ಕತ್ತರಿಸಿದ ಕೂಡಲೇ ಸೇಬು ಹಣ್ಣಿನ ಬಣ್ಣ ಬದಲಾಗಬಾರದೇ? ಹಾಗಾದರೆ ಈ ಸಿಂಪಲ್​​ ಟಿಪ್ಸ್​ ಬಳಸಿ... Apples

ಕತ್ತರಿಸಿದ ಕೂಡಲೇ ಸೇಬು ಹಣ್ಣಿನ ಬಣ್ಣ ಬದಲಾಗಬಾರದೇ? ಹಾಗಾದರೆ ಈ ಸಿಂಪಲ್​​ ಟಿಪ್ಸ್​ ಬಳಸಿ... Apples
ಕತ್ತರಿಸಿದ ಕೂಡಲೇ ಸೇಬು ಹಣ್ಣಿನ ಬಣ್ಣ ಬದಲಾಗಬಾರದೇ? ಹಾಗಾದರೆ ಈ ಸಿಂಪಲ್​​ ಟಿಪ್ಸ್​ ಬಳಸಿ... Apples
Published on

ಪ್ರಮುಖ ಮುಖ್ಯಾಂಶಗಳು

  • ಹಣ್ಣುಗಳಲ್ಲಿ ಸೇಬಿಗೆ ತುಂಬಾ ಪ್ರಾಮುಖ್ಯತೆ ಇದೆ
  • ಈ ಹಣ್ಣನ್ನು ಆರೋಗ್ಯದ ಕಣಜ ಎಂದೇ ಕರೆಯಲಾಗುತ್ತದೆ
  • ಸೇಬಿನಲ್ಲಿ ಅಧಿಕ ಪ್ರಮಾಣದ ನಾರಿನಂಶ ಮತ್ತು ವಿಟಮಿನ್ ಸಿ ಇವೆ
  • ಸೇಬಿನಲ್ಲಿರುವ ಆ್ಯಂಟಿ-ಆಕ್ಸಿಡೆಂಟ್‌ಗಳು ದೇಹದ ಜೀವಕೋಶಗಳನ್ನು ಹಾನಿಯಿಂದ ರಕ್ಷಿಸುತ್ತವೆ
Apples : ಆರೋಗ್ಯಕರ ಆಹಾರ ಕ್ರಮದಲ್ಲಿ ಹಣ್ಣುಗಳು ತುಂಬಾನೇ ಮುಖ್ಯ. ಮಾನವನ ಆರೋಗ್ಯವನ್ನು ಕಾಪಾಡುವಲ್ಲಿ ಹಣ್ಣುಗಳು ಪ್ರಮುಖ ಪಾತ್ರ ವಹಿಸುತ್ತವೆ. ಅದರಲ್ಲೂ ಸೀಸನ್​ಗೆ ತಕ್ಕಂತೆ ಹಣ್ಣುಗಳ ಸೇವನೆ ಮಾಡಿದರೆ ಯಾವುದೇ ರೋಗಗಳಾಗಲಿ ನಮ್ಮ ಬಳಿ ಸುಳಿಯುವುದೇ ಇಲ್ಲ. ಹಣ್ಣುಗಳಲ್ಲಿ ಸೇಬಿಗೆ ತುಂಬಾ ಪ್ರಾಮುಖ್ಯತೆ ಇದೆ. ಈ ಹಣ್ಣನ್ನು ಆರೋಗ್ಯದ ಕಣಜ ಎಂದೇ ಕರೆಯಲಾಗುತ್ತದೆ. 

ಹೃದಯದ ಆರೋಗ್ಯ

ಪೋಷಕಾಂಶಗಳ ಗಣಿ ಎಂದು ಹೆಸರುವಾಸಿಯಾಗಿರುವ ಸೇಬಿನಲ್ಲಿ ಅಧಿಕ ಪ್ರಮಾಣದ ನಾರಿನಂಶ ಮತ್ತು ವಿಟಮಿನ್ ಸಿ ಇವೆ. ಇವು ದೇಹದ ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಅಲ್ಲದೆ, ಇದರಲ್ಲಿ ಪೊಟ್ಯಾಸಿಯಮ್ ಮತ್ತು ವಿಟಮಿನ್ ಕೆ ಕೂಡ ಅಲ್ಪ ಪ್ರಮಾಣದಲ್ಲಿದ್ದು, ಹೃದಯದ ಆರೋಗ್ಯಕ್ಕೆ ಮತ್ತು ಮೂಳೆಗಳ ಬಲವರ್ಧನೆಗೆ ಪೂರಕವಾಗಿವೆ.

