

Sprouted peas: ಪ್ರತಿದಿನ ಮೊಳಕೆಯೊಡದಂತಹ ಬಟಾಣಿ ಸೇವಿಸುವುದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ. ಈ ಬಟಾಣಿಯು ಮೆಗ್ನೀಶಿಯಮ್ ಹಾಗೂ ಪೊಟ್ಯಾಷಿಯಂನಂತಹ ಪೌಷ್ಟಿಕಾಂಶವನ್ನು ಅಧಿಕವಾಗಿ ಹೊಂದಿರುತ್ತದೆ. ಇವು ನಮ್ಮ ದೇಹಕ್ಕೆ ಅಗತ್ಯವಾಗಿರುವ ಅಮೈನೋ ಆಮ್ಮಗಳು, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ಸಮೃದ್ಧವಾಗಿ ಹೊಂದಿರುತ್ತದೆ. ಬಟಾಣಿ ತಿನ್ನುವುದರಿಂದ ಆಯಾಸವನ್ನು ನಿವಾರಿಸಲು ಹಾಗೂ ನಿದ್ರೆಯನ್ನು ಸುಧಾರಿಸಲು ಬಹಳ ಸಹಾಯಕವಾಗಿದೆ.
ಮೊಳಕೆ ಕಾಳುಗಳಲ್ಲಿ ಜೀವಸತ್ವಗಳು, ಖನಿಜಗಳು, ನಾರು ಮತ್ತು ಪ್ರೊಟೀನ್ಗಳು ಸಮೃದ್ಧಿಯಾಗಿವೆ. ಅವು ವಿಶೇಷವಾಗಹಿ ವಿಟಮಿನ್ ಸಿ, ಬಿ-ಕಾಂಪ್ಲೆಕ್ಸ್ ಮತ್ತು ವಿಟಮಿನ್ ಇ ನಂತಹ ಪೋಷಕಾಂಶಗಳಿಂದ ಸಮೃದ್ಧಿಯಾಗಿದೆ. ಮೊಳಕೆಕಾಳುಗಳು ಸುಲಭವಾಗಿ ಜೀರ್ಣವಾಗುವುದರಿಂದ ಯಾವುದೇ ಸಮಸ್ಯೆಗಳಾಗುವುದಿಲ್ಲ. ಮೊಳಕೆ ಕಾಳುಗಳಲ್ಲಿರುವ ನಾರು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ ಹಾಗೂ ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ.
ವಿಶೇಷವಾಗಿ ಬೀನ್ಸ್ ಮಸೂರದಂತಹ ಧಾನ್ಯಗಳ ಮೊಗ್ಗುಗಳಲ್ಲಿ ಪ್ರೊಟೀನ್ ಅಧಿಕವಾಗಿರುತ್ತದೆ. ಇದು ಸಸ್ಯಹಾರಿಗಳಿಗೆ ಉಪಯುಕ್ತ ಆಹಾರವಾಗಿದೆ. ಮೊಳಕೆ ಕಾಳುಗಳಲ್ಲಿ ಕ್ಯಾಲೋರಿ ಕಡಿಮೆಯಾಗಿದ್ದು, ಪೋಷಕಾಂಶಗಳನ್ನು ಅಧಿಕವಾಗಿ ಹೊಂದಿರುತ್ತದೆ.
ಮೊಳಕೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಮೊಳಕೆಗಳಲ್ಲಿರುವ ವಿಟಮಿನ್ ಸಿ ದೇಹವನ್ನು ವಿವಿಧ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಮೊಳಕೆಕಾಳುಗಳಲ್ಲಿ ಅಧಿಕವಾದ ಪ್ರೋಟೀನ್ ಇರುವುದರಿಂದ ಇವು ಕೊಲೆಸ್ಟ್ರಾಲ್ಗಳನ್ನು ಕಡಿಮೆ ಮಾಡುತ್ತದೆ. ಇದರ ಜೊತೆಗೆ ಮೊಳಕೆ ಕಾಳುಗಳು ರಕ್ತನಾಳಗಳ ಅರೋಗ್ಯವನ್ನು ಕಾಪಾಡಿ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
ಬಟಾಣಿ ಮೊಳಕೆಯಲ್ಲಿ ವಿಟಮಿನ್ ಎ,ಸಿ,ಕೆ ಹಾಗೂ ಖನಿಜಗಳಾದ ಫಾಲಿಕ್ ಆಮ್ಲ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇವು ದೇಹದ ಚಯಾಪಚಯವನ್ನು ಸುಧಾರಿಸಿ, ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಮೊಳಕೆಯೊಡದಂತಹ ಕಾಳುಗಳಲ್ಲಿ ಅಧಿಕವಾಗಿ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವುದರಿಂದ ಇವು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ.
ಫೈಬರ್‌ನಿಂದ ಕೂಡಿರುವ ಬಟಾಣಿ ಮೊಳಕೆ ಜೀರ್ಣಕ್ರಿಯೆಯನ್ನು ಸುಗಮಗೊಳಿಸುವುದರ ಜೊತೆಗೆ ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ.
ಬಟಾಣಿ ಮೊಳಕೆಗಳು ಕಬ್ಬಿಣ ಮತ್ತು ಫಾಲಿಕ್ ಆಮ್ಲದಿಂದ ಕೂಡಿದ್ದು, ರಕ್ತದ ಕೊರತೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
ಬಟಾಣಿ ಮೊಳಕೆಗಳು ಕಡಿಮೆ ಕ್ಯಾಲರಿ ಹಾಗೂ ಹೆಚ್ಚು ಫೈಬರ್‌ನಿಂದ ಕೂಡಿದ್ದು, ಇದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ವಿಟಮಿನ್ ಎ ಮತ್ತು ಸಿ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. (ಏಜೆನ್ಸೀಸ್)