ನೀವು ನಿತ್ಯ ಮದ್ಯ ಸೇವನೆ ಮಾಡ್ತೀರಾ.. ರಕ್ತದೊತ್ತಡ ಹೆಚ್ಚುವ ಸಾಧ್ಯತೆ ಇರುತ್ತೆ.. ಇರಲಿ ಜಾಗ್ರತೆ!

alchol
Published on

ಆಲ್ಕೋಹಾಲ್ ಸೇವಿಸದವರಿಗೆ ಹೋಲಿಸಿದರೆ ಕಡಿಮೆ ಮಟ್ಟದ ಆಲ್ಕೋಹಾಲ್ ಸೇವಿಸಿದ ವಯಸ್ಕರಲ್ಲಿ ಯಾವುದೇ ಪ್ರಯೋಜನಕಾರಿ ಪರಿಣಾಮ ಕಂಡು ಬಂದಿಲ್ಲ ಎಂಬುದನ್ನು ಅಧ್ಯಯನವೊಂದು ಬಹಿರಂಗ ಮಾಡಿದೆ. ತಿನಿತ್ಯ​​ ಆಲ್ಕೋಹಾಲ್​ ಸೇವನೆ ಮಾಡುವುದರಿಂದ ಕೂಡ ರಕ್ತದೊತ್ತಡದ ಮಟ್ಟ ಹೆಚ್ಚಲಿದೆ ಎಂದು ಅಧ್ಯಯನ ತಿಳಿಸಿದೆ.


ಈ ಕುರಿತು ಸೆವೆನ್​ ಇಂಟರ್​ನ್ಯಾಷನಲ್​ ರಿಸರ್ಚ್​​ ಅಧ್ಯಯನ ಪ್ರಕಟಿಸಿದೆ. ಅಧಿಕ ರಕ್ತದೊತ್ತಡ ಹೊಂದಿರದ ವಯಸ್ಕರಲ್ಲೂ ವಯಸ್ಕರು ನಿತ್ಯ ಮದ್ಯ ಸೇವನೆ ವರ್ಷಗಳು ಉರುಳಿದಂತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧ್ಯಯನಗಳು ತೋರಿಸಿವೆ.


ಈ ಕುರಿತು ಸೆವೆನ್​ ಇಂಟರ್​ನ್ಯಾಷನಲ್​ ರಿಸರ್ಚ್​​ ಅಧ್ಯಯನ ಪ್ರಕಟಿಸಿದೆ. ಅಧಿಕ ರಕ್ತದೊತ್ತಡ ಹೊಂದಿರದ ವಯಸ್ಕರಲ್ಲೂ ವಯಸ್ಕರು ನಿತ್ಯ ಮದ್ಯ ಸೇವನೆ ವರ್ಷಗಳು ಉರುಳಿದಂತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧ್ಯಯನಗಳು ತೋರಿಸಿವೆ.


ಆಲ್ಕೋಹಾಲ್​ ಸೇವನೆಗೆ ಸುರಕ್ಷಿತ ಮಟ್ಟ ಇಲ್ಲ: ಈ ವರ್ಷದ ಆರಂಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕೂಡ ಎಷ್ಟು ಪ್ರಮಾಣದ ಆಲ್ಕೋಹಾಲ್​ ಸೇವನೆಯು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಇದಕ್ಕೆ ಸುರಕ್ಷಿತ ಪ್ರಮಾಣ ಇಲ್ಲ ಎಂದು ತಿಳಿಸಿತ್ತು.
ಆಲ್ಕೋಹಾಲ್​ ಸೇವನೆ ಸುರಕ್ಷಿತ ಮಟ್ಟವನ್ನು ನಾವು ಮಾತನಾಡಲು ಸಾಧ್ಯವಿಲ್ಲ.

ಎಷ್ಟು ಪ್ರಮಾಣದ ಆಲ್ಕೋಹಾಲ್​ ಸೇವನೆ ಮಾಡುತ್ತೀರಾ ಎಂಬುದು ಪ್ರಮುಖವಾಗುವುದಿಲ್ಲ. ಇದರ ಅಪಾಯದ ಮಟ್ಟ ಒಂದು ಹನಿ ಆಲ್ಕೋಹಾಲ್​ ಸೇವನೆಯಿಂದಲೂ ಆಗಬಹುದು. ಹೆಚ್ಚು ಕುಡಿದಷ್ಟು ಹೆಚ್ಚು ಹಾನಿಯಾಗುತ್ತದೆ ಎಂದು ಹೇಳಬಹುದು ಅಷ್ಟೇ. ಕಡಿಮೆ ಕುಡಿತ ಕಡಿಮೆ ಅಪಾಯ ತರುತ್ತದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.


ರಕ್ತದೊತ್ತಡ ಹೆಚ್ಚಲು ಕೇವಲ ಮದ್ಯವೊಂದೇ ಕಾರಣವಲ್ಲ. ಮದ್ಯ ಸೇವನೆ ಮಿತಿಯಲ್ಲಿ ಇರಬೇಕು., ಸಾಧ್ಯವಾದಲ್ಲಿ ಬಿಡುವುದು ಉತ್ತಮ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net