‘ಡಾನ್ 3’ ವಿವಾದಕ್ಕೆ ಬಿಗ್ ಟ್ವಿಸ್ಟ್: ರಣವೀರ್​ ಮೇಲಿನ ನಿಷೇಧ ಹಿಂಪಡೆದ FWICE; ನಮಗೆ ನಟನ ಮೇಲೆ ಯಾವುದೇ ದ್ವೇಷವಿಲ್ಲ, ಒಕ್ಕೂಟದ ಸ್ಪಷ್ಟನೆ! FWICE lifts Ban on Ranveer Singh

ನಟ ರಣವೀರ್​ ಸಿಂಗ್​ ಮೇಲೆ ಹೇರಿದ್ದ ಬ್ಯಾನ್​ ಹಿಂಪಡಿಕೆ
ನಟ ರಣವೀರ್​ ಸಿಂಗ್​ ಮೇಲೆ ಹೇರಿದ್ದ ಬ್ಯಾನ್​ ಹಿಂಪಡಿಕೆ
Published on

ಪ್ರಮುಖ ಮುಖ್ಯಾಂಶಗಳು

  • ನಟ ರಣವೀರ್​ ಸಿಂಗ್​ ಮೇಲೆ ಹೇರಿದ್ದ ಬ್ಯಾನ್​ ಹಿಂಪಡಿಕೆ
  • ನಿಷೇಧವನ್ನು ಹಿಂಪಡೆದ ಪಶ್ಚಿಮ ಭಾರತ ಚಲನಚಿತ್ರ ನೌಕರರ ಒಕ್ಕೂಟ (FWICE)
  • ನಮಗೆ ನಟನ ಮೇಲೆ ಯಾವುದೇ ದ್ವೇಷವಿಲ್ಲ ಎಂದು ಸ್ಪಷ್ಟನೆ
ಮುಂಬೈ: ಡಾನ್​ 3 ಸಿನಿಮಾದಿಂದ ರಣವೀರ್​ ಸಿಂಗ್​ ಹೊರಬಂದ ಕಾರಣ ನಟನ ಇನ್ನಾವುದೇ ಸಿನಿಮಾದಲ್ಲಿ ಕೆಲಸ ಮಾಡುವುದಿಲ್ಲ ಎಂದು ಪಶ್ಚಿಮ ಭಾರತ ಚಲನಚಿತ್ರ ನೌಕರರ ಒಕ್ಕೂಟ (FWICE) ಹೇರಿದ್ದ ಅಸಹಕಾರ ಅಥವಾ ನಿರ್ಬಂಧವನ್ನು ಬುಧವಾರ (ಜೂ.3) ಒಕ್ಕೂಟದ ಅಧ್ಯಕ್ಷ ಬಿ.ಎನ್​. ತಿವಾರಿ ರದ್ದು (FWICE lifts Ban on Ranveer Singh) ಪಡಿಸಿದ್ದಾರೆ.
ತನ್ನನ್ನು ಸಿನಿಮಾರಂಗದಿಂದ ಬ್ಯಾನ್​ ಮಾಡಿದ್ದಕ್ಕೆ ನಟ ರಣವೀರ್​ ಸಿಂಗ್​ ಒಕ್ಕೂಟಕ್ಕೆ ಲೀಗಲ್​ ನೋಟಿಸ್​ ಕಳುಹಿಸಿದ ನಂತರ ಈ ನಿರ್ಧಾರ ಹೊರಬಿದ್ದಿದೆ.

ನಮಗೆ ನಟನ ಬಗ್ಗೆ ಯಾವುದೇ ಅಸಮಾಧಾನವಿಲ್ಲ!

ಬುಧವಾರ (ಜೂ.3) ಮುಂಬೈನಲ್ಲಿ ಸುದ್ದಿಗೋಷ್ಟಿ ನಡೆಸಿದ ಪಶ್ಚಿಮ ಭಾರತ ಚಲನಚಿತ್ರ ನೌಕರರ ಒಕ್ಕೂಟ (FWICE), ನಮಗೆ ರಣವೀರ್​ ಮೇಲೆ ಯಾವುದೇ ದ್ವೇಷವಿಲ್ಲ. ನಿನ್ನೆ ರಣವೀರ್​ ಅವರ ಲೀಗಲ್​ ಟೀಮ್​ ಅವರ ಮೇಲೆ ಹೇರಿರುವ ಬ್ಯಾನ್​ನ್ನು ಹಿಂತೆಗೆದುಕೊಳ್ಳುವಂತೆ ಕೇಳಿ ಕೊಂಡಿತು ಎಂದು FWICE ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ತಿಳಿಸಿದ್ದಾರೆ.
ನಾನು ರಣವೀರ್​ ಸಿಂಗ್​ಗೆ ನಮ್ಮ ಜೊತೆ ಕುಳಿತು ವಿವಾದವನ್ನು ತಿಳಿಗೊಳಿಸಿ ಕೊಳ್ಳುವಂತೆ ಹೇಳಿದ್ದೆವೆ. ನಾವು ಅವರ ಸ್ಟಾರ್​ಡಂ ಅನ್ನು ಗೌರವಿಸುತ್ತೆವೆ. ನಮಗೆ ಯಾವುದೇ ನಟನನ್ನು ಬ್ಯಾನ್​ ಮಾಡುವ ಅಧಿಕಾರವಿಲ್ಲ. ಈಗಲಾದರೂ ನಟ ನಮ್ಮ ಜೊತೆ ಮಾತಕತೆಗೆ ಒಪ್ಪಿದ್ದಾರಲ್ಲ ಅದೇ ಖುಷಿಯ ವಿಷಯ ಎಂದು ಅವರು ಹೇಳಿದ್ದಾರೆ.

ರಣವೀರ್​ ಬೆನ್ನಿಗೆ ನಿಂತಿದ್ದ ಖ್ಯಾತ ನಾಮರು!

ನಟ ರಣವೀರ್​ ಸಿಂಗ್​ನನ್ನು ಹೀಗೆ ಬ್ಯಾನ್​ ಮಾಡುತ್ತಿದ್ದಂತೆ ಇದೊಂದು ವ್ಯವಸ್ಥಿತಿ ಸಂಚೆಂದು ಹಿರಿಯ ನಿರ್ದೇಶಕ, ರಾಮ್​ ಗೋಪಾಲ್​ ವರ್ಮಾ ಆರೋಪಿಸಿದ್ದರು. ಸಿನಿಮಾ ಒಕ್ಕೂಟಕ್ಕೆ ಥಿಯೇಟರ್​ಗೆ ಜನರನ್ನು ಕರೆತರುವ ತಾಕತ್ತಿಲ್ಲ, ರಣವೀರ್​ಗೆ ಆ ಶಕ್ತಿಯಿದೆ. ಒಕ್ಕೂಟದ ನಿರ್ಧಾರವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಖ್ಯಾತ ಕಾಂದಬರಗಾರ್ತಿ ಹಾಗೂ ಅಂಕಣಗಾರ್ತಿ ಶೋಭಾ ಡೇ, ರಣವೀರ್​ ನಟನೆಯ ಧುರಂಧರ್ ಸಿನಿಮಾದ ಯಶಸ್ಸು ಬಾಲಿವುಡ್​ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಇದರ ಹಿಂದೆ ಬಾಲಿವುಡ್​ ಮಾಫಿಯಾದ ಕುತಂತ್ರವಿದೆ ಎಂದು ಆರೋಪಿಸಿದ್ದರು.
ನಟಿ, ಸಂಸದೆ ಕಂಗನಾ ರಣಾವತ್​ ನೀವು ಏಳಿಗೆ ಕಾಣುತ್ತಿದ್ದಿರಿ ಎಂದರೆ ನಿಮಗೆ ಶತ್ರುಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ, ಇವೆಕ್ಕೆಲ್ಲ ತಲೆ ಕೆಡಿಸಿ ಕೊಳ್ಳಬಾರದೆಂದು ಕಂಗನಾ ಹೇಳಿಕೆ ನೀಡಿದ್ದರು.
FWICE ರಣವೀರ್​ನನ್ನು ಏಕೆ ಬಹಿಷ್ಕರಿಸಿದೆ?
ನಿರ್ದೇಶಕ ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಅವರ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಡಾನ್ 3 ಸಿನಿಮಾದಲ್ಲಿ ರಣವೀರ್​ ಸಿಂಗ್​ ನಾಯಕ ನಟನಾಗಿ ಕಾಣಿಸಿಕೊಳ್ಳಬೇಕಿತ್ತು.
ಸಿನಿಮಾದ ಪ್ರಾರಂಭಿಕ ಹಂತದಲ್ಲಿ ತಂಡದ ಜೊತೆಗಿದ್ದ ರಣವೀರ್​, ನಂತರ ಸಿನಿಮಾದಿಂದ ಹೊರ ನಡೆದಿದ್ದಾರೆ. ನಿರ್ದೇಶಕ ಫರ್ಹಾನ್ ಅಖ್ತರ್ ಹೇಳುವಂತೆ ಸಿನಿಮಾಗೆ ಈಗಾಗಲೇ ಸುಮಾರು 45 ಕೋಟಿ ಖರ್ಚಾಗಿದೆ. ಈಗ ಈ ಖರ್ಚನ್ನು ನಟನೇ ಭರಿಸಬೇಕು, ಇಲ್ಲವೇ ಸಿನಿಮಾದಲ್ಲಿ ನಟಿಸಬೇಕೆಂದು ಪಟ್ಟು ಹಿಡಿದು FWICE ಗೆ ದೂರು ನೀಡಿದ್ದಾರೆ. ಆದರೆ FWICE ನೀಡಿದ ನೋಟಿಸ್​ಗಳಿಗೆ ನಟ ರಣವೀರ್​ ಸಿಂಗ್​ ಸರಿಯಾಗಿ ಪ್ರತಿಕ್ರಿಯಿಸದ ಹಿನ್ನಲೆಯಲ್ಲಿ ನಾವು ರಣವೀರ್​ನ ಯ ಯಾವುದೇ ಸಿನಿಮಾದಲ್ಲಿ ಸಹಾಯಕ್ಕೆ ಬರುವುದಿಲ್ಲವೆಂದು ಒಕ್ಕೂಟ ತಿಳಿಸಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net