ತೂಕ ಕಡಿಮೆ ಮಾಡಿಕೊಳ್ಳುವ ಆಸೆಯೇ..? ಇಲ್ಲಿದೆ ನಿಮಗಾಗಿ ಹೆಲ್ತಿ ಟಿಪ್ಸ್​​

Untitled-design-5
Published on

ಬೆಂಗಳೂರು: ದೇಹದ ತೂಕ ಕಡಿಮೆ ಮಾಡಿಕೊಳ್ಳುವುದು ಅನೇಕ ಜನರಿಗೆ ಚಿಂತೆಯ ವಿಷಯವಾಗಿದೆ. ತೂಕ ಕಡಿಮೆ ಮಾಡಿಕೊಳ್ಳಲು ಮುಖ್ಯವಾಗಿ ಆರೋಗ್ಯಕರ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿರುವ ಸಮತೋಲಿತ ಆಹಾರವು ತೂಕ ನಷ್ಟಕ್ಕೆ ಅವಶ್ಯಕವಾಗಿದೆ. ನೀವು ತೂಕ ಕಡಿಮೆ ಮಾಡಿಕೊಳ್ಳಲು ಆಲೋಚಿಸುತ್ತಿದ್ದೀರಾ..? ನಿಮಗಾಗಿ ಕೆಲವೊಂದು ಸಲಹೆಗಳು ಇಲ್ಲಿವೆ.

ತೂಕ ಇಳಿಸುವ ಆರೋಗ್ಯಕರ ಸಲಹೆ :

1. ಸಾಕಷ್ಟು ನೀರು ಕುಡಿಯಿರಿ : ತೂಕ ಇಳಿಸಿಕೊಳ್ಳಲು ದಿನಕ್ಕೆ ಕನಿಷ್ಠ 8 ಗ್ಲಾಸ್ ನೀರು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅಲ್ಲದೆ ನಿಮ್ಮನ್ನು ನಿರ್ಜಲಿಕರಣದಿಂದ ತಪ್ಪಿಸುತ್ತದೆ.

2. ಪ್ರೋಟೀನ್ ಭರಿತ ಆಹಾರಕ್ಕೆ ಆದ್ಯತೆ ನೀಡಿ : ಬೇಯಿಸಿದ ಕೋಳಿ, ಮೀನು, ಮತ್ತು ದ್ವಿದಳ ಧಾನ್ಯಗಳಂತಹ ಪ್ರೋಟೀನ್ ಇರುವಂತಹ ಆಹಾರಗಳಿಗೆ ಮೊದಲ ಆದ್ಯತೆ ನೀಡಿ. ಈ ಆಹಾರಗಳು ಜೀರ್ಣಿಸಿಕೊಳ್ಳಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತವೆ, ಹಾಗೂ ನಿಮ್ಮ ಚಯಾಪಚಯವನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸುತ್ತದೆ

ಇದನ್ನು ಓದಿ : https://www.vijayavani.net/delhi-srinagar-vistara-flight-gets-bomb-threat

3. ಸಮತೋಲಿತ ಆಹಾರ : ತೂಕ ನಷ್ಟಕ್ಕೆ ಸಮತೋಲಿತ ಆಹಾರ ಅಗತ್ಯ. ಅನ್ನ, ಚಪಾತಿ, ಬೇಳೆಕಾಳುಗಳು, ತರಕಾರಿಗಳು ಮತ್ತು ಮೊಸರು ಇದರಲ್ಲಿ ಸೇರಿವೆ. ಇವು ಆರೋಗ್ಯಕರ ಆಹಾರಗಳಾಗಿದ್ದರೂ ಅವುಗಳನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಬೇಕು.

4. ಸಂಸ್ಕರಿತ ಆಹಾರಗಳನ್ನು ಮಿತಿಗೊಳಿಸಿ: ಸಂಸ್ಕರಿಸಿದ ಆಹಾರಗಳು ಹೆಚ್ಚು ಕ್ಯಾಲೋರಿ ಕಡಿಮೆ ಪೋಷಕಾಂಶಗಳನ್ನು ಹೊಂದಿರುತ್ತವೆ. ಇದು ತೂಕ ಹೆಚ್ಚಾಗಲು ಕಾರಣವಾಗಬಹುದು. ಸಂಸ್ಕರಿಸಿದ ಆಹಾರಗಳನ್ನು ಕಡಿಮೆ ಮಾಡಿ ಮನೆಯಲ್ಲಿ ಮಾಡುವ ಆಹಾರವನ್ನು ಸೇವಿಸಿ.

5. ಆರೋಗ್ಯಕರ ಕೊಬ್ಬನ್ನು ಸೇವಿಸಿ : ಆರೋಗ್ಯಕರ ಕೊಬ್ಬುಗಳು ಶಕ್ತಿಯನ್ನು ನೀಡುತ್ತವೆ, ವಿಟಮಿನ್‌ಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಬಾದಾಮಿ, ವಾಲ್‌ನಟ್ಸ್, ಪಿಸ್ತಾ, ಅಗಸೆ ಬೀಜಗಳಂತಹ ಬೀಜಗಳು ಆರೋಗ್ಯಕರ ಕೊಬ್ಬಿನ ಅತ್ಯುತ್ತಮ ಮೂಲಗಳಾಗಿವೆ.

6. ನಿಯಮಿತ ವ್ಯಾಯಾಮ ಮಾಡಿ : ತೂಕ ಕಡಿಮೆ ಮಾಡಿಕೊಳ್ಳಲು ದಿನನಿತ್ಯ ವ್ಯಾಯಾಮವನ್ನು ಮಾಡಿ. ಈಜು, ಸೈಕ್ಲಿಂಗ್ ಅಥವಾ ಮುಂಜಾನೆ/ಸಂಜೆ ವಾಕ್​ ಮಾಡುವ ಚಟುವಟಿಕೆಗಳು ಕ್ಯಾಲೊರಿಗಳನ್ನು ಸುಡಲು ಸಹಕಾರಿಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net