

ಕನ್ನಡದ ದಿಗ್ಗಜ ನಟ ಅಂಬರೀಷ್ ಭೌತಿಕವಾಗಿ ನಮ್ಮೊಂದಿಗೆ ಇದ್ದಿದ್ದರೆ ಇಂದು 73ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಕನ್ನಡ ಚಿತ್ರರಂಗ ಹಾಗೂ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅಂಬರೀಷ್ ಅಭಿಮಾನಿಗಳ ಪಾಲಿಗೆ ‘ಕಲಿಯುಗದ ಕರ್ಣ’. ಇಂತಹ ಧೀಮಂತ ನಾಯಕನ ಜತೆ ತಮ್ಮ 24ನೇ ವಯಸ್ಸಿನಲ್ಲಿಯೇ ಕೆಲಸ ಮಾಡುವ ಸೌಭಾಗ್ಯ ನಿರ್ದೇಶಕ ಗುರುದತ್ ಗಾಣಿಗಗೆ ದೊರೆಕಿತ್ತು. ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರ ನಿರ್ದೇಶಿಸಿದ್ದ ಈ ಯುವ ನಿರ್ದೇಶಕ, ಅಂಬರೀಷ್ ಜತೆಗಿನ ಒಡನಾಟವನ್ನು ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ.
ಒಂದು ದಿನ ಸುದೀಪ್ ಸರ್ ಹಾಗೂ ಜಾಕ್ ಮಂಜು ಕಾಲ್ ಮಾಡಿ ಒಂದು ಕಥೆ ಇದೆ, ಇದಕ್ಕೆ ನೀನೆ ಡೈರೆಕ್ಷನ್ ಮಾಡಬೇಕು ಎಂದು ಹೇಳಿ, ಅಂಬರೀಷ್ ಅಣ್ಣಾವ್ರ ಮನೆಗೆ ಕರೆದುಕೊಂಡು ಹೋದರು. ನನಗೆ ಆಶ್ಚರ್ಯ. ಅದೇ ಮೊದಲು ಅವರನ್ನು ನಾನು ನೋಡಿದ್ದು. ಚಿಕ್ಕಂದಿನಿಂದಲೂ ಅವರ ಸಿನಿಮಾ ನೋಡಿ ಬೆಳದವನು ನಾನು. ಚಿತ್ರರಂಗಕ್ಕೂ ಬಂದ ಮೇಲೂ ಅವರ ಮೇಲೆ ಒಂದು ಅಭಿಮಾನ, ಕುತೂಹಲ ಇಟ್ಟುಕೊಂಡಿದ್ದ ನನಗೆ ಮೊದಲ ಭೇಟಿ ನಿಜಕ್ಕೂ ರೋಮಾಂಚನೀಯ. ಆಗ ಸುದೀಪ್ ಸರ್, ‘ಅಣ್ಣಾ ಇವನು ಗುರು ಅಂತಾ, ಮುಂದಿನ ನಿಮ್ಮ ಸಿನಿಮಾ ಇವನೇ ನಿರ್ದೇಶನ ಮಾಡೋದು ಎಂದರು’. ಅಗ ನನ್ನ ನೋಡಿದವರೇ ‘ಆಯ್ತು ಬಿಡು, ಒಕೆ ಎಂದು’ ಗ್ರೀನ್ ಸಿಗ್ನಲ್ ನೀಡಿ, ನಮ್ಮ ಜತೆಗೆ ತಿಂಡಿಗೆ ಕುಳಿತುಕೊಂಡರು. ಆ ಕ್ಷಣವನ್ನು ನಾನು ಇಂದಿಗೂ ಮರೆಯಲು ಸಾಧ್ಯವಿಲ್ಲ. ಕೇವಲ ನನ್ನ 24ನೇ ವಯಸ್ಸಿಗೆ ಕನ್ನಡ ಚಿತ್ರರಂಗದಲ್ಲಿ ದಿಗ್ಗಜ ನಟನಾಗಿ, ರಾಜಕಾರಣದಲ್ಲಿ ಛಾಪು ಮೂಡಿಸಿರುವ ವ್ಯಕ್ತಿಗೆ ನಿರ್ದೇಶನ ಮಾಡುತ್ತೇನೆ ಎಂದರೆ ಅದುನನ್ನ ಪೂರ್ವ ಜನ್ಮದ ಪುಣ್ಯ ಎಂದೇ ಭಾವಿಸುವೆ. ಆ ಮೊದಲ ಭೇಟಿ ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ. ಅಂದಿನಿಂದ ಆರಂಭವಾದ ನಮ್ಮ ಒಡನಾಟ ಮುಂದಿನ ಒಂದೂವರೆ ವರ್ಷವರೆಗೆ ಸಾಗಿತು. ಪ್ರತಿ ದಿನ ಬೆಳಗ್ಗೆ ಅವರ ಮನೆಯಲ್ಲಿಯೇ ತಿಂಡಿ. ಬಳಿಕ ಸಿನಿಮಾ ಡಿಸ್ಕಷನ್. ಅಂಬರೀಷ್ ಅಣ್ಣಾವ್ರೇ ಹೇಳಿದಂತೆ, ‘ಈ ಒಂದೂವರೆ ವರ್ಷದಲ್ಲಿ ನನ್ನ ಹೆಂಡತಿಗಿಂತ ಹೆಚ್ಚು, ನಿನ್ನ ಜತೆ ಕಾಲ ಕಳೆದಿದ್ದೇನೆ’ ಎಂದು ಹೇಳಿ ನಗಾಡುತ್ತಿದ್ದರು. ಚಿಕ್ಕ ವಯಸ್ಸಿನವನಾದ ಕಾರಣಕ್ಕೆ ನನಗೆ ಮೊದಲು ಸ್ವಲ್ಪ ಭಯವಿತ್ತು. ಅದು ನಿವಾರಿಸಿದ್ದು ಅವರೇ. ಅವರೊಬ್ಬ ನಟ, ನಾನೊಬ್ಬ ನಿರ್ದೇಶಕ ಎಂಬ ಅಲೋಚನೆಯಾಚೆ ಅವರು ನನ್ನ ಜತೆ ಕಾಲ ಕಳೆಯಲು ಮುಂದಾದರು. ಊಟ, ತಿಂಡಿ, ಸುತ್ತಾಟ ಏನೇ ಇರಲಿ ಅವರ ಜತೆ ನಾನಿರಬೇಕು. ಕ್ರಮೇಣ ಭಯ ನನಗೆ ನಿವಾರಣೆಯಾಗಿ ನಮ್ಮಿಬ್ಬರ ನಡುವೆ ಬಾಂಧವ್ಯ ಬೆಳೆಯಿತು.
ಈ ಸಮಯದಲ್ಲಿ ಪ್ರತಿ ನನ್ನ ನಿರ್ಧಾರಗಳನ್ನು ಅವರು ಸ್ವಾಗತಿಸುತ್ತಿದ್ದರು. ಹಾಗೆಯೇ ಶೂಟಿಂಗ್ನಲ್ಲಿ ನಿಮಗೆ ಏನು ಬೇಕೋ ಅದನ್ನು ಚೆನ್ನಾಗಿ ಕಮ್ಯುನಿಕೇಟ್ ಮಾಡಿ, ಬಗೆಹರಿಸಿಕೊಳ್ಳಿ. ಯಾವ ಗೊಂದಲ ಮಾಡಿಕೊಳ್ಳಬೇಡಿ ಎಂದು ಮೊದಲೇ ಹೇಳಿದ್ದರು. ಎಂದಿಗೂ ಅವರು ದಿಗ್ಗಜ ನಟ ಎಂಬುದನ್ನು ತೋರಿಸಿಕೊಂಡವರಲ್ಲ. ಸರಳವಾಗಿರುತ್ತಿದ್ದರು. ಈ ಬಗ್ಗೆ ನಾನೇ ಕೇಳಿದರೆ, ‘ನಾನು ರೆಬೆಲ್ ಸ್ಟಾರ್ ಅಂಬರೀಷ್ ಹೊರಗಡೆ. ಬಣ್ಣ ಹಚ್ಚಿದ ಮೇಲೆ ನಾನೊಬ್ಬ ಕಲಾವಿದ. ನಿರ್ಮಾಪಕ, ನಿರ್ದೇಶಕ ಏನು ಹೇಳುತ್ತಾರೋ, ಅದನ್ನು ಮಾಡುವುದಷ್ಟೇ ನನ್ನ ಕೆಲಸ. ಆ ಮಾತು ಇಂದಿಗೂ ನನ್ನನ್ನು ಕಾಡುತ್ತದೆ. ಆ ಕಾರಣಕ್ಕಾಗಿಯೇ ಅವರು ಒಬ್ಬ ದೊಡ್ಡ ನಾಯಕರಾದರು ಅನಿಸುತ್ತದೆ.
