ಜ್ಯೂಸ್ ಪ್ರಿಯರೇ ಎಚ್ಚರ! ಹುಳು ಬಿದ್ದ, ಕೊಳೆತ ಮಾವಿನ ಹಣ್ಣುಗಳಿಂದಲೇ ತಯಾರಾಗ್ತಿತ್ತು ರಸಾಯನ; FSSAI ಅಧಿಕಾರಿಗಳ ದಾಳಿಯಲ್ಲಿ ಬಯಲಾದ ಸತ್ಯ! Mango Juice Scam

ಗುಜರಾತ್‌ನಲ್ಲಿ ಕೊಳೆತ ಮಾವಿನ ರಸ ತಯಾರಿಸುತ್ತಿದ್ದ ಕಾರ್ಖಾನೆಯ ಮೇಲೆ ಎಫ್‌ಎಸ್‌ಎಸ್‌ಎಐ ಅಧಿಕಾರಿಗಳ ದಾಳಿ
ಗುಜರಾತ್‌ನಲ್ಲಿ ಕೊಳೆತ ಮಾವಿನ ರಸ ತಯಾರಿಸುತ್ತಿದ್ದ ಕಾರ್ಖಾನೆಯ ಮೇಲೆ ಎಫ್‌ಎಸ್‌ಎಸ್‌ಎಐ ಅಧಿಕಾರಿಗಳ ದಾಳಿ
Published on
ಗುಜರಾತ್​: ಭಾರತದಲ್ಲಿ ಜನರು ಸೇವಿಸುವ ಆಹಾರದ ಗುಣಮಟ್ಟ ದಿನದಿಂದ ದಿನಕ್ಕೆ ಕಳಪೆಯಾಗುತ್ತಿರುವ ಕುರಿತು ವರದಿಗಳು ಬರುತ್ತಲೇ ಇರುತ್ತವೆ.
ಇತ್ತೀಚೆಗೆ ಗುಜರಾತ್​ನಲ್ಲಿ ಕೊಳೆತ ಹಾಗೂ ಹುಳವಾಗಿರುವ ಮಾವಿನ ಹಣ್ಣುಗಳನ್ನು ಜ್ಯೂಸ್​ (Mango Juice Scam) ಮಾಡಲು ಬಳಸುತ್ತಿದ್ದು ಅಂಗಡಿಯವನ ಮೇಲೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಗಳು ದಾಳಿ ನಡೆಸಿದ್ದಾರೆ.

ಕೊಳೆತ ಮಾವಿನ ಬಳಕೆ!

ಈ ದಾಳಿಯು ಗುಜರಾತ್​ನ ಮೆಹ್ಸಾನಾನಲ್ಲಿ ನಡೆಸಲಾಗಿದ್ದು, ಖಚಿತ ಮಾಹಿತಿ ಆಧರಿಸಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಫ್ಯಾಕ್ಟರಿ ಮೇಲೆ ದಾಳಿ ನಡಿಸಿದ್ದಾರೆ. ಜ್ಯೂಸ್​ ತಯಾರಿಸಲು ಬಳಸಲಾಗುತ್ತಿದ್ದ ಮಾವಿನ ಹಣ್ಣುಗಳು ಸಂಪೂರ್ಣವಾಗಿ ಕೊಳೆತು ಹೋಗಿದ್ದು, ಹೆಚ್ಚಿನ ಹಣ್ಣುಗಳಲ್ಲಿ ಶಿಲೀಂಧ್ರ (Fungi) ಹಾಗೂ ಹುಳುಗಳು ಓಡಾಡುತ್ತಿರುವುದನ್ನು ನೋಡಬಹುದಾಗಿದೆ.
ಈ ರೀತಿ ಕೊಳೆತ ಹಣ್ಣುಗಳಿಂದ ತಯಾರಿಸಿದ ಜ್ಯೂಸ್​ನ್ನು ಸೇವಿಸುದರಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದೆಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಫ್ಯಾಕ್ಟರಿ ಮಾಲೀಕನ ಮೇಲೆ ಕ್ರಮ!

