

Beauty tips: ಸಮಾಜದ ಸೌಂದರ್ಯದ ಕಲ್ಪನೆಯು ಚರ್ಮದ ಬಣ್ಣಕ್ಕೆ ಸಂಬಂಧಿಸಿದೆ ಆದರೆ, ನಿಜವಾದ ಸೌಂದರ್ಯವು ಬಣ್ಣದಲ್ಲಿಲ್ಲ. ಬದಲಿಗೆ, ಆರೋಗ್ಯ ಮತ್ತು ಫಿಟ್ನೆಸ್ನಲ್ಲಿದೆ. ಸಾಮಾನ್ಯವಾಗಿ ಜನರು ತಮ್ಮ ಮುಖ ಹೊಳೆಯಲು ಹಲವಾರು ರೀತಿಯ ಕ್ರೀಮ್ಗಳನ್ನು ಬಳಸುತ್ತಾರೆ. ಇದು ಆ ಕ್ಷಣಕ್ಕೆ ಚರ್ಮವನ್ನು ಹೊಳೆಯುವಂತೆ ಮಾಡಬಹುದು ಆದರೆ, ದೀರ್ಘಕಾಲವಾಗಿ ಇದೇ ರೀತಿಯಲ್ಲಿ ಚರ್ಮ ಇರುವಂತೆ ಮಾಡುವುದಿಲ್ಲ. ಹಾಗಾಗಿ ಮೊಡವೆ, ಸುಕ್ಕು ಗಟ್ಟಿದ ಚರ್ಮ ಅಥವಾ ಇನ್ನಿತರ ಚರ್ಮದ ಸಮಸ್ಯೆಯನ್ನು ಅನುಭವಿಸುವಂತಹ ಜನರು ಆದಷ್ಟು ಡಿಟಾಕ್ಸ್ ಪಾನೀಯಗಳನ್ನು ಸೇವಿಸುವುದರಿಂದ ಇದು ಚರ್ಮವನ್ನು ಒಳಗಿನಿಂದ ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ.
ಈ ಪಾನೀಯವನ್ನು ಸೇವಿಸುವುದರಿಂದ ಕ್ರಮೇಣವಾಗಿ ಚರ್ಮವು ಸ್ವಚ್ಛ, ಹೊಳೆಯುವ ಹಾಗೂ ಕಾಂತಿಯುತವಾಗಿ ಕಾಣಿಸುತ್ತದೆ. ಹಾಗಾಗಿ ಚರ್ಮದ ಆರೈಕೆಗಾಗಿ ಸಹಾಯ ಮಾಡುವ ಪಾನೀಯವನ್ನು ನಿಮಗೆ ತೋರಿಸಲಿದ್ದೇವೆ.
* 1 ಚಮಚ ಸೋಂಪು
* 1 ಚಮಚ ಜೀರಿಗೆ
* 1 ಚಮಚ ಎಣ್ಣೆ
* 2 ಗ್ಲಾಸ್ ನೀರು
* ಒಂದು ಚಿಟಿಕೆ ಕಪ್ಪು ಉಪ್ಪು
ಮೊದಲು ಒಂದು ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ 2 ಗ್ಲಾಸ್ ನೀರನ್ನು ಸೇರಿಸಿ ಎಲ್ಲಾ ಪದಾರ್ಥಗಳನ್ನು ಆ ನೀರಿಗೆ ಹಾಕಿ 5-10 ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು. ನಂತರ ನೀರನ್ನು ಸೋಸಿ ಅದಕ್ಕೆ ಕಪ್ಪು ಉಪ್ಪು ಸೇರಿಸಿ ಊಟ ಮಾಡಿದ ನಂತರ ಬಿಸಿಯಿದ್ದಾಗಲೇ ಕುಡಿಯಿರಿ.
* ಈ ಪಾನೀಯವು ನೈಸಗರ್ಗಿಕವಾಗಿ ಕೆಲಸ ಮಾಡುವುದರಿಂದ ಚರ್ಮದಲ್ಲಾಗುವ ಮೊಡವೆಗಳು, ದದ್ದುಗಳು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
* ಇದು ದೇಹವನ್ನು ನಿರ್ವಿಷಗೊಳಿಸಿ, ಆರೋಗ್ಯ ಸಮಸ್ಯೆಯಿಂದ ದೂರ ಸರಿಯುವಂತೆ ಮಾಡುತ್ತದೆ.