ಸಕ್ಕರೆ ಮಟ್ಟ ನಿಯಂತ್ರಣ

ಇನ್ನೂ ಸೇಬಿನಲ್ಲಿರುವ ಆ್ಯಂಟಿ-ಆಕ್ಸಿಡೆಂಟ್‌ಗಳು ದೇಹದ ಜೀವಕೋಶಗಳನ್ನು ಹಾನಿಯಿಂದ ರಕ್ಷಿಸುತ್ತವೆ ಮತ್ತು ಚರ್ಮದ ಕಾಂತಿಯನ್ನು ಹೆಚ್ಚಿಸಲು ನೆರವಾಗುತ್ತವೆ. ಇದರಲ್ಲಿ ನೈಸರ್ಗಿಕ ಸಕ್ಕರೆಯಂಶವಿದ್ದರೂ, ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇದು ಉತ್ತಮ ಹಣ್ಣಾಗಿದೆ. ದಿನಕ್ಕೊಂದು ಸೇಬು ತಿನ್ನುವುದು ಒಟ್ಟಾರೆ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಪ್ರಯೋಜನಕಾರಿ.

ಸೇಬು ಬಣ್ಣ ಬದಲಾಗುತ್ತಾ?

ಬೇಸಿಗೆ ಕಾಲವಾದ್ದರಿಂದ ಹೆಚ್ಚಿನ ಜನರು ತಮ್ಮ ಆಹಾರದಲ್ಲಿ ಬಹಳಷ್ಟು ಹಣ್ಣುಗಳನ್ನು ಸೇರಿಸಿಕೊಳ್ಳುತ್ತಾರೆ. ಹೀಗಾಗಿ, ಸೇಬಿಗೆ ಈಗ ಹೆಚ್ಚಿನ ಬೇಡಿಕೆಯಿದೆ. ನೀವು ಗಮನಿಸಿರಬಹುದು ಕತ್ತರಿಸಿದ ನಂತರ ಸೇಬಿನ ಬಣ್ಣ ಬದಲಾಗುತ್ತದೆ. ಇದು ಸಾಮಾನ್ಯವಾಗಿ ಕಂಡುಬರುವ ದೃಶ್ಯವಾಗಿದೆ. ಬಿಳಿ ಬಣ್ಣದಲ್ಲಿರುವ ಹಣ್ಣು ಕಂದು ಬಣ್ಣಕ್ಕೆ ತಿರುಗುತ್ತದೆ. ಇದಕ್ಕೆ ಕಾರಣ ಪಾಲಿಫಿನಾಲ್ ಆಕ್ಸಿಡೇಸ್ ಎಂಬ ಕಿಣ್ವ. ಈ ಕಾರಣಕ್ಕಾಗಿ, ಸೇಬು ಹಣ್ಣನ್ನು ಕತ್ತರಿಸಿ ಇಡುವುದಿಲ್ಲ. ಆದರೆ, ಸೇಬು ಹಣ್ಣಿನ ಬಣ್ಣ ಬದಲಾಗದಂತೆ ನೋಡಿಕೊಳ್ಳಲು ಮನೆಯಲ್ಲಿಯೇ ಉತ್ತಮ ಪರಿಹಾರವಿದೆ. ಆ ಪರಿಹಾರಗಳು ಏನು ಅನ್ನೋದನ್ನು ನಾವೀಗ ತಿಳಿದುಕೊಳ್ಳೋಣ. 
* ಒಂದು ಬಟ್ಟಲು ತಣ್ಣೀರನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ. ಇದರಲ್ಲಿ ಸೇಬಿನ ಚೂರುಗಳನ್ನು ನೆನೆಸುವುದರಿಂದ ಬಣ್ಣ ಬದಲಾಗುವುದನ್ನು ತಡೆಯಬಹುದು.
* ಒಂದು ಲೋಟ ನೀರಿನಲ್ಲಿ ಎರಡು ಚಮಚ ಜೇನುತುಪ್ಪವನ್ನು ಬೆರೆಸಿ ಈ ಮಿಶ್ರಣದಲ್ಲಿ ಸೇಬಿನ ಚೂರುಗಳನ್ನು ನೆನೆಸಿ.
* ಸೇಬಿನ ಚೂರುಗಳನ್ನು ಉಪ್ಪು ನೀರಿನಲ್ಲಿ ನೆನೆಸುವುದರಿಂದ ಬಣ್ಣ ಬದಲಾಗುವುದನ್ನು ತಡೆಯಬಹುದು.
* ಸೇಬಿನ ಚೂರುಗಳನ್ನು ಸ್ವಲ್ಪ ಸಮಯದವರೆಗೆ ವಿನೆಗರ್ ನೀರಿನಲ್ಲಿ ನೆನೆಸಬಹುದು.
* ಕತ್ತರಿಸಿದ ನಂತರ, ನೀವು ಅದನ್ನು ಪ್ಲಾಸ್ಟಿಕ್ ಹೊದಿಕೆ ಅಥವಾ ಫಾಯಿಲ್‌ನಲ್ಲಿ ಸುತ್ತಿ ಸಂಗ್ರಹಿಸಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net