More

    ಚಿರತೆ ಪತ್ತೆಗೆ ಡ್ರೋನ್ ಬಳಕೆ, ಅರಣ್ಯ ಇಲಾಖೆ ಸಿಬ್ಬಂದಿ ಮೇಲೂ ದಾಳಿ, ಬಾಳೆ ತೋಟ ನಾಶಪಡಿಸಿದರೂ ಕಣ್ಮರೆಯಾದ ಚಿರತೆ!

    ಗಜೇಂದ್ರಗಡ: ತಾಲೂಕಿನ ಜಿಗೇರಿ ಗ್ರಾಮದ ಸರಹದ್ದಿನ ಬಾಳೆ ತೋಟದಲ್ಲಿ ಬುಧವಾರ ಅರಣ್ಯ ಇಲಾಖೆಯ ಸಿಬ್ಬಂದಿ ಸೇರಿ ನಾಲ್ವರ ಮೇಲೆ ಚಿರತೆ ದಾಳಿ ನಡೆಸಿದ ಪರಿಣಾಮ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಪತ್ತೆಗಾಗಿ ಡ್ರೋನ್ ಹಾರಾಟ ನಡೆಸಿದ್ದಾರೆ.

    ಬುಧವಾರ ಸಂಜೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಚಿರತೆ ಕಾಣಿಸಿಕೊಂಡು ಆತಂಕ ಮೂಡಿಸಿದೆ. ಗ್ರಾಮದ ಅವಾರಿ ಅವರ ಬಾಳೆ ತೋಟದಲ್ಲಿ ಚಿರತೆ ಮರಿ ಹಾಕಿದೆ ಎನ್ನಲಾಗಿದೆ. ಹೀಗಾಗಿ ಚಿರತೆ ಈ ಬಾಳೆ ತೋಟದಲ್ಲಿ ಇರಬೇಕು ಎಂಬ ಅನುಮಾನದ ಮೇಲೆ ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಸಹಾಯದಿಂದ ಬಾಳೆ ತೋಟದ ಸುತ್ತಲೂ ಬಲೆ ಹಾಕಿ ಶೋಧನೆ ನಡೆಸಿದರೂ ಚಿರತೆ ಸಿಗದ ಕಾರಣ ಎರಡು ಜೆಸಿಬಿ ಬಳಸಿ ಎರಡೂವರೆ ಎಕರೆ ಬಾಳೆ ತೋಟ ನಾಶಗೊಳಿಸಿದ್ದಾರೆ. ಆದರೂ ಚಿರತೆ ಸಿಗದೆ ಇರುವುದು ಜಿಗೇರಿ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ.

    ಅರಣ್ಯ ಇಲಾಖೆಯ 50 ಜನ ಸಿಬ್ಬಂದಿ ಚಿರತೆ ಸೆರೆಗೆ ಸಜ್ಜಾಗಿದ್ದಾರೆ. ಬಾಳೆ ತೋಟದ ಹಲವು ಕಡೆಗಳಲ್ಲಿ ಚಿರತೆ ಅಲೆದಾಡಿದ ಹೆಜ್ಜೆ ಗುರುತುಗಳು ಕಾಣುತ್ತಿವೆ. ಆರ್​ಎಫ್​ಒ ಮಂಜುನಾಥ ಮೆಗಳಮಣಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts