

Health tips: ಇಂದಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಬೇಗ ವಯಸ್ಸಾದಂತೆ ಭಾಸವಾಗುತ್ತಿರುತ್ತದೆ. ಅಂದಹಾಗೇ, 40 ವರ್ಷಗಳ ನಂತರವೂ ಯೌವನವನ್ನು ಕಾಪಾಡಿಕೊಳ್ಳಲು ಅನೇಕ ರೀತಿಯ ಮಾರ್ಗೋಪಾಯಗಳನ್ನು ಇಂದಿನ ಯುವಜನತೆ ಬೆನ್ನಟ್ಟುತ್ತಿದೆ. ಹಾಗೇ ಯೌವ್ವನದ ಚೈತನ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಜೀವನಶೈಲಿ, ಮಾನಸಿಕ ಶಾಂತಿ ಮತ್ತು ಸಕಾರಾತ್ಮಕ ಮನೋಭಾವ ಅತ್ಯಗತ್ಯ. ಆದರಿಂದ ಈ ಕೆಳಗೆ ನೀಡಿರುವ ವಿಧಾನಗಳನ್ನು ಅನುಸರಿಸಿ ಯೌವನವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.
ನಾವು ಸೇವಿಸುವ ಸಮತೋಲಿತ ಆಹಾರವು ಯೌವನದ ಮೊದಲ ರಹಸ್ಯವಾಗಿದೆ. ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳು ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳಿಂದ ಕೂಡಿದ ಮೀನು, ಬೀಜಗಳನ್ನು ಸೇವಿಸಿ. ವಿಟಮಿನ್ ಡಿ, ಇವುಗಳು ದೇಹದಲ್ಲಿರುವ ಕ್ಯಾಲ್ಸಿಯಂ ಮತ್ತು ಉತ್ಕರ್ಷಣ ನಿರೋಧಕಗಳನ್ನು ಕಾಪಾಡಿ ಮೂಳೆಗಳನ್ನು ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ. ಇನ್ನು ಸಂಸ್ಕರಿಸಿದ ಆಹಾರಗಳನ್ನು ತಿನ್ನುವುದನ್ನು ತಪ್ಪಿಸಿ. ದಿನಕ್ಕೆ 4 ಲೀಟರ್ ನೀರು ಕುಡಿಯಿರಿ ಇದು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ.
ದಿನನಿತ್ಯ ನಾವು ಅಡುವಂತಹ ದೈಹಿಕ ಚಟುವಟಿಕೆಗಳು ದೇಹವನ್ನು ಸದೃಢವಾಗಿಡುತ್ತದೆ. ಆದರಿಂದ ವಾರಕ್ಕೆ ಕನಿಷ್ಠ 150 ನಿಮಿಷಗಳ ಕಾಲ ನಡೆಯುವುದು, ಓಡುವುದು, ಈಜುವುದನ್ನು ಮಾಡಿ. ಯೋಗ ಮತ್ತು ಧ್ಯಾನವು ಸಹ ನಮ್ಮ ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಇದು ವಯಸ್ಸಾದ ಚಿಹ್ನೆಗಳನ್ನು ತಗ್ಗಿಸಿ ಯೌವನದ ಚೈತನ್ಯವನ್ನು ಹೆಚ್ಚಿಸುತ್ತದೆ.
ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದರಿಂದ ನಮ್ಮ ದೇಹವು ಸದೃಢವಾಗಿರಲು ಸಹಾಯ ಮಾಡುತ್ತದೆ. ಇನ್ನು ಯೌವನದಿಂದ ಇರಲು ಮುಖ್ಯವಾಗಿ, ಧ್ಯಾನ, ಯೋಗ, ಆಳವಾದ ಉಸಿರಾಟದ ತಂತ್ರಗಳು ಮನಸ್ಸನ್ನು ಶಾಂತಗೊಳಿಸುತ್ತವೆ. ಇದರಿಂದ ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ, ಹೊಸ ಕೌಶಲ್ಯಗಳನ್ನು ಕಲಿಯುವುದರಿಂದ ಮೆದುಳು ಸಕ್ರಿಯವಾಗಿರುತ್ತದೆ.
ವಯಸ್ಸಾಗದಂತೆ ಚರ್ಮದ ಕಾಂತಿಯನ್ನು ಕಾಪಾಡಲು ಗುಣಮಟ್ಟದ ಮಾಯಿಶ್ಚರೈಸರ್, ಸನ್‌ಸ್ಕ್ರೀನ್ ಮತ್ತು ರೆಟಿನಾಲ್ ಒಳಗೊಂಡ ಉತ್ಪನ್ನಗಳನ್ನು ಬಳಸಿ. ಇದು ಚರ್ಮದ ತೇವಾಂಶವನ್ನು ಕಾಪಾಡುತ್ತದೆ ಹಾಗೆಯೇ ಆರೋಗ್ಯಕರ ಆಹಾರ ಮತ್ತು ನೀರಿನ ಸೇವನೆಯ ಜೊತೆಗೆ ರಾತ್ರಿಯಲ್ಲಿ 7-8 ಗಂಟೆಗಳ ಕಾಲ ನಿದ್ರೆಯನ್ನು ಮಾಡಿ. ಇದು ಚರ್ಮದ ಸುಕ್ಕುಗಟ್ಟುವುದನ್ನು ಕಡಿಮೆ ಮಾಡುತ್ತದೆ.
ಯಾವುದೇ ವ್ಯಕ್ತಿಯು ವಯಸ್ಸಾದಂತೆ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಲು ಪ್ರಾರಂಭಿಸುತ್ತಾನೆ. ಹಾಗಾಗಿ ಆರಂಭದಲ್ಲೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತೀ ಮುಖ್ಯವಾಗಿದೆ. ರಕ್ತದೊತ್ತಡ, ಸಕ್ಕರೆ ಮಟ್ಟ, ಕೊಲೆಸ್ಟ್ರಾಲ್ ಮತ್ತು ಥೈರಾಯ್ಡ್ ಪರೀಕ್ಷೆಗಳನ್ನು ಮಾಡಿಸಿ. ಮಹಿಳೆಯರಿಗೆ ಮಾಮೊಗ್ರಾಮ್ ಮತ್ತು ಪುರುಷರಿಗೆ ಪ್ರಾಸ್ಟೇಟ್ ತಪಾಸಣೆ ಬಹಳ ಮುಖ್ಯವಾಗಿರುತ್ತದೆ.
ಪುರುಷರಾಗಲಿ ಅಥವಾ ಮಹಿಳೆಯರಾಗಲಿ ಧೂಮಪಾನ ಮತ್ತು ಮದ್ಯಪಾನ ಮಾಡುವುದನ್ನು ನಿಲ್ಲಿಸಿ. ಇವು ನಿಮ್ಮ ಚರ್ಮ, ಯಕೃತ್ ಹಾಗೂ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಹಾಗಾಗಿ ಹೊಸ ಹವ್ಯಾಸಗಳನ್ನು ಅಳವಡಿಸಿಕೊಳ್ಳಿ. ಓದುವುದು ಸಂಗೀತ ಕೇಳುವುದು ತೋಟಗಾರಿಕೆಯಂತಹ ಚಟುವಟಿಕೆಗಳು ಮನಸ್ಸನ್ನು ಚೈತನ್ಯದಿಂದ ಇಡುತ್ತವೆ.(ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