ಪಪ್ಪಾಯ ಹಣ್ಣು ಆರೋಗ್ಯಕ್ಕೆ ಒಳ್ಳೆಯದಾ.. ಈ ಆಹಾರದ ಜತೆ ತಿಂದರೆ ರೋಗ ಕಟ್ಟಿಟ್ಟಬುತ್ತಿ!

Untitled-design-2024-07-05T200837.613
Published on

ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಪಪ್ಪಾಯ ಹಣ್ಣಿನಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಪಪ್ಪಾಯ ಹಣ್ಣು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಪಪ್ಪಾಯ ತಿನ್ನುವುದು ತೂಕ ಇಳಿಸಲು ಸಹಕಾರಿಯಾಗಿದೆ. ಅಲ್ಲದೆ ಮಧುಮೇಹಿಗಳು ಕೂಡ ಮುಕ್ತವಾಗಿ ತಿನ್ನುವ ಹಣ್ಣುಗಳಲ್ಲಿ ಪಪ್ಪಾಯ ಕೂಡ ಒಂದು.ಅದಷ್ಟೆ ಅಲ್ಲ ಕೊಬ್ಬು, ಕಾರ್ಬೋಹೈಡ್ರೇಟ್, ವಿಟಮಿನ್ ಸಿ, ಎ, ಇ, ಬಿ, ಖನಿಜಗಳು, ಪ್ರೊಟೀನ್ ಮತ್ತು ಆಹಾರದ ನಾರುಗಳಂತಹ ಅನೇಕ ರೀತಿಯ ಪೋಷಕಾಂಶಗಳು ಪಪ್ಪಾಯ ಹಣ್ಣಿನಲ್ಲಿ ಕಂಡುಬರುತ್ತವೆ.

ಪಪ್ಪಾಯ ಹಣ್ಣಿನಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ 60 ಮತ್ತು ಆಹಾರದ ಫೈಬರ್ ಇರುವುದರಿಂದ ಫಿಟ್‌ನೆಸ್ ತಜ್ಞರು ಪ್ರತಿದಿನ ಪಪ್ಪಾಯಿಯನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ಪಪ್ಪಾಯದಲ್ಲಿ ಕಂಡುಬರುವ ಪಪೈನ್ ಕಿಣ್ವವು ಅಲರ್ಜಿಯ ವಿರುದ್ಧ ಹೋರಾಡುತ್ತದೆ ಮತ್ತು ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಆದರೆ ಪಪ್ಪಾಯವನ್ನು ಕೆಲವು ಆಹಾರ ಜತೆ ತಿನ್ನುವುದು ತುಂಬಾ ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ.

  • ನಿಂಬೆರಸದ ಜತೆ ಪಪ್ಪಾಯ ತಿನ್ನಬೇಡಿ: ಪಪ್ಪಾಯ ಮತ್ತು ನಿಂಬೆರಸವನ್ನು ಒಟ್ಟಿಗೆ ಸೇವಿಸುವುದು ಅಪಾಯಕಾರಿ. ಒಟ್ಟಿಗೆ ತಿನ್ನುವುದರಿಂದ ಹಿಮೋಗ್ಲೋಬಿನ್ ಮಟ್ಟವನ್ನು ಅಸಮತೋಲನಗೊಳಿಸುತ್ತದೆ ಮತ್ತು ರಕ್ತಹೀನತೆ ಉಂಟಾಗಬಹುದು.
  • ಮೊಸರಿನೊಂದಿಗೆ ಪಪ್ಪಾಯ ಡೇಂಜರ್​​: ಪಪ್ಪಾಯಿಯ ಸ್ವಭಾವ ಬಿಸಿಯಾಗಿದ್ದರೆ ಮೊಸರಿನ ಸ್ವಭಾವ ತಂಪು. ಪಪ್ಪಾಯ ತಿಂದ ತಕ್ಷಣ ಮೊಸರು ತಿನ್ನುವುದರ ಬದಲು ಪಪ್ಪಾಯ ಸೇವಿಸಿದ ಒಂದು ಅಥವಾ ಎರಡು ಗಂಟೆಗಳ ನಂತರ ಮೊಸರನ್ನು ಸೇವಿಸಿ.
  • ಪಪ್ಪಾಯ ಜತೆ ಕಿತ್ತಳೆ: ನಿಂಬೆಹಣ್ಣಿನಂತೆ ಕಿತ್ತಳೆಯು ಹುಳಿಯಾಗಿರುತ್ತದೆ. ಸಲಾಡ್‌ನಲ್ಲಿ ಕಿತ್ತಳೆ ಮತ್ತು ಪಪ್ಪಾಯವನ್ನು ಒಟ್ಟಿಗೆ ತಿಂದರೆ ವಿಷದಂತೆ ಬದಲಾಗುತ್ತದೆ.
  • ಟೋಮಾಟೊ ವಿತ್​ ಪಪ್ಪಾಯ: ಇದೆರಡನ್ನು ಒಟ್ಟಿಗೆ ತಿನ್ನುವುದು ಕಾಯಿಲೆಗೆ ನಾವೇ ವೆಲ್​ಕಮ್​ ಮಾಡಿದಾಗೆ. ಎರಡು ತದ್ವಿರುದ್ಧ ಸ್ವಭಾವ ಹೊಂದಿದ್ದು ಒಟ್ಟಿಗೆ ಸೇವಿಸುವುದರಿಂದ ಆರೋಗ್ಯ ಹದಗೆಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net