More

    ಆರೋಗ್ಯಕ್ಕೆ ವರದಾನ ʼಬಾಳೆಕಾಯಿʼ; ಬಾಳೆ ಹಣ್ಣನ್ನಲ್ಲ ಕಾಯಿ ತಿಂದು ಆರೋಗ್ಯ ಲಾಭ ಪಡೆದುಕೊಳ್ಳಿ…

    ಬೆಂಗಳೂರು: ಬಾಳೆಹಣ್ಣು ಅತ್ಯಂತ ಪೌಷ್ಟಿಕ, ರುಚಿಕರ ಹಣ್ಣು ಎನ್ನುವುದರಲ್ಲಿ ಎರಡು ಮಾತಿಲ್ಲ.  ಬಾಳೆಕಾಯಿ ಇದ್ದಾಗಲೇ, ಅಂದರೆ, ಸಿಪ್ಪೆ ಇನ್ನೂ ಹಚ್ಚ ಹಸಿರಾಗಿರುವಾಗಲೇ ಸೇವಿಸಿದರೆ ಆರೋಗ್ಯಕರ ಪ್ರಯೋಜನಗಳೂ ಇವೆ. ಬಾಳೆಕಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಇರುವ ಲಾಭಗಳ ಕುರಿತಾಗಿ ತಿಳಿದುಕೊಳ್ಳೋಣ…

    green banana

    ಬಾಳೆಕಾಯಿಯಲ್ಲಿ ಕಬ್ಬಿಣ, ಪಿಷ್ಟ, ರಂಜಕ, ಕ್ಯಾಲ್ಸಿಯಂ, ಸತು ಮುಂತಾದ ಪೋಷಕಾಂಶಗಳು ಲಭ್ಯವಿವೆ.  ಮಾಗಿದ ಬಾಳೆಹಣ್ಣುಗಳಿಗಿಂತ ಬಾಳೆಕಾಯಿ ಹೆಚ್ಚು ಪ್ರಯೋಜನಕಾರಿ. ಬಾಳೆಕಾಯಿ ಮಧುಮೇಹ ರೋಗಿಗಳಿಗೆ ಒಳ್ಳೆಯದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

    1) ಬಾಳೆಕಾಯಿಯಲ್ಲಿ ಫೈಬರ್‌ನಲ್ಲಿ ಸಮೃದ್ಧವಾಗಿರುವುದರಿಂದ ಇದು ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಇದು ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

    ಆರೋಗ್ಯಕ್ಕೆ ವರದಾನ ʼಬಾಳೆಕಾಯಿʼ; ಬಾಳೆ ಹಣ್ಣನ್ನಲ್ಲ ಕಾಯಿ ತಿಂದು ಆರೋಗ್ಯ ಲಾಭ ಪಡೆದುಕೊಳ್ಳಿ...

    2) ಬಾಳೆಕಾಯಿಯನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಹೆಚ್ಚು ಹಸಿವು ಉಂಟಾಗುವುದಿಲ್ಲ. ತೂಕ ನಿಯಂತ್ರಣಕ್ಕೆ ಇದು ತುಂಬಾ ಪ್ರಯೋಜನಕಾರಿಯಾಗಿದೆ.

    3) ಬಾಳೆಕಾಯಿ  ಚರ್ಮಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದರಲ್ಲಿ ವಿಟಮಿನ್ ಮತ್ತು ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ. ಇದು ಮುಖದ ಮೇಲಿನ ಸುಕ್ಕುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರಿಂದ ಚರ್ಮವು ಹೊಳೆಯುತ್ತದೆ.

    ಆರೋಗ್ಯಕ್ಕೆ ವರದಾನ ʼಬಾಳೆಕಾಯಿʼ; ಬಾಳೆ ಹಣ್ಣನ್ನಲ್ಲ ಕಾಯಿ ತಿಂದು ಆರೋಗ್ಯ ಲಾಭ ಪಡೆದುಕೊಳ್ಳಿ...

