ನಿಮ್ಮ ಮಕ್ಕಳು ತುಂಬಾ ಹೊತ್ತು ಸಾಮಾಜಿಕ ಜಾಲತಾಣಗಳಲ್ಲೇ ಮುಳುಗಿರುತ್ತಾರಾ...? ಹಾಗಿದ್ದರೆ, ಈ ಸಮಸ್ಯೆ ಕಟ್ಟಿಟ್ಟ ಬುತ್ತಿ..! Social Media
ಸಾಂದರ್ಭಿಕ ಚಿತ್ರ
Published on:
Copied
Follow Us
ನವದೆಹಲಿ: ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟ್ವಿಟರ್ ಮತ್ತು ಸ್ನಾಪ್ಚಾಟ್ನಂತಹ ಸಾಮಾಜಿಕ ವೇದಿಕೆಗಳಲ್ಲಿ (Social Media) 30 ನಿಮಿಷಕ್ಕಿಂತ ಹೆಚ್ಚು ಕಾಲ ಕಳೆಯುವುದರಿಂದ ನಿಮ್ಮ ಮಕ್ಕಳು ತಮ್ಮ ಗಮನ ಕೇಂದ್ರೀಕರಿಸುವ ಸಾಮರ್ಥ್ಯದಲ್ಲಿ ಕ್ರಮೇಣವಾಗಿ ಕುಸಿತವನ್ನು ಅನುಭವಿಸುವ ಸಾಧ್ಯತೆ ಇದೆ ಎಂದು 10 ರಿಂದ 14 ವರ್ಷ ವಯಸ್ಸಿನ 8,000 ಮಕ್ಕಳ ಅಧ್ಯಯನವೊಂದು ಮಾಹಿತಿ ಹಂಚಿಕೊಂಡಿದೆ.
ಸ್ವೀಡನ್‌ನ ಕರೋಲಿನ್ಸ್ಕಾ ಇನ್‌ಸ್ಟಿಟ್ಯೂಟ್ ಮತ್ತು ಯುಎಸ್‌ನ ಒರೆಗಾನ್ ಹೆಲ್ತ್ ಮತ್ತು ಸೈನ್ಸ್ ವಿಶ್ವವಿದ್ಯಾಲಯದ ಸಂಶೋಧಕರು ಟಿವಿ, ಮೊಬೈಲ್ ಪರದೆಯ ಅಭ್ಯಾಸಗಳು ಗಮನ, ಕೊರತೆ ಹೈಪರ್ ಆಕ್ಟಿವಿಟಿ ಡಿಸಾರ್ಡರ್ಗೆ ಸಂಬಂಧಿಸಿದ ಲಕ್ಷಣಗಳ ನಡುವಿನ ಸಂಭಾವ್ಯ ಸಂಬಂಧವನ್ನು ತನಿಖೆ ಮಾಡಿದರು. ಅವರು ಅಮೆರಿಕದಲ್ಲಿ 9-14 ವರ್ಷ ವಯಸ್ಸಿನ 8,324 ಮಕ್ಕಳನ್ನು ನಾಲ್ಕು ವರ್ಷಗಳ ಕಾಲ ಅಧ್ಯಯನ ನಡೆಸಿದರು.
ಇಂದಿನ ದಿನಗಳಲ್ಲಿ ಮಕ್ಕಳು ದಿನಕ್ಕೆ 30 ನಿಮಿಷಗಳಿಂದ 2.5 ಗಂಟೆಗಳ ತನಕ ಸಾಮಾಜಿಕ ಮಾಧ್ಯಮ, ಟಿವಿ ವಿಡಿಯೋಗಳನ್ನು ನೋಡುವುದರಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಅಧ್ಯಯನ ತೋರಿಸಿದೆ.
ಅಂದಹಾಗೇ, ಇನ್‌ಸ್ಟಾಗ್ರಾಮ್, ಸ್ನಾಪ್‌ಚಾಟ್, ಟಿಕ್‌ಟಾಕ್, ಫೇಸ್‌ಬುಕ್, ಎಕ್ಸ್ ಅಥವಾ ಮೆಸೆಂಜರ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಗಣನೀಯ ಸಮಯ ಕಳೆಯುವುದರಿಂದ ಮಕ್ಕಳಲ್ಲಿ ಕ್ರಮೇಣ ಅಜಾಗರೂಕತೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ ಎಂದು ಸಂಶೋಧನೆಗಳು ಬಹಿರಂಗಪಡಿಸಿವೆ.
ಅಧ್ಯಯನದಲ್ಲಿ, ಅನೇಕ ವೇದಿಕೆಗಳು ತಮ್ಮ ಕನಿಷ್ಠ ವಯಸ್ಸಿನ ಮಟ್ಟವನ್ನು 13 ಎಂದು ನಿಗದಿಪಡಿಸಿದ್ದರೂ, ಸಾಮಾಜಿಕ ಮಾಧ್ಯಮದಲ್ಲಿ ಕಳೆಯುವ 9 ವರ್ಷ ವಯಸ್ಸಿನವರು ದಿನಕ್ಕೆ 30 ನಿಮಿಷಗಳಿಂದ 13 ವಯಸ್ಸಿನವರು 2.5 ಗಂಟೆಗಳಷ್ಟು ಸಾಮಾಜಿಕ ಮಾಧ್ಯಮವನ್ನು ನೋಡುತ್ತಾರೆ ಎಂದು ತಿಳಿಸಿದೆ.
