

Headaches: ಸಾಮಾನ್ಯವಾಗಿ ತಲೆನೋವು ಪ್ರತಿದಿನ ಸಾಕಷ್ಟು ಜನರನ್ನು ಬಾಧಿಸುತ್ತದೆ. ಇದು ನಿರ್ಜಲೀಕರಣ, ನಿದ್ರೆಯ ಕೊರತೆ ಮತ್ತು ಆಹಾರದ ಆಯ್ಕೆಗಳಂತಹ ಸರಳ ಅಂಶಗಳು ತಲೆನೋವಿನ ಉಲ್ಬಣಕ್ಕೆ ಕಾರಣವಿರಬಹುದೆಂದು ಸಂಶೋಧನೆಗಳು ಉಲ್ಲೇಖಿಸಿವೆ.
ಈ 5 ಅಂಶಗಳು ತಲೆನೋವು ನಿವಾರಣೆಗೆ ಮನೆಮದ್ದುಗಳನ್ನು ಅನ್ವೇಷಿಸುತ್ತದೆ, ಓದುಗರು ಮನೆಯಲ್ಲಿಯೇ ಸುಲಭವಾಗಿ ಇವುಗಳನ್ನು ಅಳವಡಿಸಿಕೊಳ್ಳಬಹುದು.ಅಲ್ಲದೆ, ತಲೆನೋವಿನಿಂದ ಉಂಟಾಗುವ ದೈಹಿಕ ಅಸ್ವಸ್ಥತೆಗೆ ಸರಳವಾದ ಮನೆಮದ್ದುಗಳು ತ್ವರಿತ ಪರಿಹಾರವನ್ನು ನೀಡಬಲ್ಲವು.
1. ಕೋಲ್ಡ್ ಕಂಪ್ರೆಸ್ ವಿಧಾನ(ಐಸ್ ಪ್ಯಾಕ್ )
ತಲೆನೋವನ್ನು ನಿವಾರಿಸಲು ಶೀತ ಚಿಕಿತ್ಸೆಯು ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ. ಐಸ್ ಪ್ಯಾಕ್ ಅನ್ನು ಬಳಸುವುದರಿಂದ ನೋವಿನ ಸಂವೇದನೆಗಳನ್ನು ಕಡಿಮೆ ಮಾಡುತ್ತದೆ. ಈ ಪ್ರಯತ್ನದ ಪರಿಣಾಮ ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ, ಮೆದುಳಿಗೆ ನೋವಿನ ಸಂಕೇತಗಳ ಪ್ರಸರಣವನ್ನು ಕಡಿಮೆ ಮಾಡುತ್ತದೆ.
2. ನೀರಿನಾಂಶ ಪಾದರ್ಥ ಸೇವನೆ ಮಾಡಿ
ದೇಹಕ್ಕೆ ಅವಶ್ಯಕತೆ ಇರುವಷ್ಟು ದ್ರವಗಳ ಕೊರತೆ ಉಂಟಾದಾಗ ಮೆದುಳು ತಾತ್ಕಾಲಿಕವಾಗಿ ಸಂಕುಚಿತಗೊಳ್ಳುತ್ತದೆ. ತಲೆಬುರುಡೆಯಿಂದ ದೂರ ಸರಿದು ನೋವು ಉಂಟಾಗುತ್ತದೆ ಎಂದು ಸಂಶೋಧನೆ ತಿಳಿಸಿದೆ. ಆದ್ದರಿಂದ ಮನುಷ್ಯ ಪ್ರತಿದಿನ ಹೆಚ್ಚಾಗಿ ನೀರಿನ ಅಂಶವಿರುವ ಪದಾರ್ಥಗಳನ್ನು ಸೇವಿಸುವುದು ಉತ್ತಮ.
3. ಸರಳ ಉಸಿರಾಟದ ವ್ಯಾಯಾಮಗಳು
ಉಸಿರಾಟದ ವ್ಯಾಯಾಮಗಳು ತಲೆನೋವನ್ನು ನಿರ್ವಹಿಸಲು ಪ್ರಬಲವಾದ ಅಸ್ತ್ರವಾಗಿವೆ. ನಿಧಾನ, ಆಳವಾದ ಉಸಿರಾಟದ ತಂತ್ರಗಳು ಒತ್ತಡದ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುವುದರೊಂದಿಗೆ ತಲೆನೋವನ್ನು ನಿವಾರಿಸುತ್ತದೆ ಎಂದು ಕ್ಲಿನಿಕಲ್ ಅಧ್ಯಯನಗಳು ತಿಳಿಸಿವೆ.
