ವಾಸ್ತವವಾಗಿ ಹೇಳುವುದಾದರೆ, ಚೂಯಿಂಗ್ ಗಮ್ನ್ನು ನುಂಗಿದರೆ, ದೇಹಕ್ಕೆ ಅದನ್ನು ಜೀರ್ಣೀಸಿಕೊಳ್ಳುವ ಶಕ್ತಿ ಇರುವುದಿಲ್ಲ. ಆದರಿಂದ ಇದು ಮಲದ ಮೂಲಕ ಹೊರಬರುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ. ಈ ಹಿಂದೆ ಚೂಯಿಂಗ್ ಗಮ್ ಅನ್ನು ಸಿಹಿಕಾರಕಗಳು ಮತ್ತು ವಿವಿಧ ಸುವಾಸನೆಗಳೊಂದಿಗೆ ತಯಾರಿ ಮಾಡುತ್ತಿದ್ದರು ಅದು ಜೀರ್ಣಾಂಗ ವ್ಯವಸ್ಥೆಗೆ ಯಾವುದೇ ಹಾನಿ ಮಾಡುತ್ತಿರಲಿಲ್ಲ. ಆದರೆ, ಈಗ ಚೂಯಿಂಗ್ ಗಮ್ ಅನ್ನು ಸಿಂಥೆಟಿಕ್ ಪಾಲಿಮರ್‌ಗಳು ಮತ್ತು ರಬ್ಬರ್‌ನಂತಹ ವಸ್ತುಗಳಿಂದ ತಯಾರಿಸಲಾಗುತ್ತದೆ. ಇದರಿಂದ ಸ್ವಲ್ಪ ಸಮಸ್ಯೆಯಾಗಬಹುದು.