

Fashion Date: ಇತ್ತೀಚೆಗೆ ನ್ಯೂಯಾರ್ಕ್ ಫ್ಯಾಷನ್ ವೀಕ್ನಲ್ಲಿ ಫ್ಯಾಷನ್ ಡಿಸೈನರ್ ರಾಲ್ಫ್ ಲಾರೆನ್ ತಮ್ಮ ಇತ್ತೀಚಿನ ಸಂಗ್ರಹವನ್ನು ಬ್ರ್ಯಾಂಡ್‌ನ ಮ್ಯಾಡಿಸನ್ ಅವೆನ್ಯೂ ಪ್ರಧಾನ ಕಚೇರಿಯಲ್ಲಿ ಅನಾವರಣಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಹಾಲಿವುಡ್ ನಟಿ ಜೆಸ್ಸಿಕಾ ಚಸ್ಟೈನ್, ಟಾಕ್ ಶೋ ನಿರೂಪಕಿ ಓಪ್ರಾ ವಿನ್‌ಫ್ರೇ, ಪ್ರಿಯಾಂಕಾ ಮತ್ತು ನಿಕ್ ಜೋನಾಸ್ ಸೇರಿದಂತೆ ಹಲವಾರು ತಾರಾ ಬಳಗ ಹಾಜರಿದ್ದರು.
ಈ ಪ್ರದರ್ಶನದಲ್ಲಿ ಪ್ರಿಯಾಂಕ ಚೋಪ್ರಾ ಹಾಗೂ ಆಕೆಯ ಪತಿ ನಿಕ್ ಜೋಸಾನ್ ಆಗಮಿಸಿದ್ದು, ಕಾರ್ಯಕ್ರಮದ ಮೆರಗನ್ನು ಇನ್ನಷ್ಟು ಹೆಚ್ಚಿಸಿದರು. ಹಾಗೇ ಇವರಿಬ್ಬರೂ ಕಾರ್ಯಕ್ರಮದಲ್ಲಿ ಕೇವಲ ಹಾಜರಾಗಲು ಬಂದಂತೆ ಭಾಸವಾಗಿಲ್ಲ. ಬದಲಿಗೆ ಅವರು ಮೂಲತಃ ಫ್ಯಾಷನ್ ಗಾಲಾದಲ್ಲಿ ಭಾಗವಹಿಸಲು ಬಂದಂತೆ ಕಾಣುತ್ತಿದ್ದರು.
ಬಾಲಿವುಡ್ನ ಪ್ರೀತಿಯ ದೇಸೀ ಹುಡುಗಿ ಪ್ರಿಯಾಂಕರವರ ಲುಕ್ ಬಾರೀ ಆಕರ್ಷವಾಗಿತ್ತು. ಅವರು ತಮ್ಮ ಲುಕ್ನಲ್ಲಿ ಮ್ಯಾಕ್ಸಿ, ಸ್ಕರ್ಟ್ ಅನ್ನು ಅಲ್ಟ್ರಾ ಚೆಕ್ ರೂಪದಲ್ಲಿ ವಿನ್ಯಾಸಗೊಳಿಸಿದ್ದರು. ಆಕೆಯ ಸ್ಕರ್ಟ್ ತಲೆಯಿಂದ ಕಾಲಿನವರೆಗೂ ಕಂದು ಬಣ್ಣದಿಂದ ಕೂಡಿತ್ತು. ಹಾಗೆಯೇ, ಆಕೆ ಧರಿಸದ್ದ ಬ್ಲೇಸರ್ ಅಲಂಕಾರವಾಗಿತ್ತು. ಈ ವಿನ್ಯಾಸ ಅಲ್ಲಿ ಬಂದಂತವರನ್ನು ಬೆರಗುಗೊಳಿಸುತ್ತಿತ್ತು.
ಇನ್ನು ಪ್ರಿಯಾಂಕಾ ಅವರ ಮೇಕಪ್ ಕಂದು ಬಣ್ಣದ ಉಡುಪುಗಳಿಗೆ ಹೊಂದಿಕೊಳ್ಳುವಂತೆ ಇತ್ತು. ಕೆನ್ನೆಗಳು ಹೊಳೆಯುವಂತೆ ಬ್ಲಷ್ ಮಾಡಿದ್ದರು. ಹಾಗೇ ಇವರ ಕಿವಿ ಓಲೆಗಳು ಅವರ ಉಡುಪುಗಳಿಗೆ ಸಂಯೋಜನೆ ಹೊಂದಿದ್ದವು. ಹಾಗೇ ಅವರು ಸೊಂಟಕ್ಕೆ ಧರಸಿದ ಬೆಲ್ಟ್ ಕೂಡಾ ಆಕರ್ಷಕವಾಗಿತ್ತು.
ಪ್ರಿಯಾಂಕ ಅವರ ಪತಿ ಕೂಡಾ ಕಂದು ಬಣ್ಣದ ಉಡುಪನ್ನು ಧರಿಸಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಇನ್ನು ಇವರು ಧರಿಸಿದ್ದ ಬಟ್ಟೆ ವಿನ್ಯಾಸದ ಬಗ್ಗೆ ಯಾರೂ ಸಹ ಪ್ರಶ್ನೆ ಮಾಡಲು ಸಾಧ್ಯವಿಲ್ಲ ಎಂದು ಸಾಬೀತು ಪಡಿಸಿದರು. ನಿಕ್ ತನ್ನ ಕಂದು ಬಣ್ಣದ ಬ್ಲೇಸರ್, ಬೀಜ್ ಬಣ್ಣದ ಟೈ ಧರಿಸಿದ್ದು, ಕಾರ್ಯಕ್ರಮದಲ್ಲಿ ಗಮನಸೆಳೆಯುತ್ತಿದ್ದರು. (ಏಜೆನ್ಸೀಸ್)