4. ತಲೆನೋವಿನ ಉಪಶಮನಕ್ಕಾಗಿ ಆಹಾರಗಳು
ಆಹಾರದ ಆಯ್ಕೆಗಳು ಕೂಡ ತಲೆನೋವಿನ ಮಾದರಿಗಳ ಮೇಲೆ ಪರೋಕ್ಷ ಪರಿಣಾಮ ಬೀರುತ್ತವೆ. ಕೆಲವು ಆಹಾರಗಳು ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಇದು ತಲೆನೋವಿನ ಲಕ್ಷಣಗಳನ್ನು ತಡೆಗಟ್ಟಲು ಮತ್ತು ನಿವಾರಿಸಲು ಸಹಾಯ ಮಾಡುತ್ತದೆ.
* ಬಾಳೆಹಣ್ಣುಗಳು, ಕಲ್ಲಂಗಡಿ ಮತ್ತು ಜೇನುತುಪ್ಪವು ಅತ್ಯುತ್ತಮ ಪ್ರಯೋಜನಗಳನ್ನು ನೀಡುತ್ತವೆ.
* ಏಪ್ರಿಕಾಟ್‌ಗಳು ಮತ್ತು ಅಂಜೂರ ಹಣ್ಣು ನರಗಳ ಆರೋಗ್ಯವನ್ನು ವೃದ್ಧಿಸುವ ಅಗತ್ಯ ಖನಿಜಗಳನ್ನು ಪೂರೈಸುತ್ತವೆ.
* ಡ್ರೈ ಫ್ರೂಟ್ಸ್- ಬಾದಾಮಿ ಮತ್ತು ಗೋಡಂಬಿಯಲ್ಲಿ ಹೆಚ್ಚಿನ ಮೆಗ್ನೀಸಿಯಮ್ ಮತ್ತು ವಿಟಮಿನ್ ಇ ಇರುವುದರಿಂದ ತಲೆನೋವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
5. ತಲೆನೋವಿನ ಪರಿಹಾರಕ್ಕೆ ಪಾನೀಯಗಳು
*ತಲೆನೋವಿನ ವಿರುದ್ಧದ ಹೋರಾಟದಲ್ಲಿ ಗಿಡಮೂಲಿಕೆಯ ಚಹಾಗಳು ರಾಮಬಾಣವಾಗಿವೆ.
*ಶುಂಠಿ ಚಹಾ- ಮೈಗ್ರೇನ್ ಲಕ್ಷಣಗಳನ್ನು ನಿವಾರಿಸುವಲ್ಲಿ ಶುಂಠಿಯಲ್ಲಿರುವ ಕೆಲವು ಔಷಧಿಗಳು ಹೊಂದಿಕೆಯಾಗಬಹುದು ಎಂದು ಅಧ್ಯಯನಗಳು ತಿಳಿಸಿವೆ.
*ಪುದೀನಾ ಚಹಾ- ಪುದೀನಾ ಚಹಾದಲ್ಲಿರುವ ನೋವು ಶಮನ ಗುಣಗಳು ಮತ್ತು ಉಲ್ಲಾಸಕರ ಸುವಾಸನೆಯ ಮೂಲಕ ಎರಡು ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಪುದೀನಾದಲ್ಲಿರುವ ಮೆಂಥಾಲ್, ಸ್ನಾಯು ಸಡಿಲಗೊಳಿಸುವಿಕೆಯಾಗಿ ಕಾರ್ಯನಿರ್ವಹಿಸುತ್ತದೆ, ಆಗಾಗ್ಗೆ ತಲೆನೋವನ್ನು ಉಂಟುಮಾಡುವ ಒತ್ತಡವನ್ನು ನಿವಾರಿಸುತ್ತದೆ.
*ಲವಂಗ ಚಹಾ- ಸಾಂಪ್ರದಾಯಿಕವಾಗಿ ವಿವಿಧ ರೀತಿಯ ನೋವು ನಿರ್ವಹಣೆಗೆ ಈ ಲವಂಗ ಚಹಾವನ್ನು ಉಪಯೋಗಿಸಲಾಗುತ್ತದೆ.(ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.