ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಅಮಿತ್ ಷಾ ದಂಪತಿ!

thuirumala
Published on

ತಿರುಪತಿ: ಲೋಕಸಭಾ ಕೊನೆಯ ಹಂತದ ಚುನಾವಣೆಗೂ ಮುನ್ನ ಕೇಂದ್ರ ಸಚಿವ ಗೃಹ ಸಚಿವ ಅಮಿತ್ ಷಾ ಅವರು, ಇಂದು (ಮೇ.31) ರಂದು ತಿರುಮಲ ತಿರುಪತಿಗ ದೇವಸ್ಥಾನಕ್ಕೆ ತೆರಳಿ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದಿದ್ದಾರೆ.

ಅಮಿತ್ ಷಾ ಜೊತೆಗೆ ಪತ್ನಿ ಸೋನಲ್​ ಷಾ ಸಹಾ ತಿರುಮಲಕ್ಕೆ ಭೇಟಿ ನೀಡಿದ್ದರು. ಮೊದಲು ತಿರುಪತಿಯ ರೇಣುಗುಂಟ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ರಸ್ತೆಯ ಮೂಲಕ ತಿರುಪತಿಗೆ ತಲುಪಿದರು. ಪ್ರಧಾನ ಅರ್ಚಕರು ವೈದಿಕ ಸ್ತೋತ್ರ ಪಠಣದ ನಡುವೆ ಅವರಿಗೆ ಸಾಂಪ್ರದಾಯಿಕ ಸ್ವಾಗತವನ್ನು ನೀಡಲಾಯಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಬಂದ ಅಮಿತ್ ಷಾ ದಂಪತಿ ಅರ್ಧ ಗಂಟೆ ಕಾಲ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ್ದಾರೆ.

ದೇಗುಲದ ಅರ್ಚಕರು ಅರ್ಚಕರು ಅಮಿತ್ ಷಾ ದಂಪತಿಯನ್ನು ಆಶೀರ್ವದಿಸಿ ಅವರಿಗೆ ಡೈರಿ, ಆಯುರ್ವೇದ ಉತ್ಪನ್ನಗಳು, ಲಡ್ಡು (ಪವಿತ್ರ ಸಿಹಿ) ಮತ್ತು ಇತರ ವಸ್ತುಗಳನ್ನು ಉಡುಗೊರೆಯಾಗಿ ನೀಡಿದರು" ಎಂದು ಅಧಿಕಾರಿ ಪಿಟಿಐಗೆ ತಿಳಿಸಿದರು. ಗುರುವಾರ ತಮಿಳುನಾಡಿನ ಪುದುಕೊಟ್ಟೈನಲ್ಲಿರುವ ಕೊಟ್ಟೈ ಭೈರವರ ದೇವಸ್ಥಾನದಲ್ಲಿ ಶಾ ಪ್ರಾರ್ಥನೆ ಸಲ್ಲಿಸಿದರು. ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಕನ್ಯಾಕುಮಾರಿಗೆ ತೆರಳಿದ್ದು 48 ಗಂಟೆಗಳ ಕಾಲ ಧ್ಯಾನ ಮಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net