ನಮ್ಮ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದಲ್ಲಿ ನಾವೊಂದು ಬೈಕ್ ಬಳಕೆ ಮಾಡಿದ್ದೇವೆ. ಆ ಬೈಕ್ ಮೇಲೆ ಅಣ್ಣನದು ವಿಪರೀತ ಪ್ರೀತಿ. ಶೂಟಿಂಗ್ ಎರಡು ದಿನ ಮುಂಚೆಯೇ ಬೈಕ್ ತರಿಸಿಕೊಂಡು ಸವಾರಿ ಮಾಡಿದ್ದರು. ಇನ್ನು ಅಣ್ಣ ಮತ್ತು ನಾನು ಆ ಬೈಕ್ನಲ್ಲಿ ಮೈಸೂರು, ಮಂಡ್ಯ ಸೇರಿ ಹಲವು ಕಡೆ ಸುತ್ತಾಡಿದ್ದೇವೆ. ಆಗ ಅವರು ‘ಮಂಡ್ಯದ ಗಂಡು’ ಚಿತ್ರದ ಹಾಡಿನ ಚಿತ್ರೀಕರಣದ ಬಗ್ಗೆ ನೆನಪಿಸಿಕೊಂಡು, ಅಲ್ಲಿ ಸೈಕಲ್ ಓಡಿಸಿದ್ದೆ. ಇಲ್ಲಿ ಬೈಕ್ ಓಡಿಸುತ್ತಿದ್ದೇನೆ’ ಎಂದಿದ್ದರು. ಇನ್ನು ಶೂಟಿಂಗ್ ಸೆಟ್ನಲ್ಲಿ ಯಾವಾಗಲೂ ನ್ನಿಯಾಗಿಯೇ ಇರುತ್ತಿದ್ದ ಅವರು ಬೆಂಗಳೂರಿನ ‘ದ ಬೆಸ್ಟ್ ುಡ್’ ಅಂತಾ ಏನೆಲ್ಲ ಇದ್ಯಾವೋ ಅವೆಲ್ಲವೂ ನಮಗೆ ತಿನಿಸಿದ್ದಾರೆ. ಅವರು ಎಲ್ಲರೊಂದಿಗೆ ಕುಳಿತು ಊಟ ಮಾಡಿ ಎಂಜಾಯ್ ಮಾಡುತ್ತಿದ್ದರು.
ಜನಗಳ ನಿಷ್ಕಲ್ಮಶವಾದ ಪ್ರೀತಿ ದೊರೆಯುವುದು ಸುಲಭವಲ್ಲ. ಅದು ಅಂಬರೀಷ್ ಅಣ್ಣನಿಗೆ ದೊರೆತಿತ್ತು. ರಾಜಕಾರಣ ಹಾಗೂ ಸಿನಿಮಾ ಎರಡು ಕಡೆಯಿಂದ ಅವರು ಜನರ ಪ್ರೀತಿ ಸಂಪಾದಿಸಿದ್ದರು. ಮಂಡ್ಯದಿಂದ ನಾಮಪತ್ರ ಸಲ್ಲಿಸುವುದಿಲ್ಲ ಎಂಬ ಸುದ್ದಿ ಹರಿಹಾಡಿತ್ತು. ಆ ಸುದ್ದಿ ಬಂದ ತಾಸಿನೊಳನಗೆ ಅವರ ಮನೆ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಅವತ್ತೇ ಅಂದುಕೊಂಡೇ ಜನರ ಪ್ರೀತಿ ಸಾಧಿಸುವುದು ಮುಖ್ಯ ಎಂದು. ಇನ್ನು ಪ್ರತಿ ಭಾನುವಾರ ಅಣ್ಣಾವ್ರ ಅಭಿಮಾನಿಗಳನ್ನು ಭೇಟಿ ಮಾಡಿ, ಅವರ ಸಮಸ್ಯೆಗಳಿಗೆ ಸ್ಪಂದಿಸಿ, ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದರು. ಆ ನೆರವಿಗೆ ಎಂದಿಗೂ ಪ್ರತಿಲ ಬಯಸಿದವರಲ್ಲ. ಅದಕ್ಕಾಗಿ ಅವರೇ ‘ಕಲಿಯುಗದ ಕರ್ಣ’ ಎಂದು ಪ್ರಸಿದ್ಧರಾದರು.
ಶೂಟಿಂಗ್ ಸಮಯದಲ್ಲಿ ಅಂಬರೀಷ್ ಅಣ್ಣಾವ್ರ, ಡಾ.ರಾಜಕುಮಾರ್ ಹಾಗೂ ವಿಷ್ಣುವರ್ಧನ್ ಅವರನ್ನು ಸದಾ ನೆನೆಯುತ್ತಿದ್ದರು. ಜಯನಗರದಲ್ಲಿ ಒಮ್ಮೆ ಶೂಟಿಂಗ್ ಮಾಡುವಾಗ ನನ್ನನ್ನು ವಿಷ್ಣುವರ್ಧನ್ ಸರ್ ಮನಗೆ ಕರೆದುಕೊಂಡು ಹೋಗಿ, ಒಡನಾಟವನ್ನು ನನ್ನೊಂದಿಗೆ ಮೆಲುಕು ಹಾಕಿ, ‘ಅವನೊಬ್ಬ ನನ್ನೊಂದಿಗೆ ಇರಬೇಕಿತ್ತು’ ಎಂದಿದ್ದರು. ಮೌಲ್ಯದೊಂದಿಗೆ ಬದುಕಿದ ವ್ಯಕ್ತಿತ್ವ ಅಂಬರೀಷ್ ಅಣ್ಣ.