ಡಾನ್​ 3 ವಿವಾದ: ನೀವು ಬೆಳೆದಂತೆ ನಿಮ್ಮ ವೈರಿಗಳ ಸಂಖ್ಯೆ ಹೆಚ್ಚುತ್ತದೆ; ನಟ ರಣವೀರ್​ ಸಿಂಗ್​ ಬೆನ್ನಿಗೆ ನಿಂತ ಕಂಗನಾ ರಣಾವತ್​! Kangana Ranaut on Ranveer Singh

ರಣವೀರ್​ ಸಿಂಗ್​ ಪರ ನಿಂತ ನಟಿ, ಸಂಸದೆ ಕಂಗನಾ ರಣಾವತ್​
ರಣವೀರ್​ ಸಿಂಗ್​ ಪರ ನಿಂತ ನಟಿ, ಸಂಸದೆ ಕಂಗನಾ ರಣಾವತ್​
Published on

ಪ್ರಮುಖ ಮುಖ್ಯಾಂಶಗಳು

  • ನಟ ರಣವೀರ್​ ಸಿಂಗ್​ ಮೇಲೆ ನಿಷೇಧ ಹೇರಿದ ಚಲನಚಿತ್ರ ಕಾರ್ಮಿಕರ ಒಕ್ಕೂಟ
  • ನಿಮ್ಮ ಏಳಿಗೆಯಾದಂತೆ ಶತ್ರುಗಳ ಸಂಖ್ಯೆ ಹೆಚ್ಚುತ್ತದೆ
  • ರಣವೀರ್​ ಸಿಂಗ್​ ಪರ ನಿಂತ ನಟಿ, ಸಂಸದೆ ಕಂಗನಾ ರಣಾವತ್​
ಮುಂಬೈ: ಕೆಲ ದಿನಗಳ ಹಿಂದೆ ಡಾನ್​ 3 ಸಿನಿಮಾದಿಂದ ರಣವೀರ್​ ಸಿಂಗ್​ ಹೊರಬಂದ ಹಿನ್ನಲೆಯಲ್ಲಿ ಬಾಲಿವುಡ್​ನ ಚಲನಚಿತ್ರ ಕಾರ್ಮಿಕರ ಒಕ್ಕೂಟ (FWICE) ನಟ ವಿರುದ್ಧ ಬಹಿಷ್ಕಾರವನ್ನು ಘೋಷಿಸಿದೆ.
ತನ್ನ ಸಿನಿಮಾದಲ್ಲಿ ನಟಿಸುವುದಾಗಿ ಒಪ್ಪಿಕೊಂಡು ನಂತರ ಸಿನಿಮಾದಿಂದ ಹೊರಬಿದ್ದ ಕಾರಣ, ನನಗೆ ಅಪಾರ ಆರ್ಥಿಕ ನಷ್ಟ ಸಂಭವಿಸಿದೆಂದು ನಿರ್ದೇಶಕ ಫರ್ಹಾನ್​ ಅಖ್ತರ್​ ಒಕ್ಕೂಟಕ್ಕೆ ದೂರನ್ನು ನೀಡಿದ ಪರಿಣಾಮ ಈ ನಿಷೇಧ ಹೇರಲಾಗಿದೆ.
ಇತ್ತೀಚೆಗೆ ತಮ್ಮ ನೂತನ ಸಿನಿಮಾ ಭಾರತ ಭಾಗ್ಯ ವಿಧಾತಾ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ನಟಿ, ಸಂಸದೆ ಕಂಗನಾ ರಣಾವತ್ (Kangana Ranaut on Ranveer Singh)​, ರಣವೀರ್​ ಮೇಲೆ ಹೇರಲಾಗಿರುವ ನಿಷೇಧವನ್ನು ಟೀಕಿಸಿದ್ದಾರೆ.

ನೀವು ಬೆಳೆದಂತೆ ನಿಮ್ಮ ವೈರಿಗಳು ಹೆಚ್ಚಾಗುತ್ತಾರೆ!

ನಟ ರಣವೀರ್​ ಸಿಂಗ್​ರನ್ನು ಚಲನಚಿತ್ರ ಕಾರ್ಮಿಕರ ಒಕ್ಕೂಟ ಬ್ಯಾನ್​ ಮಾಡಿದಕ್ಕೆ ಪ್ರತಿಕ್ರಿಯಿಸಿದ ನಟಿ, ನೀವು ಉನ್ನತ ಮಟ್ಟಕ್ಕೆ ಬೆಳೆದಂತೆ ನಿಮಗೆ ಶತ್ರುಗಳ ಸಂಖ್ಯೆ ಹೆಚ್ಚಾಗುತ್ತದೆ ಹೊರತು ಕಡೆಮೆ ಆಗುವುದಿಲ್ಲ. ನೀವು ಬೆಳೆವಣಿಗೆ ಹೊಂದುತ್ತಿದ್ದಿರಿ ಆದರೆ ನಿಮಗೆ ವೈರಿಗಳೇ ಇಲ್ಲ ಎನ್ನಲು ಸಾಧ್ಯವೇ ಇಲ್ಲ.
ಜೀವನ ಪಯಣ ಎಂದಿಗೂ ಹೂವಿನ ಹಾಸಿಗೆ ಆಗಿರುವುದಿಲ್ಲ. ಅಲ್ಲಿ ನೂರಾರು ಅಡೆತಡೆಗಳು ಎದುರಾಗುತ್ತಲೇ ಇರುತ್ತದೆ. ಅವೆಲ್ಲವನ್ನು ಮೆಟ್ಟಿ ನಿಂತರೆ ಮಾತ್ರ ಯಶಸ್ಸು ನಮ್ಮದಾಗುತ್ತದೆ ಎಂದಿದ್ದಾರೆ.

FWICE ರಣವೀರ್​ನನ್ನು ಏಕೆ ಬಹಿಷ್ಕರಿಸಿದೆ?

ನಿರ್ದೇಶಕ ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಅವರ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಡಾನ್ 3 ಸಿನಿಮಾದಲ್ಲಿ ರಣವೀರ್​ ಸಿಂಗ್​ ನಾಯಕ ನಟನಾಗಿ ಕಾಣಿಸಿಕೊಳ್ಳಬೇಕಿತ್ತು.
ಸಿನಿಮಾದ ಪ್ರಾರಂಭಿಕ ಹಂತದಲ್ಲಿ ತಂಡದ ಜೊತೆಗಿದ್ದ ರಣವೀರ್​, ನಂತರ ಸಿನಿಮಾದಿಂದ ಹೊರ ನಡೆದಿದ್ದಾರೆ. ನಿರ್ದೇಶಕ ಫರ್ಹಾನ್ ಅಖ್ತರ್ ಹೇಳುವಂತೆ ಸಿನಿಮಾಗೆ ಈಗಾಗಲೇ ಸುಮಾರು 45 ಕೋಟಿ ಖರ್ಚಾಗಿದೆ. ಈಗ ಈ ಖರ್ಚನ್ನು ನಟನೇ ಭರಿಸಬೇಕು, ಇಲ್ಲವೇ ಸಿನಿಮಾದಲ್ಲಿ ನಟಿಸಬೇಕೆಂದು ಪಟ್ಟು ಹಿಡಿದು FWICE ಗೆ ದೂರು ನೀಡಿದ್ದಾರೆ. ಆದರೆ FWICE ನೀಡಿದ ನೋಟಿಸ್​ಗಳಿಗೆ ನಟ ರಣವೀರ್​ ಸಿಂಗ್​ ಸರಿಯಾಗಿ ಪ್ರತಿಕ್ರಿಯಿಸದ ಹಿನ್ನಲೆಯಲ್ಲಿ ನಾವು ರಣವೀರ್​ನ ಯ ಯಾವುದೇ ಸಿನಿಮಾದಲ್ಲಿ ಸಹಾಯಕ್ಕೆ ಬರುವುದಿಲ್ಲವೆಂದು ಒಕ್ಕೂಟ ತಿಳಿಸಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net