ನೀವು ಹೆಚ್ಚು ಆಲೂ ಪರೋಟವನ್ನು ಇಷ್ಟ ಪಟ್ಟು ತಿನ್ನುತ್ತೀರಾ? ಹಾಗಿದ್ದರೆ, ಈ ಸಮಸ್ಯೆಗಳು ಬರೋದಂತೂ ಗ್ಯಾರೆಂಟಿ! Aloo Paratha
ಸಾಂದರ್ಭಿಕ ಚಿತ್ರ
Published on:
Copied
Follow Us
Aloo Paratha: ಉಪಹಾರ ಸಮಯದಲ್ಲಿ ಆಲೂ ಪರಾಠವನ್ನು ತಿನ್ನುವುದು ಉತ್ತರ ಭಾರತದಲ್ಲಿ ಸಾಮಾನ್ಯ ಸಂಪ್ರದಾಯ. ಹೊರಗೆ ಕರುಂ ಕುರುಂ ಮತ್ತು ಒಳಗೆ ಮೃದು ಮತ್ತು ರುಚಿಯಾದ ಆಲೂ ಪರಾಠ ಯಾರಿಗೆ ಇಷ್ಟವಿಲ್ಲ ಹೇಳಿ. ಆದರೆ, ಈ ದಿನವನ್ನು ಆಲೂ ಪರಾಠದಿಂದ ಪ್ರಾರಂಭಿಸಿದರೆ, ಈ ರೀತಿಯ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ.
* ತೂಕ ಹೆಚ್ಚಳ:ಪ್ರತಿನಿತ್ಯ ಆಲೂ ಪರಾಠವನ್ನು ಸೇವಿಸುವುದರಿಂದ ಇದು ದೇಹದಲ್ಲಿ ಕ್ಯಾಲೊರಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಪ್ರತಿ 2-3 ಆಲೂ ಪರಾಠವನ್ನು ಸೇವಿಸುವುದರಿಂದ ಇದು ದೇಹದಲ್ಲಿ ಕೊಬ್ಬು ಶೇಖರಣೆಯಾಗುವುದರ ಜೊತೆಗೆ ತೂಕ ಹೆಚ್ಚಾಗುತ್ತದೆ.
* ರಕ್ತದಲ್ಲಿ ಸಕ್ಕರೆ ಹೆಚ್ಚಳ: ಆಲೂಗಡ್ಡೆಯಲ್ಲಿ ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಇದ್ದು, ಮೈದಾ ಹಿಟ್ಟು ಸೇರಿದರೆ ರಕ್ತದ ಸಕ್ಕರೆ ಮಟ್ಟದಲ್ಲಿ ತೀವ್ರವಾಗಿ ಏರಿಳಿತವಾಗುತ್ತದೆ. ಇದು ಮಧುಮೇಹ ಅಪಾಯನ್ನು ಹೆಚ್ಚಿಸುತ್ತದೆ.
* ಜೀರ್ಣಕೋಶದ ಸಮಸ್ಯೆಗಳು: ಮೈದಾ ಹಿಟ್ಟು ಮತ್ತು ಹೆಚ್ಚು ಎಣ್ಣೆ ತುಪ್ಪ ಸೇವಿಸುವುದರಿಂದ ದೇಹದಲ್ಲಿ ಮಲಬದ್ಧತೆ, ಉಬ್ಬಸ, ಗ್ಯಾಸ್, ಅಸಿಡಿಟಿ ಉಂಟಾಗಬಹುದು. ಇದರಲ್ಲಿ ಫೈಬರ್ ಕಡಿಮೆ ಇರುವುದರಿಂದ ದೀರ್ಘಕಾಲದಲ್ಲಿ IBS ಅಥವಾ ಪೈಲ್ಸ್ ಕಾಣಿಸಿಕೊಳ್ಳಬಹುದು.
* ಹೃದಯ ಸಂಬಂಧಿತ ಅಪಾಯ: ತುಪ್ಪ ಮತ್ತು ಎಣ್ಣೆಯಲ್ಲಿ ಹೆಚ್ಚು ಸ್ಯಾಚುರೇಟೆಡ್ ಫ್ಯಾಟ್ ಮತ್ತು ಟ್ರಾನ್ಸ್ ಫ್ಯಾಟ್ ಇರುತ್ತದೆ. ಇದು ಕೊಲೆಸ್ಟ್ರಾಲ್ ಹೆಚ್ಚಿಸಿ ಹೃದಯದ ಅಪಾಯವನ್ನು ಹೆಚ್ಚಿಸುತ್ತದೆ.
* ಪೌಷ್ಟಿಕಾಂಶದ ಕೊರತೆ: ಆಲೂ ಪರೋಟಾದಲ್ಲಿ ಪ್ರೋಟೀನ್, ಫೈಬರ್, ವಿಟಮಿನ್, ಮಿನರಲ್ಸ್ ಬಹಳ ಕಡಿಮೆ ಇರುತ್ತದೆ. ಇದನ್ನೇ ಮುಖ್ಯ ಆಹಾರವಾಗಿ ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳ ಕೊರತೆಯನ್ನು ಉಂಟು ಮಾಡುತ್ತದೆ.
ಆಲೂ ಪರಾಠ ತಿನ್ನಲು ಸರಿಯಾದ ಮಾರ್ಗ ಯಾವುದು?
ಆಲೂ ಪರಾಠದಲ್ಲಿರುವ ಹೆಚ್ಚಿನ ಕಾರ್ಬೋಹೈಡ್ರೇಟ್ನಿಂದಾಗಿ ರಕ್ತದಲ್ಲಿ ಸಕ್ಕರೆ ಮಟ್ಟ ಹಠಾತ್ನೆ ಏರಿಕೆಯಾಗುತ್ತದೆ. ಹಾಗಾಗಿ ಈ ಪರಾಠವನ್ನು ಸೋರೆಕಾಯಿ, ಮೊಸರು, ಅಥವಾ ತರಕಾರಿಗಳೊಂದಿಗೆ ಸೇವಿಸುವುದರಿಂದ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಏಕೆಂದರೆ ಇದು ಪ್ರೋಟೀನ್ ಮತ್ತು ಫೈಬರ್ ಅನ್ನು ದೇಹಕ್ಕೆ ಒದಗಿಸುತ್ತವೆ.
ಬೆಣ್ಣೆ ಅಥವಾ ತುಪ್ಪ ಸೇರಿಸುವುದರಿಂದ ಅದು ಹೆಚ್ಚು ಅನಾರೋಗ್ಯಕರವಾಗುತ್ತದೆ. ಹಾಗಾಗಿ ನೀವೇನಾದರೂ, ಆಲೂಗಡ್ಡೆ ಪರಾಠವನ್ನು ಸೇವಿಸಲು ಬಯಸಿದರೆ, ಅದನ್ನು ಪ್ರೋಟೀನ್, ಫೈಬರ್ ಅಥವಾ ಕಡಿಮೆ ಕೊಬ್ಬಿನ ಪದಾರ್ಥಗಳಿಂದ ಸೇವಿಸಿ. ಇದು ಆರೋಗ್ಯಕರವಾಗಿರುತ್ತದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.