ದೀರ್ಘಾವಧಿಯ ಜೀವನಕ್ಕಾಗಿ ಈ ಮೂರು ಅಭ್ಯಾಸಗಳನ್ನು ಅನುಸರಿಸಿ...| Health tips

Heart Healthy Food
Published on

Health tips: ಇತ್ತೀಚೆಯ ದಿನಗಳಲ್ಲಿ ಹದಿಹರೆಯರಲ್ಲಿಯೇ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಿ ಬೆಳಕಿಗೆ ಬರಲಾರಂಭಿಸಿವೆ. ಇದಕ್ಕೆ ನಾವು ಸೇವಿಸುವ ಆಹಾರದ ಸಮಸ್ಯೆ ಕೂಡ ಇರಬಹುದು. ಇಲ್ಲವೇ, ಅನುವಂಶೀಕವಾಗಿಯು ಬರಬಹುದು. ಹೇಳುವುದಾದರೆ, ಹೃದಯದ ಆರೋಗ್ಯವು ದೀರ್ಘಾವಧಿಯ ಜೀವನದ ಮೂಲಾಧಾರವಾಗಿದೆ. ಇದನ್ನು ಸದೃಡವಾಗಿಟ್ಟುಕೊಳ್ಳಲು ಈ ಮೂರು ಅಭ್ಯಾಸಗಳನ್ನು ಚಾಚು ತಪ್ಪದೆ ಮಾಡುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇವು ತುಂಬಾ ಸುಲಭವಾಗಿದ್ದರೂ ತುಂಬಾ ಗಮನಾರ್ಹವಾಗಿ ಪರಿಣಾಮ ಬೀರುತ್ತವೆ.

* ಸಮತೋಲಿತ ಆಹಾರ ಸೇವನೆ

ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೊದಲು ಹೃದ್ರೋಗ ತಜ್ಞರು ಸಮತೋಲಿತ ಆಹಾರಕ್ಕೆ ಆದ್ಯತೆ ನೀಡುತ್ತಾರೆ. ಅವರು ಹೇಳುವ ಪ್ರಕಾರ, ಹಣ್ಣುಗಳು, ತರಕಾರಿಗಳು, ಸಂಪೂರ್ಣ ಧಾನ್ಯಗಳು, ಒಮೆಗಾ-3 ಕೊಬ್ಬಿನಾಮ್ಲಗಳಿರುವ ಮೀನು, ಮತ್ತು ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳನ್ನು ಆಹಾರದಲ್ಲಿ ಬಳಸುವುದರಿಂದ ಕೊಲೆಸ್ಟ್ರಾಲ್​ ಮಟ್ಟವನ್ನು ಕಡಿಮೆ ಮಾಡಿ, ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ.

Superfood in summer

ಇನ್ನು ಸಂಸ್ಕರಿಸಿದ ಆಹಾರ, ಅತಿಯಾದ ಸಕ್ಕರೆಯನ್ನು ಸೇವಿಸುವುದನ್ನು ನಿಯಂತ್ರಿಸಬೇಕು. ಉದಾಹರಣೆಗೆ ಮೆಡಿಟರೇನಿಯನ್ ಆಹಾರವನ್ನು ಅನುಸರಿಸುವುದು. ಅಂದರೆ, ಆಲಿವ್ ಎಣ್ಣೆ, ಬೀಜಗಳು, ಮತ್ತು ಸೊಪ್ಪುಗಳನ್ನು ಸೇವಿಸುವುದರಿಂದ ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

* ದೈಹಿಕ ಚಟುವಟಿಕೆ

ಪ್ರತಿನಿತ್ಯ ಮಾಡುವ ನಿಯಮಿತ ಚಟುವಟಿಕೆಯು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ವಾರಕ್ಕೆ ಕನಿಷ್ಠ 150 ನಿಮಿಷಗಳ ಏರೋಬಿಕ್​ ಚಟುವಟಿಕೆಗಳನ್ನು ಮಾಡುವುದು. ಉದಾಹರಣೆಗೆ ತ್ವರಿತ ನಡಿಗೆ, ಈಜುವುದು, ಸೈಕ್ಲಿಂಗ್​ ವ್ಯಾಯಾಮವನ್ನು ಮಾಡುವುದು. ಇದರ ಜೊತೆಗೆ ವಾರಕ್ಕೆ ಎರಡು ದಿನ ಸ್ನಾಯು ಬಲವರ್ಧನೆಯ ವ್ಯಾಯಾಮವನ್ನು ಮಾಡುವುದರಿಂದ ಆರೋಗ್ಯವನ್ನು ಸುಧಾರಿಸಲು ಸಹಾಯವಾಗುತ್ತದೆ. ಈ ಚಟುವಟಿಕೆಗಳು ರಕ್ತದೊತ್ತಡವನ್ನು ಕಡಿಮೆ ಮಾಡಿ, ರಕ್ತದ ಚಲನೆಯನ್ನು ಸುಧಾರಿಸಿ, ಒತ್ತಡವನ್ನು ಕಡಿಮೆ ಮಾಡುತ್ತವೆ.

* ಒತ್ತಡ ನಿರ್ವಹಣೆ ಹಾಗೂ ನಿದ್ರೆ

ನಮ್ಮಲ್ಲಿರುವ ಒತ್ತಡವು ಹೃದಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಆದರಿಂದ ಧ್ಯಾನ, ಯೋಗ, ಆಳವಾದ ಉಸಿರಾಟ ಮಾಡುವ ತಂತ್ರಗಳನ್ನು ಮಾಡುವುದರಿಂದ ಹೃದಯೀ ಸಂಬಂಧಿ ಕಾಯಿಲೆಗಳಿಂದ ಹಿಂದೆ ಸರಿಯಬಹುದು. ಹಾಗೇ ದಿನಕ್ಕೆ 7-8 ಗಂಟೆಗಳ ಗುಣಮಟ್ಟದ ನಿದ್ರೆಯನ್ನು ಮಾಡುವುದರಿಂದ ಆರೋಗ್ಯ ಸುಧಾರಿಸುತ್ತದೆ. ನಿಮ್ಮ ದಿನಚರಿಯಲ್ಲಿ ವಿಶ್ರಾಂತಿಗೆ ಸಮಯವನ್ನು ಮೀಸಲಿಡಿ ಹಾಗೂ ಧನಾತ್ಮಕ ಮನಸ್ಥಿತಿಯನ್ನು ಕಾಪಾಡಿಕೊಳ್ಳಿ.

Sleep

ಸಮತೋಲಿತ ಆಹಾರ ಸೇವನೆ, ವ್ಯಾಯಾಮ ಹಾಗೂ ಒತ್ತಡ ನಿರ್ವಹಣೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಹಾಗೂ ಈ ಅಭ್ಯಾಸಗಳು ದೀರ್ಘಾವಧಿಯ ಜೀವನವನ್ನು ಸುಧಾರಿಸಿ, ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net