ನಿಮ್ಮ ಹೊಟ್ಟೆಯ ಕೊಬ್ಬನ್ನು ಕರಗಿಸಲು ಈ ಶುಂಠಿ ಪಾನೀಯ ಸೇವಿಸಿ: ರಿಸಲ್ಟ್​ ನೋಡಿ... | Ginger Drink

dk - 2025-05-29T203208.901
Published on

Ginger Drink: ಹೊಟ್ಟೆಯ ಕೊಬ್ಬಿನ ಸಮಸ್ಯೆಯಿಂದ ಅನೇಕರು ಬಳಲುತ್ತಿದ್ದಾರೆ. ಈ ಕೊಬ್ಬನ್ನು ಕರಗಿಸಲು ಬಹುತೇಕರು ವ್ಯಾಯಾಮ, ಜೀಮ್​ ಹಾಗೂ ದಿನನಿತ್ಯದ ಜಾಗಿಂಗ್​ ಸೇರಿದಂತೆ ಇತರ ಸಲಹೆಗಳನ್ನು ಅನುಸರಿಸಿದರೂ ಕೊಬ್ಬು ಕರಗಿಸಲು ಸಾಧ್ಯವಾಗೊದೇ ಇಲ್ಲ. ಇದೀಗ ನಾವು ಹೇಳುವ ಮನೆಮದ್ದನ್ನು ನೀವು ದಿನಿನಿತ್ಯ ಸೇವನೆ ಮಾಡಿದ್ರೆ ಕೊಬ್ಬು ಕರಗಿಸಲು ಸಾಧ್ಯವಾಗುತ್ತದೆ.

ಹೌದು ನಿಮ್ಮ ಹೊಟ್ಟೆ ದೊಡ್ಡದಾಗಿದ್ರೆ ನಾಲ್ಕು ಜನರ ಮಧ್ಯ ಹೋಗಲು ಸಂಕೋಚವಾಗುತ್ತದೆ. ಇದರಿಂದ ಸಂತೋಷದ ಕ್ಷಣಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಜನರು ಹೊಟ್ಟೆಯ ಕೊಬ್ಬನ್ನು ಹೇಗೆ ಕಡಿಮೆ ಮಾಡಿಕೊಳ್ಳುವುದು ಎಂಬುದರ ಕುರಿತು ಸಲಹೆಗಳಿಗಾಗಿ ಇಂಟರ್ನೆಟ್​ ಹುಡುಕುತ್ತಾರೆ. ಅವರಿಗೆ ತಿಳಿದಿರುವವರನ್ನು ಅನುಸರಿಸುತ್ತಾರೆ. ಜನರಿಗೆ ಪೌಷ್ಟಿಕತಜ್ಞೆ ಸಿಮ್ರಾನ್ ಓರಾ ಎಂಬುವವರು ಒಂದು ಸಲಹೆಯನ್ನು ಹಂಚಿಕೊಳ್ಳುತ್ತಾರೆ. ಈ ಪಾನೀಯವನ್ನು ಬೇಕಾಗುವ ಪದಾರ್ಥಗಳು ಮತ್ತು ತಯಾರಿಕೆಯ ವಿಧಾನವೇನು? ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ತಿಳಿದುಕೊಳ್ಳಿ.

ಪಾನೀಯ ತಯಾರಿಸಲು ಬೇಕಾಗಿರುವ ಪದಾರ್ಥಗಳು

ಒಂದು ನೀರಿನ ಬಟ್ಟಲು

2 ಚಮಚ ತುರಿದ ಶುಂಠಿ

1 ಟೀ-ಸ್ಪೂನ್​ ನಿಂಬೆ ರಸ

ಪಾನೀಯ ಮಾಡುವ ವಿಧಾನ

ಮೊದಲು ಒಂದು ಕಪ್​ ನೀರು ಕುದಿಸಿ. ಅದಕ್ಕೆ ತುರಿದ ಶುಂಠಿ ಸೇರಿಸಿ ಇನ್ನು ಚೆನ್ನಾಗಿ ಕುದಿಸಬೇಕು. ಕುದಿಸಿದ ನಂತರ ಸೋಸಿ, ಅದಕ್ಕೆ ನಿಂಬೆ ರಸ ಬೆರಿಸಬೇಕು. ಬಳಿಕ ಕುಡಿಯಬೇಕು. ಇದೇ ತರ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕುಡಿಯಬೇಕು. ಇದು ಉತ್ತಮ ಗಿಡಮೂಲಿಕೆ ಪಾನೀಯವಾಗಿದ್ದು, ಟೀ ಮತ್ತು ಕಾಫಿ ಕುಡಿಯುವವರು ದಿನನಿತ್ಯ ಇದನ್ನು ಅಭ್ಯಾಸ ಮಾಡಿಕೊಂಡರೆ ಕೊಬ್ಬನ್ನು ಕರಗಿಸಬಹುದು.

ಹೊಟ್ಟೆಯ ಕೊಬ್ಬು ಕಡಿಮೆ ಮಾಡುತ್ತೆ

ಶುಂಠಿ ಎಲ್ಲರಿಗೂ ತಿಳಿದಿರುವಂತೆ ಆರೋಗ್ಯಕರ ಗುಣಗಳನ್ನು ಹೊಂದಿದೆ. ಇದು ರೋಗ ನಿರೋಧಕ, ಉರಿಯೂತ ಗುಣಲಕ್ಷಣ, ಜೀವಸತ್ವ ಹಾಗೂ ಖನಿಜಗಳು ಸಮೃದ್ಧವಾಗಿವೆ. ಶುಂಠಿ ನೀರು ಚಯಪಚಯ ಸಹಾಯ ಮಾಡುತ್ತದೆ. ಇದು ನಿಮ್ಮ ತೂಕ ಇಳಿಸಿಕೊಳ್ಳಲು ಸಹಾಯ ಮಾಡುವುದಲ್ಲದೆ, ನಿಮ್ಮ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ.

ಶುಂಠಿ ಪಾನೀಯ ಕುಡಿಯುವುದರಿಂದ ಇತರ ಪ್ರಯೋಜನ

1.ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದು ಸಾಮಾನ್ಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

2.ಶುಂಠಿಯಲ್ಲಿರುವ ಜಿಂಜರಾಲ್ ಸಂಯುಕ್ತಗಳು ಉರಿಯೂತವನ್ನು ಕಡಿಮೆ ಮಾಡುತ್ತವೆ.

3.ಶುಂಠಿ ನೀರು ಸ್ನಾಯು ನೋವನ್ನು ಕಡಿಮೆ ಮಾಡುತ್ತದೆ. ಇದು ವ್ಯಾಯಾಮದ ನಂತರ ಉತ್ತಮ ಪಾನೀಯವಾಗಿಯೂ ಕಾರ್ಯನಿರ್ವಹಿಸುತ್ತದೆ.(ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net