ಆದಾಗ್ಯೂ, ಪೀಡಿಯಾಟ್ರಿಕ್ಸ್ ಓಪನ್ ಸೈನ್ಸ್‌ನಲ್ಲಿ ಪ್ರಕಟವಾದ ಈ ಅಧ್ಯಯನ ಸೂಚಿಸಿದಂತೆ, ದೂರದರ್ಶನ ನೋಡುವ ಅಥವಾ ವಿಡಿಯೋ ಗೇಮ್‌ಗಳನ್ನು ಆಡುವ ಮಕ್ಕಳಲ್ಲಿ ಅಂತಹ ಯಾವುದೇ ಸಂಬಂಧವನ್ನು ಕಂಡುಕೊಂಡಿಲ್ಲ ಎಂದಿದೆ.
ಈ ಅಧ್ಯಯನವು ನಿರ್ದಿಷ್ಟವಾಗಿ ಸಾಮಾಜಿಕ ಮಾಧ್ಯಮವು ಮಕ್ಕಳ ಏಕಾಗ್ರತೆಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸೂಚಿಸುತ್ತದೆ ಎಂದು ಕರೋಲಿನ್ಸ್ಕಾ ಇನ್ಸ್ಟಿಟ್ಯೂಟ್‌ನ ನರವಿಜ್ಞಾನ ವಿಭಾಗದ ಅರಿವಿನ ನರವಿಜ್ಞಾನದ ಪ್ರಾಧ್ಯಾಪಕ ಟೋರ್ಕೆಲ್ ಕ್ಲಿಂಗ್‌ಬರ್ಗ್ ಹೇಳಿಕೆ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮವು ಸಂದೇಶಗಳು ಮತ್ತು ಅಧಿಸೂಚನೆಗಳ ರೂಪದಲ್ಲಿ ನಿರಂತರವಾಗಿ ಮನಸ್ಸನ್ನು ಗೊಂದಲವುಂಟು ಮಾಡುತ್ತದೆ. ಹಾಗೆಯೇ ಸಂದೇಶ ಬಂದಿದಿಯೇ? ಎಂಬ ಕೆಲವು ಆಲೋಚನೆಗಳು ಮಾನಸಿಕ ಅಡತಡೆಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಗಮನವನ್ನು ಕೇಂದ್ರೀಕರಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
ಈಗಾಗಲೇ ಸಾಮಾಜಿಕ ಮಾಧ್ಯಮಗಳ ಬಳಕೆಯಿಂದ ಇಂದಿನ ಮಕ್ಕಳು ಅಜಾಗರೂಕತೆಯ ಲಕ್ಷಣಗಳನ್ನು ಹೊಂದಿದ್ದು, ಇದು ರೋಗಲಕ್ಷಣಗಳಿಗೆ ಕಾರಣವಾಗುತ್ತದೆ ಎಂದು ತಿಳಿದುಬಂದಿದೆ.
ಸಂಶೋಧಕರು ಸೂಚಿಸಿದಂತೆ, ಅತಿ ಕ್ರಿಯಾಶೀಲ, ಆವೇಗದ ನಡವಳಿಕೆಯಲ್ಲಿ ಯಾವುದೇ ಹೆಚ್ಚಳವನ್ನು ಕಂಡುಕೊಂಡಿಲ್ಲ. ವೈಯಕ್ತಿಕ ಮಟ್ಟದಲ್ಲಿ ಮಕ್ಕಳ ಏಕಾಗ್ರತೆಯ ಮೇಲೆ ಪರಿಣಾಮವು ಚಿಕ್ಕದಾಗಿ ಬಿದ್ದರೂ, ಜನಸಂಖ್ಯಾ ಮಟ್ಟದಲ್ಲಿ ಇದು ಗಮನಾರ್ಹ ಪರಿಣಾಮ ಬೀರಬಹುದು ಎಂದು ಅವರು ಹೇಳಿದ್ದಾರೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ನಿಮ್ಮ ಮಕ್ಕಳು 30 ನಿಮಿಷಕ್ಕಿಂತ ಹೆಚ್ಚು ಕಾಲ ಸಾಮಾಜಿಕ ಮಾಧ್ಯಮದಲ್ಲಿ ಕಳೆಯುವುದರಿಂದ ಅವರ ಗಮನ ಕೇಂದ್ರೀಕರಿಸುವ ಸಾಮರ್ಥ್ಯದಲ್ಲಿ ಕುಸಿತಗೊಳ್ಳುವ ಸಾಧ್ಯತೆ ಇದೆ.