ದಾಳಿ ನಡೆಸಿದ ಅಧಿಕಾರಿಗಳು, ಫ್ಯಾಕ್ಟರಿ ಮಾಲೀಕನಿಗೆ ನೋಟಿಸ್​ ನೀಡಿದ್ದು, ಬಳಸಲಾಗಿರುವ ಮಾವಿನ ಹಣ್ಣಿನ ಬಗ್ಗೆ ಮಾಹಿತಿ ನೀಡುವಂತೆ ಹೇಳಿದ್ದಾರೆ. ಹಾಗೆಯೇ ಮಾಲೀಕನ ಮೇಲೆ ಆರೋಗ್ಯ ಕ್ರಮಗಳ ಉಲ್ಲಂಘನೆ ಆರೋಪದಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಕೊಳೆತ ಹಣ್ಣಿನ ಜ್ಯೂಸ್​ ಕುಡಿದರೆ ಏನಾಗುತ್ತದೆ?

1. ಫುಡ್​ ಪಾಯ್ಸನಿಂಗ್ (Food Poisoning)

ಕೊಳೆತ ಹಣ್ಣಿನಲ್ಲಿರುವ Salmonella, E. coli ಅಥವಾ Listeria ನಂತಹ ಬ್ಯಾಕ್ಟೀರಿಯಾಗಳು ಹೊಟ್ಟೆ ಸೇರಿದಾಗ ಫುಡ್ ಪಾಯ್ಸನಿಂಗ್ ಆಗುತ್ತದೆ. ಇದರಿಂದ ಹೊಟ್ಟೆ ನೋವು, ವಾಂತಿ, ಭೇದಿ (Diarrhea) ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

2. ನಿರ್ಜಲೀಕರಣ (Dehydration)

ಸತತವಾಗಿ ವಾಂತಿ ಮತ್ತು ಭೇದಿಯಾಗುವುದರಿಂದ ದೇಹದಲ್ಲಿನ ನೀರಿನಂಶ ಮತ್ತು ಲವಣಾಂಶಗಳು ಸಂಪೂರ್ಣವಾಗಿ ಕಡಿಮೆಯಾಗಿ ತೀವ್ರ ಸುಸ್ತು, ತಲೆಸುತ್ತು ಕಾಣಿಸಿಕೊಳ್ಳಬಹುದು.

3. ಅಲರ್ಜಿ ಮತ್ತು ಉಸಿರಾಟದ ತೊಂದರೆ

ಕೊಳೆತ ಹಣ್ಣುಗಳ ಮೇಲೆ ಬೆಳೆಯುವ ಬೂಷ್ಟು (Mold/Fungi) ಕೆಲವು ಜನರಲ್ಲಿ ತೀವ್ರ ಅಲರ್ಜಿಯನ್ನು ಉಂಟುಮಾಡುತ್ತದೆ. ಇದರಿಂದ ಚರ್ಮದ ಮೇಲೆ ದದ್ದುಗಳು ಏಳುವುದು, ತುರಿಕೆ ಅಥವಾ ಉಸಿರಾಟದ ತೊಂದರೆ ಉಂಟಾಗಬಹುದು.

4. ಕರುಳಿನ ಸೋಂಕು (Gastroenteritis)

ಹಾನಿಕಾರಕ ಸೂಕ್ಷ್ಮಜೀವಿಗಳು ಜಠರ ಮತ್ತು ಕರುಳಿನ ಒಳಪದರವನ್ನು ಹಾನಿಗೊಳಿಸಿ, ಕರುಳಿನ ಸೋಂಕನ್ನು ಉಂಟುಮಾಡಬಹುದು. ಇದರಿಂದ ಜ್ವರ ಕೂಡ ಬರಬಹುದು, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net