ಭ್ರೂಣದ ಮೇದೋಜ್ಜೀರಕ ಗ್ರಂಥಿ, ಹೆಚ್ಚಿನ ಗ್ಲೂಕೋಸ್ ಮಟ್ಟವನ್ನು ಗ್ರಹಿಸುತ್ತದೆ ಮತ್ತು ಅದನ್ನು ಬಳಸುವ ಪ್ರಯತ್ನದಲ್ಲಿ ಹೆಚ್ಚು ಇನ್ಸುಲಿನ್ ಅನ್ನು ಉತ್ಪಾದಿಸುತ್ತದೆ. ಇದರ ಪ್ರಭಾವದಿಂದ ಭ್ರೂಣದಲ್ಲಿ ಕೊಬ್ಬಿನ ಸಂಯೋಜನೆ ಹೆಚ್ಚಾಗಿ ಬೆಳೆಯಲು ಕಾರಣವಾಗಿ ಅದರ ತೂಕ ವಿಪರೀತವಾಗಿ ಅಧಿಕವಾಗಿರುತ್ತದೆ. ಸಾಮಾನ್ಯವಾಗಿ 4ಕೆಜಿ ಹಾಗೂ ಅದಕ್ಕಿಂತ ಮಿಗಿಲು.

ಜಿಡಿಎಮ್ ತಡೆಗಟ್ಟಲು

1. ಆರೋಗ್ಯಕರ ಆಹಾ ರದ ಸೇವನೆ ಮುಖ್ಯ

2. ಪ್ರತಿನಿತ್ಯ ನಿಯಮಿತ ವ್ಯಾಯಾಮ ಅಗತ್ಯ.

3. ಅಪಾಯದ ಅಂಶಗಳಿದ್ದರೆ, ಮೊದಲೇ ತಪಾಸಣೆಗೆ ಒಳಗಾಗಬೇಕು

ಹೈಪೋಗ್ಲೈಸಿಮಿಯಾ

ಇದು ಮೂರನೆಯ ಮುಖ್ಯ ಸಮಸ್ಯೆ. ಹುಟ್ಟಿದ ಕೆಲವು ಕ್ಷಣಗಳಲ್ಲಿ ಮಗುವಿನ ರಕ್ತದಲ್ಲಿ ಕಡಿಮೆ ಗ್ಲೂಕೋಸ್ ಮಟ್ಟವನ್ನು ಇದು ಸೂಚಿಸುತ್ತದೆ. ತಾಯಿಯ ಅಧಿಕ ರಕ್ತದ ಅನುಗುಣವಾಗಿ ಹೆಚ್ಚು ಇನ್ಸುಲಿನ್ ತಯಾರು ಮಾಡುತಿದ್ದ ಶಿಶುವು, ಹೆರಿಗೆಯ ನಂತರ ಅಷ್ಟು ಗ್ಲೂಕೋಸ್ ಸಿಗದೆ, ಹೆಚ್ಚಿನ ಇನ್ಸುಲಿನ್ ಪ್ರಭಾವದಿಂದ ಹೈಪೋಗ್ಲೈಸಿಮಿಯಾದಿಂದ ಬಳಲುತ್ತದೆ. ಆದ್ದರಿಂದ ಜನನದಿಂದ 2-3 ದಿನಗಳವರೆಗೆ, ಮಗುವಿನ ರಕ್ತದಲ್ಲಿನ ಗ್ಲೂಕೋಸ್ ಪರೀಕ್ಷೆಯನ್ನು ನಿರಂತರವಾಗಿ 6 ಗಂಟೆಗಳಿಗೊಮ್ಮೆ ಮಾಡಲಾಗುತ್ತದೆ ಹಾಗು ಕಡಿಮೆ ಇದ್ದರೆ, ಡ್ರಿಪ್ ಮೂಲಕ ಗ್ಲೂಕೋಸ್ ಕೊಡುವ ಸಾದ್ಯತೆ ಇರುತ್ತದೆ.

ತಾಯಿಗೆ ಜಿಡಿಎಂನಿಂದ ತೊಡಕುಗಳು

ಭ್ರೂಣದ ಮ್ಯಾಕ್ರೋಸೋಮಿಯಾದ ಪ್ರಭಾವದಿಂದ ದೀರ್ಘಕಾಲದ ಹೆರಿಗೆ, ಕಷ್ಟಕರವಾದ ಹೆರಿಗೆ, ಶೋಲ್ಡರ್ ಡಿಸ್ಟೋಶಿಯಾ, ಅಧಿಕವಾದ ಸ್ಯೂಚರ್ಗಳು, ಸಿಸೇರಿಯನ್ ಹೆರಿಗೆ, ಪ್ರಸವಾನಂತರದ ರಕ್ತ ಸ್ರಾವ, ಸೆಪ್ಸಿಸ್- ನಂಜಾಗುವಿಕೆ-ಈ ಎಲ್ಲಾ ಸಾಧ್ಯತೆಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net