Plastic Bottles Water: ನೀರು ಕುಡಿಯಲು ಪ್ಲಾಸ್ಟಿಕ್​ ಬಾಟಲ್​ ಉಪಯೋಗಿಸ್ತೀರಾ? ಎಚ್ಚರ ಈ ಸಮಸ್ಯೆಗಳಿಗೆ ಕಾರಣವಾಗಬಹುದು!

Plastic Bottles Water
ಪ್ಲಾಸ್ಟಿಕ್​ ಬಾಟಲ್​
Published on

ಬೆಂಗಳೂರು:  ಪ್ಲಾಸ್ಟಿಕ್ ಬಾಟಲಿಗಳಲ್ಲಿ(Plastic Bottles Water) ತುಂಬಿಸಿದ ನೀರು ಕುಡಿಯುವುದರಿಂದ ರಕ್ತದೊತ್ತಡ ಉಂಟಾಗುತ್ತದೆಯೇ? ಹೌದು ಎನ್ನುತ್ತವೆ ವೈದ್ಯಕೀಯ ವರದಿಗಳು.

ನಿಯಮಿತವಾಗಿ ನೀರು ಕುಡಿಯುವುದರಿಂದ ಆರೋಗ್ಯದಿಂದ ಇರಬಹುದು ಎಂದು ವೈದ್ಯರು ಹೇಳುತ್ತಾರೆ. ಆದರೆ ಇಂದಿನ ದಿನಗಳಲ್ಲಿ ಶೇ80ಕ್ಕೂ ಹೆಚ್ಚು ಜನ ಪ್ಲಾಸ್ಟಿಕ್ ಬಾಟಲಿಗಳಲ್ಲಿ ತುಂಬಿಸಿದ ನೀರು ನಿಯಮಿತವಾಗಿ ಕುಡಿದರೂ ಪ್ರಯೋಜನವಿಲ್ಲ. ಇದು ಆರೋಗ್ಯಕ್ಕಿಂತ ಅನಾರೋಗ್ಯಕ್ಕೇ ದಾರಿ ಮಾಡಿಕೊಡುತ್ತದೆ. ಅದರಲ್ಲೂ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ ಎಂಬುದು ವೈದ್ಯಕೀಯ ಅಧ್ಯಯನಗಳು ಸಾರಿ ಸಾರಿ ಹೇಳುತ್ತಿವೆ.

ಪ್ಲಾಸ್ಟಿಕ್​ ಬಾಟಲಿಗಳಲ್ಲಿ ತುಂಬಿಸಿದ ನೀರು ಕುಡಿಯುವುದರಿಂದ ಬಿಪಿ ಬರುತ್ತದೆ ಎಂಬುದು ಆಸ್ಟ್ರಿಯಾದ ಡ್ಯಾನ್ಯೂಬ್ ಖಾಸಗಿ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲ್ಲಿ ಬಹಿರಂಗವಾಗಿದೆ. ಈ ನೀರಿನಲ್ಲಿರುವ ಮೈಕ್ರೋಪ್ಲಾಸ್ಟಿಕ್ ಇದಕ್ಕೆ ಕಾರಣ ಎನ್ನುತ್ತದೆ ಈ ವರದಿ.

ಪ್ಲಾಸ್ಟಿಕ್ ಬಾಟಲಿಗಳಲ್ಲಿನ ನೀರು ಕುಡಿಯುವವರಿಗೆ ಹೋಲಿಸಿದರೆ ಪ್ಲಾಸ್ಟಿಕ್​ ಬಾಟೆಲ್​ಗಳಿಂದ ನೀರು ಕುಡಿಯದವರು ಕಡಿಮೆ ರಕ್ತದೊತ್ತಡವನ್ನು ಹೊಂದಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮೈಕ್ರೋ ಪ್ಲಾಸ್ಟಿಕ್ ಎಂದರೇನು?

ಮೈಕ್ರೋಪ್ಲಾಸ್ಟಿಕ್‌ಗಳು ಆಹಾರ ಮತ್ತು ನೀರಿನಲ್ಲಿ ಕಂಡುಬರುವ ಸಣ್ಣ ಕಣಗಳಾಗಿವೆ. ಆದಾಗ್ಯೂ, ಇವು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾರ್ಮೋನುಗಳ ಅಸಮತೋಲನವು ಹೃದಯದ ತೊಂದರೆಗಳು ಸೇರಿದಂತೆ ಕ್ಯಾನ್ಸರ್​ನಂತಹ ಅಪಾಯಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಇನ್ನು ಪ್ಲಾಸ್ಟಿಕ್ ಬಾಟಲಿಗಳಿಂದ ನೀರು ಕುಡಿಯುವಾಗ ಪ್ರತಿ ವಾರ 5 ಗ್ರಾಂ ಮೈಕ್ರೋಪ್ಲಾಸ್ಟಿಕ್ ದೇಹವನ್ನು ಸೇರುತ್ತದೆ. ಇದರಿಂದ ಬಿಪಿ ಹೆಚ್ಚುತ್ತದೆ. ಹಾಗಾಗಿ ಈ ನೀರನ್ನು ಕುಡಿಯದಿರುವುದು ಉತ್ತಮ. ಬಿಪಿ ಹೆಚ್ಚಿನ ಆರೋಗ್ಯ ಸಮಸ್ಯೆಗಳಿಗೆ ಆಹ್ವಾನವಾಗಿದೆ. ಆದ್ದರಿಂದ, ಈ ನೀರಿನಿಂದ ದೂರವಿರುವುದು ಉತ್ತಮ ಎನ್ನುತ್ತಾರೆ ಆರೋಗ್ಯ ತಜ್ಞರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net