* ಚರ್ಮದಲ್ಲಾಗುವ ಊತವನ್ನು ಕಡಿಮೆ ಮಾಡಿ, ನೈಸರ್ಗಿಕ ಹೊಳಪನ್ನು ಹೆಚ್ಚಿಸುತ್ತದೆ.
* ಆರೋಗ್ಯಕರ ಚರ್ಮಕ್ಕಾಗಿ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ.
ಆರೋಗ್ಯಕ್ಕೆ ಸೋಂಪು ಹಲವಾರು ರೀತಿಯಲ್ಲಿ ಪ್ರಯೋಜನಗಳನ್ನು ನೀಡುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಸೋಂಕುಗಳನ್ನು ತಡೆಯುತ್ತದೆ. ರಕ್ತದೊತ್ತಡ ಮತ್ತು ಕೊಬ್ಬಿನ ಮಟ್ಟವನ್ನು ಕಡಿಮೆ ಮಾಡಿ, ಹೃದಯ ಆರೋಗ್ಯವನ್ನು ಸುಧಾರಿಸುತ್ತದೆ. ಸೋಂಪನ್ನು ಪ್ರತಿನಿತ್ಯ ಸೇವಿಸುವುದರಿಂದ ಇದು ಚರ್ಮ ಸಮಸ್ಯೆಯನ್ನು ನಿವಾರಿಸುತ್ತದೆ. ರಕ್ತದಲ್ಲಿರುವ ಸಕ್ಕರೆ ಅಂಶ ಮತ್ತು ಕೊಬ್ಬಿನ ಮಟ್ಟವನ್ನು ಕಡಿಮೆ ಮಾಡಿ, ಡಯಾಬಿಟಿಸ್ ಮತ್ತು ಹೃದಯ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಮಧುಮೇಹಿಗಳು ದಿನ ಸೇವಿಸುವುದರಿಂದ ಅದರಿಂದ ಹೊರಬರಬಹುದು.
ಜೀರಿಗೆಯ ಸೇವನೆಯು ದೇಹಕ್ಕೆ ಹಲವು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿ ಆಂಟಿಆಕ್ಸಿಡಂಟ್‌ಗಳು ಸಮೃದ್ಧವಾಗಿದ್ದು, ಉರಿಯೂತವನ್ನು ಕಡಿಮೆ ಮಾಡಿ, ಕ್ಯಾನ್ಸರ್ ಅಪಾಯವನ್ನು ತಡೆಯುತ್ತದೆ. ಹಾಗೆಯೇ ಜೀರ್ಣಕ್ರಿಯೆಯನ್ನು ಸುಧಾರಿಸಿ, ಗ್ಯಾಸ್, ಹೃದಯದ ಬಡಿತವನ್ನು ಸುಧಾರಿಸುತ್ತದೆ. ಹಾಗೆಯೇ ಚರ್ಮದಲ್ಲಾಗುವ ಕೆಂಪು ಬಣ್ಣವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ನಿಯಮಿತ ಸೇವನೆಯು ಚರ್ಮವನ್ನು ನೈಸರ್ಗಿಕವಾಗಿ ತಾಜಾ ಮತ್ತು ಆರೋಗ್ಯಕರವಾಗಿ ಕಾಣುವಂತೆ ಮಾಡುತ್ತದೆ.
ಅಜ್ವಾನ ದೇಹದಲ್ಲಿರುವ ಹೆಚ್ಚುವರಿ ಎಣ್ಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿರುವ ವಿಷವನ್ನು ತೆಗೆದುಹಾಕಲು ಸಹಾಯ ಮಾಡಿ, ಮುಖದಲ್ಲಿರುವ ಮೊಡವೆ, ಅಥವಾ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಅಜ್ವಾನದ ನೀರನ್ನು ಕುಡಿಯುವುದರಿಂದ ಇದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. (ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.