ದೈನಂದಿನ ಜೀವನದಲ್ಲಿ ಈ ಅಭ್ಯಾಸಗಳನ್ನು ಫಾಲೋ ಮಾಡಿ; ಮಾನಸಿಕ ಆರೋಗ್ಯ ಹೆಚ್ಚಾಗುವುದು ಪಕ್ಕಾ

Untitled-design-2024-07-05T192810.404
Published on

ದಿನದಿಂದ ದಿನಕ್ಕೆ ಪ್ರತಿಯೊಬ್ಬರ ಜೀವನವು ಒತ್ತಡದಿಂದ ತುಂಬಿದೆ. ಇದು ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಅನಾರೋಗ್ಯಕ್ಕೆ ತುತ್ತಾಗುವುದೇ ಹೆಚ್ಚು. ಜೀವನದಲ್ಲಿ ಒತ್ತಡ ಮುಕ್ತರಾಗಿ, ಶಾಂತಿಯುತವಾಗಿ ಮತ್ತು ಆರಾಮದಾಯಕವಾಗಿ ಇರಲು ಉತ್ತಮ ಮಾರ್ಗ ಕಂಡುಕೊಳ್ಳುವುದು ತುಂಬಾ ಮುಖ್ಯವಾಗಿದೆ. ಅಲ್ಲದೆ ಮನಸ್ಸಿಗೆ ಕಾಳಜಿ ವಹಿಸದಿದ್ದರೆ ವಿಷಯಗಳು ನಮ್ಮ ನಿಯಂತ್ರಣ ತಪ್ಪುವ ಸಾಧ್ಯತೆ ಇದೆ. ಮಾನಸಿಕ ಒತ್ತಡ ಅಪಾಯದ ವಿರುದ್ಧ ಹೋರಾಡಲು ಕೆಲವೊಂದು ಅಭ್ಯಾಸಗಳನ್ನು ದೈನಂದಿನ ಜೀವನದಲ್ಲಿ ರೂಢಿಸಿಕೊಳ್ಳಬೇಕು. ಮಾನಸಿಕ ಆರೋಗ್ಯ ಸುಧಾರಿಸಕೊಳ್ಳುವುದು ಹೇಗೆ? ಏನು ಮಾಡಬಹುದು ಎಂದು ಯೋಚಿಸುವವರಿಗೆ ಇಲ್ಲಿ ಸುಲಭ ಮಾರ್ಗಗಳನ್ನು ತಿಳಿಸಲಾಗಿದೆ.

ಇದನ್ನು ಓದಿ: ಮಾನಸಿಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬೇಕೆ?; ಹಾಗಾದ್ರೆ ಈ ಹವ್ಯಾಸಗಳನ್ನು ಮೊದಲು ಬಿಡಿ ಮಾನಸಿಕ ಆರೋಗ್ಯ ಸುಧಾರಿಸಲು ಇರುವ ಅಭ್ಯಾಸಗಳು:

  • ಸಾಕಷ್ಟು ನಿದ್ರೆ ಮಾಡಿ: ಜೀವನದಲ್ಲಿ ನಿದ್ರೆ ಮುಖ್ಯವಾಗಿದೆ ಏಕೆಂದರೆ ಅದು ದೇಹವನ್ನು ವಿಶ್ರಾಂತಿ ಮಾಡಲು ಮತ್ತು ಮನಸ್ಸನ್ನು ಮರುಹೊಂದಿಸಲು ಅನುವು ಮಾಡಿಕೊಡುತ್ತದೆ. ನಿದ್ರೆಯು ಮನಸ್ಥಿತಿಯ ಮೇಲೆ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿದೆ. ರಾತ್ರಿ ಸಮಯದಲ್ಲಿ ನಿದ್ರೆ ಮಾಡದಿದ್ದರೆ ಮರುದಿನ ಪೂರ್ತಿ ಕಿರಿಕಿರಿಯಿಂದ ಕೂಡಿರುತ್ತದೆ. ಅಲ್ಲದೆ ದೈಹಿಕ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಮಾನಸಿಕ ಆರೋಗ್ಯವು ಹದಗೆಡುತ್ತದೆ.
  • ಪೌಷ್ಟಿಕ ಆಹಾರ ಸೇವಿಸಿ: ಉತ್ತಮ ಆಹಾರ ಮಾನಸಿಕವಾಗಿ ಪರಿಣಾಮ ಬೀರುತ್ತದೆ. ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒಳಗೊಂಡಿರುವ ಸಮತೋಲಿತ ಆಹಾರ ಸೇವನೆಯು ಮನಸ್ಸು ಸರಾಗವಾಗಿರುವಂತೆ ಮಾಡುತ್ತದೆ. ಅಲ್ಲದೆ ಭಾವನಾತ್ಮಕ ಆರೋಗ್ಯವನ್ನು ಸುಧಾರಿಸುತ್ತದೆ
  • ವ್ಯಾಯಾಮ ಮಾಡಿ: ವ್ಯಾಯಾಮವು ಫಿಟ್​ನೆಸ್​​ಗೆ ಮಾತ್ರವಲ್ಲಿ ಮಾನಸಿಕ ಆರೋಗ್ಯಕ್ಕೂ ಬೆಸ್ಟ್​​​ ಸಲ್ಯೂಷನ್​. ಏಕೆಂದರೆ ವ್ಯಾಯಾಮವು ಒಟ್ಟಾರೆ ಮನಸ್ಥಿತಿಯನ್ನು ಸುಧಾರಿಸುತ್ತದೆ. ವ್ಯಾಯಾಮವು ಸಿರೊಟೋನಿನ್ ಮತ್ತು ಡೋಪಮೈನ್ ಎಂಬ ಉತ್ತಮ ಹಾರ್ಮೋನುಗಳನ್ನು ಬಿಡುಗಡೆ ಮಾಡುವ ಮೂಲಕ ಆತಂಕ ಮತ್ತು ಖಿನ್ನತೆಯ ವಿರುದ್ಧ ಹೋರಾಡುತ್ತದೆ. ಸಿರೊಟೋನಿನ್ ಒತ್ತಡವನ್ನು ಕಡಿಮೆ ಮಾಡುತ್ತದೆ, ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ,ಹೆಚ್ಚು ಜಾಗರೂಕರಾಗಿ ಮತ್ತು ಶಕ್ತಿಯುತವಾಗಿರುವಂತೆ ಮಾಡುತ್ತದೆ.
  • ಇತರರೊಂದಿಗೆ ಹೋಲಿಕೆ ಬೇಡ: ನಿಮ್ಮ ಸಾಧನೆಗಳನ್ನು ಇತರರು ಏನು ಮಾಡುತ್ತಿದ್ದಾರೆ ಎಂಬುದಕ್ಕೆ ಹೋಲಿಸುವುದು ಮಾನಸಿಕ ಆರೋಗ್ಯವನ್ನು ಕಡಿಮೆ ಮಾಡುತ್ತದೆ. ಜಗತ್ತಿನಲ್ಲಿ ಎಲ್ಲರೂ ವಿಭಿನ್ನರು. ಆದ್ದರಿಂದ ನಿಮ್ಮನ್ನು ಸುಧಾರಿಸಲು ನೀವು ಏನು ಮಾಡಬಹುದು ಎಂಬುದರ ಮೇಲೆ ಗಮನ ಕೇಂದ್ರೀಕರಿಸಿ ಇದರ ಹೊರತು ಇತರರು ಏನು ಮಾಡುತ್ತಿದ್ದಾರೆ ಎಂಬುದರ ಮೇಲೆ ಬೇಡ.
  • ಇತರರೊಂದಿಗೆ ಸಂಪರ್ಕ ಸಾಧಿಸಿ: ಫೋನ್, ಸಂದೇಶ ಅಥವಾ ವೈಯಕ್ತಿಕವಾಗಿ ನಿಮ್ಮ ಪ್ರೀತಿಪಾತ್ರರನ್ನು ನಿಯಮಿತವಾಗಿ ಸಂಪರ್ಕಿಸುವುದು ಮುಖ್ಯವಾಗಿದೆ. ಸ್ನೇಹಿತರಾಗಲಿ, ಕುಟುಂಬದವರಾಗಲಿ ನೀವು ಕಾಳಜಿವಹಿಸುವ ಯಾರೊಂದಿಗಾದರೂ ಸಮಯ ಕಳೆಯಿರಿ. ಇದು ತ್ವರಿತ ಮನಸ್ಥಿತಿಗೆ ಬೂಸ್ಟರ್ ಆಗಿದೆ.
  • ಸಕಾರಾತ್ಮಕರಾಗಿರಿ: ಸಕಾರಾತ್ಮಕ ಮನಸ್ಥಿತಿ ಹೊಂದುವುದು ಮಾನಸಿಕ ಆರೋಗ್ಯವನ್ನು ಹೆಚ್ಚಿಸುವ ಸೂಪರ್​ಪವರ್​​. ಪ್ರತಿದಿನ ಧನಾತ್ಮಕವಾಗಿ ಯೋಚಿಸಿ. ಜೀವನದ ಬಗ್ಗೆ ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿರುವುದು, ಮಾನಸಿಕ ಆರೋಗ್ಯವನ್ನು ಇಮ್ಮಡಿಗೊಳಿಸುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net