

ಹೈದರಾಬಾದ್: ತಿರುಮಲ ಲಡ್ಡು ವಿವಾದ(Tirupati Laddu Row: )ದ ಹಿನ್ನೆಲೆಯಲ್ಲಿ ತೆಲಂಗಾಣ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಆ ರಾಜ್ಯದ ದೇವಸ್ಥಾನಗಳಲ್ಲಿ ಲಡ್ಡು ಹಾಗೂ ಇತರೆ ಪ್ರಸಾದ ತಯಾರಿಕೆಗೆ ಖಾಸಗಿ ಸಂಸ್ಥೆಗಳಿಂದ ತುಪ್ಪ, ಹಾಲನ್ನು ಖರೀದಿಸದೆ ಸರ್ಕಾರಿ ಸಂಸ್ಥೆಯಾದ ವಿಜಯ ಡೈರಿಯಿಂದ ಮಾತ್ರ ಖರೀದಿಸಬೇಕು ಎಂದು ರೇವಂತ್ ರೆಡ್ಡಿ ಸರ್ಕಾರ ಆದೇಶಿಸಿದೆ.
ದೇವಸ್ಥಾನಗಳಲ್ಲಿ ಟೆಂಡರ್ ಲೆಕ್ಕಿಸದೆ ಸರ್ಕಾರಿ ಕಂಪನಿಯಾದ ವಿಜಯ ಡೈರಿಯ ತುಪ್ಪವನ್ನು ಬಳಸಲು ಸರ್ಕಾರ ಆದೇಶ ಹೊರಡಿಸಿದೆ.
ತೆಲಂಗಾಣದಲ್ಲಿ ಪ್ರಮುಖ 12 ದೇವಾಲಯಗಳಿಂದ ವಾರ್ಷಿಕ 24ರಿಂದ 50 ಕೋಟಿ ರೂ. ಆದಾಯವಿರುವ 24 ದೇವಸ್ಥಾನಗಳು, 25ಲಕ್ಷ ರೂ.ನಿಂದ ರಿಂದ 50 ಲಕ್ಷ ರೂ.ಆದಾಯವಿರುವ 325 ದೇವಸ್ಥಾನಗಳಿವೆ. ಪ್ರಸ್ತುತ ಈ ದೇವಾಲಯಗಳಲ್ಲಿ ಲಡ್ಡು ಪ್ರಸಾದ ಮತ್ತು ನೈವೇದ್ಯಕ್ಕಾಗಿ ಟೆಂಡರ್ ಮೂಲಕ ಖಾಸಗಿ ಕಂಪನಿಗಳಿಂದ ತುಪ್ಪವನ್ನು ಖರೀದಿಸಿ ಬಳಸಲಾಗುತ್ತಿದೆ. ಇತ್ತೀಚೆಗೆ ತಿರುಮಲ ಲಡ್ಡು ತಯಾರಿಕೆಗೆ ಕಲಬೆರಕೆ ತುಪ್ಪ ಸರಬರಾಜು ಮಾಡಿದ ಹಿನ್ನೆಲೆಯಲ್ಲಿ ವಿಜಯ ಡೈರಿ ಉತ್ಪನ್ನಗಳನ್ನು ಬಳಸಲು ಸರ್ಕಾರ ನಿರ್ಧರಿಸಿದೆ.
ತಿರುಮಲ ಲಡ್ಡು ವಿವಾದ(Tirupati Laddu Row: )ದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎಲ್ಲ ದೇವಸ್ಥಾನಗಳಲ್ಲಿ ವಿಜಯ ಡೈರಿಯಿಂದ ತುಪ್ಪ ಖರೀದಿಸಲು ಸ್ಪಷ್ಟ ಸೂಚನೆ ನೀಡಿದೆ. ಇನ್ನು ಮುಂದೆ ಖಾಸಗಿ ಸಂಸ್ಥೆಗಳು ತುಪ್ಪ ಖರೀದಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ. ಸರ್ಕಾರದ ಆದೇಶದಂತೆ ಇತ್ತೀಚೆಗೆ ರಾಜ್ಯದ ಐದು ಪ್ರಮುಖ ದೇವಸ್ಥಾನಗಳು ವಿಜಯ ಡೇರಿಯಿಂದ ತುಪ್ಪ ಖರೀದಿಸಲು ಮುಂದೆ ಬಂದಿವೆ.