ಬಾಳೆ ಎಲೆಯ ಕಷಾಯ ಕುಡಿದ್ರೆ ಸಾಕು ಅಲರ್ಜಿ, ಜ್ವರ ಮಾಯಾ...

banana leaf
Published on

ಬೆಂಗಳೂರು: ಹಿಂದಿನ ಕಾಲದಲ್ಲಿ ಜನರು ಚಿಕಿತ್ಸೆಗಾಗಿ ಆಯುರ್ವೇದವನ್ನು ಅವಲಂಬಿಸಿದ್ದರು. ಅನೇಕ ರೋಗಗಳನ್ನು ಪರೀಕ್ಷಿಸಲು ಕೆಲವು ವಿಧದ ಎಲೆಗಳು ಮತ್ತು ಕಷಾಯಗಳನ್ನು ಬಳಸಲಾಗುತ್ತಿತ್ತು. ಬಾಳೆ ಹಣ್ಣು, ಬಾಳೆಕಾಯಿ ಹಾಗೂ ಬಾಳೆ ದಿಂಡು(ಕಾಂಡ) ತಿನ್ನುವ ನಿಮಗೆ  ನಾವು ಇಂದು ನಿಮಗೆ ಬಾಳೆ ಎಲೆಯಿಂದ ಆರೋಗ್ಯಕ್ಕೆ ಇರುವ ಲಾಭಗಳ ಕುರಿತಾಗಿ ಹೇಳಲಿದ್ದೇವೆ.

1)ಬಾಳೆ ಎಲೆಯಲ್ಲಿ ಐಸ್​​ ಕ್ಯೂಬ್​​ ತುಂಡನ್ನು ಸುತ್ತಿ ತಲೆಗೆ ಮಸಾಜ್ ಮಾಡುವುದರಿಂದ ಒತ್ತಡ ಕಡಿಮೆಯಾಗಿ ಪರಿಹಾರ ದೊರೆಯುತ್ತದೆ.

2) ಬಾಳೆ ಎಲೆಯ ರಸವನ್ನು ಹಚ್ಚುವುದರಿಂದ ಚರ್ಮದ ಅಲರ್ಜಿ ಇರುವವರಿಗೆ ಸಹಾಯವಾಗುತ್ತದೆ.

3) ಬಾಳೆ ಎಲೆಯ ಕಷಾಯವನ್ನು ಕುಡಿಯುವುದರಿಂದ ಜ್ವರವೂ ಕಡಿಮೆಯಾಗುತ್ತದೆ. ( ಬಾಳೆ ಎಲೆಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಕುಡಿಯುವುದು)

4) ಬಾಳೆ ಎಲೆಗಳನ್ನು ಸ್ವಲ್ಪ ಜಗಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.

5) ರಸವನ್ನು ತೆಗೆದುಕೊಂಡು ಕೂದಲಿನ ಬುಡಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ಸ್ನಾನ ಮಾಡಿದರೆ ತಲೆಹೊಟ್ಟು ಸಮಸ್ಯೆ ದೂರವಾಗಿ ಕೂದಲು ಚೆನ್ನಾಗಿ ಬೆಳೆಯುತ್ತದೆ.

6) ಒಣಗಿದ ಬಾಳೆ ಎಲೆಗಳ ಕಷಾಯವು ರಕ್ತಸ್ರಾವದೊಂದಿಗೆ ಭೇದಿ ಗುಣಪಡಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net