    4)  ಬಾಳೆಕಾಯಿಯೂ ಹೃದಯಸ್ನೇಹಿ ಆಹಾರವಾಗಿದೆ. ಇದರಲ್ಲಿರುವ ಅತ್ಯುತ್ತಮ ಪ್ರಮಾಣದ ಪೊಟ್ಯಾಶಿಯಂ ಸ್ನಾಯುಗಳ ಸಂಕುಚನಕ್ಕೆ ಅಗತ್ಯವಾಗಿರುವ ಖನಿಜವಾಗಿದೆ ಹಾಗೂ ವಿಶೇಷವಾಗಿ ಹೃದಯದ ಬಡಿತಕ್ಕೆ ಅಗತ್ಯ ಇಂಧನದಂತೆ ಕಾರ್ಯ ನಿರ್ವಹಿಸುತ್ತದೆ.‘

    5) ಬಾಳೆಕಾಯಿ ಸೇವನೆಯಿಂದ ಮೂಳೆಗಳು ಗಟ್ಟಿಯಾಗುತ್ತದೆ.

    6) ಧ್ವನಿಯಲ್ಲಿ ಏರುಪೇರಾಗಿ ಮಾತನಾಡಲು ಕಷ್ಟವಾದಾಗ ಹಸಿಬಾಳೆಕಾಯಿಯನ್ನು ತಿಂದರೆ ಧ್ವನಿ ಸರಿಯಾಗುತ್ತೆ.

    ಬಾಳೆಹಣ್ಣು ಅತ್ಯಂತ ಪೌಷ್ಟಿಕ ಹಾಗೂ ರುಚಿಕರ ಹಣ್ಣು. ವರ್ಷದ ಎಲ್ಲಾ ದಿನಗಳಲ್ಲಿ, ಎಲ್ಲಾ ಕಡೆ ಸಿಗುವ ಬಾಳೆಹಣ್ಣನ್ನು ಹಾಗೇ ಸೇವಿಸಬಹುದು ಅಥವಾ ಸ್ಮೂಥಿ, ಪಾಯಸ, ಫ್ರೂಟ್ ಸಾಲಾಡ್, ವಿವಿಧ ಸಿಹಿತಿನಿಸುವಳು, ಕಡುಬು ಮೊದಲಾದ ಖಾದ್ಯಗಳ ಮೂಲಕವೇ ಸೇವಿಸಬಹುದು. ಇದೇ ಬಾಳೆಕಾಯಿ ಇದ್ದಾಗಲೇ, ಸೇವಿಸಿದರೆ ಹಣ್ಣಾದ ಬಳಿಕ ಸಿಗದ ಕೆಲವಾರು ಆರೋಗ್ಯಕರ ಪ್ರಯೋಜನಗಳೂ ಇವೆ.

    ಬಾಳೆಕಾಯಿಯನ್ನು ಸೇವಿಸುವುದು ಹೇಗೆ?: ಬಾಳೆಕಾಯಿಯ ಸಿಪ್ಪೆ ಸುಲಿದು ಒಳಗಿನ ತಿರುಳನ್ನು ತರಕಾರಿಯ ರೂಪದಲ್ಲಿ ವಿವಿಧ ಖಾದ್ಯ ತಯಾರಿಸಬಹುದು. ಹುರಿದರೆ ಅಥವಾ ಕರಿದು, ಪಲ್ಯ ಮಾಡಿ ಅಥವಾ ಬಾಳೆಕಾಯಿ ಕಟ್​​ ಮಾಡಿ ಹಸಿಯಾಗಿನೆ ಸೇವಿಸಬಹುದಾಗಿದೆ.

    ಬಾಳೆಕಾಯಿಯ ಸಿಪ್ಪೆಯನ್ನು ಬೇರ್ಪಡಿಸಿ ಅದಕ್ಕೆ ಉಪ್ಪು, ಮೆಣಸು, ಕುತ್ತೊಂಬರಿ ಸೊಪ್ಪು ಮತ್ತು ಈರುಳ್ಳಿಯನ್ನು ಸೇರಿಸಿ ತಿನ್ನಬೇಕು.

    (ಗಮನಿಸಿ: ವಿಷಯಗಳು ಮಾಹಿತಿಗಾಗಿ ಮಾತ್ರ. ಇದನ್ನು ತಜ್ಞರ ಸಲಹೆ ಮತ್ತು ಸಲಹೆಗಳ ಪ್ರಕಾರ ನೀಡಲಾಗಿದೆ. ನಿಮಗೆ ಯಾವುದೇ ಸಂದೇಹಗಳಿದ್ದರೆ, ತಜ್ಞರನ್ನು ಸಂಪರ್ಕಿಸಲು ನಾವು ಸಲಹೆ ನೀಡುತ್ತೇವೆ.)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts