ನೀರು ಕುಡಿಯೋದ್ರಲ್ಲೂ ಲಿಮಿಟ್ ಇದೆಯಾ? ಹೆಚ್ಚು ಕುಡಿದ್ರೆ ಏನಾಗುತ್ತೆ ಗೊತ್ತಾ? Drinking water

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಹೆಚ್ಚು ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು
  • ಹೆಚ್ಚು ನೀರು ಕುಡಿಯುವುರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ
  • ದೇಹಕ್ಕೆ ಎಷ್ಟು ಅಗತ್ಯ ಇದಿಯೋ ಅಷ್ಟು ನೀರು ಸೇವಿಸುವುದು ಬಹಳ ಉಪಯುಕ್ತ
  • ಮೂತ್ರಪಿಂಡಗಳು ಕಾರ್ಯನಿರ್ವಹಿಸಲು ಎಷ್ಟು ನೀರು ಬೇಕು ಅಷ್ಟು ಕುಡಿಯಿರಿ
Drinking water : ಹೆಚ್ಚು ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿರುವಂತಹ ವಿಷಯ. ನೀರು ದೇಹವನ್ನು ಆರೋಗ್ಯವಾಗಿಡುವುದರ ಜೊತೆಗೆ ಮೂತ್ರಪಿಂಡಗಳನ್ನು ಸ್ವಚ್ಛವಾಗಿರಿಸುತ್ತದೆ. ಹೆಚ್ಚು ಹೆಚ್ಚು ನೀರು ಕುಡಿಯುವುರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲಾಗುತ್ತದೆ. ಇದು ನಿಜವಾಗಿಯೂ ಹೌದು. ಆದರೆ, ನೀವು ಹೆಚ್ಚು ನೀರು ಕುಡಿದರೆ ಮೂತ್ರ ಪಿಂಡಗಳು ಬಲವಾಗಿರುತ್ತವೆ ಎನ್ನುವುದು ಅರ್ಥವಲ್ಲ. 
ಅನೇಕರು ಯಾವುದೇ ಮಾಹಿತಿ ಇಲ್ಲದೇ, ದೇಹಕ್ಕೆ ಬೇಕಾದಕ್ಕಿಂತಲೂ ಹೆಚ್ಚು ನೀರನ್ನು ಕುಡಿಯಲು ಆರಂಭಿಸುತ್ತಾರೆ. ಇದು ನಮ್ಮ ಮೂತ್ರಪಿಂಗಡಗಳಿಗೆ ಹಾನಿ ಮಾಡಬಹುದು. ಹಾಗಾಗಿ ದೇಹಕ್ಕೆ ಎಷ್ಟು ಅಗತ್ಯ ಇದಿಯೋ ಅಷ್ಟು ನೀರು ಸೇವಿಸುವುದು ಬಹಳ ಉಪಯುಕ್ತವಾಗಿದೆ. ಇಲ್ಲದಿದ್ದರೆ, ನೀವು ನಿಮ್ಮ ದೇಹವನ್ನು ತೊಂದರೆಯಲ್ಲಿ ಸಿಲುಕಿಸಿಕೊಳ್ಳುತ್ತೀರಿ. ಹಾಗಾಗಿ ಮೂತ್ರಪಿಂಡಗಳು ಕಾರ್ಯನಿರ್ವಹಿಸಲು ಎಷ್ಟು ನೀರು ಬೇಕು ಎಂದು ತಿಳಿದುಕೊಳ್ಳುವುದು ಮುಖ್ಯ. 

ಮೂತ್ರಪಿಂಡಗಳಿಗೆ ಎಷ್ಟು ನೀರು ಅತ್ಯಗತ್ಯ?

ನಮ್ಮ ದೇಹಕ್ಕೆ ಮೂತ್ರಪಿಂಡಗಳು ಒಂದು ಪ್ರಮುಖ ಅಂಗವಾಗಿದೆ. ಅವು ದೇಹದಲ್ಲಿ ಹೆಚ್ಚುವರಿ ಉಪ್ಪನ್ನು ತೆಗೆದುಹಾಕಿ, ನೀರು ಮತ್ತು ಖನಿಜಗಳ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಮೂತ್ರಪಿಂಡಗಳಿಗೆ ಸಾಕಷ್ಟು ನೀರು ಬೇಕಾಗಿರುತ್ತದೆ. ಇದು ಆರಾಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಆದರೆ, ಮೂತ್ರಪಿಂಡಗಳ ಕಾರ್ಯ ನಿರ್ವಹಿಸಲು ಎಷ್ಟು ಬೇಕು ಅಷ್ಟು ನೀರು ಇದ್ದರೆ ಸಾಕು ಇಲ್ಲದಿದ್ದರೆ, ಕಾರ್ಯಕ್ಷಮತೆಯಲ್ಲಿ ತೊಂದರೆ ಉಂಟಾಗಬಹುದು.

ಹೆಚ್ಚು ನೀರು ಕುಡಿಯುವುದು ಏನಾಗುತ್ತದೆ?

ಮೂತ್ರಪಿಂಡದ ಸಮಸ್ಯೆ ಹೊಂದಿರುವವರು ಹೆಚ್ಚು ನೀರು ಕುಡಿಯುವುದರಿಂದ ಕಾಯಿಲೆಯನ್ನು ತಡೆಯಬಹುದು ಎಂದು ತಿಳಿದಿರುತ್ತಾರೆ. ಆದರೆ, ಹೆಚ್ಚು ಹೆಚ್ಚು ನೀರು ಕುಡಿಯುವುದರಿಂದ ದೀರ್ಘಾವಧಿಯ ಮೂತ್ರಪಿಂಡದ ಕಾಯಿಲೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸುತ್ತಾರೆ. ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚಿನ ನೀರು ಕುಡಿಯುವುದರಿಂದ ಇದು ಮೂತ್ರಪಿಂಡಗಳ ಮೇಲೆ ಅನಗತ್ಯ ಒತ್ತಡವನ್ನು ಬೀರುತ್ತದೆ. ಇದರಿಂದ ದೇಹಕ್ಕೆ ಅಪಾಯವಾಗಬಹುದು. 
ವಿಶೇಷವಾಗಿ ಸೂಚಿಸುವುದಾದರೆ, ಮೂತ್ರಪಿಂಡಗಳ ಸಮಸ್ಯೆಯನ್ನು ಹೊಂದಿರುವವರು ಹೆಚ್ಚಾಗಿ ನೀರನ್ನು ಕುಡಿಯುವುದರಿಂದ ಇದು ದೇಹದಲ್ಲಿರುವ ಉಪ್ಪಿನ ಮಟ್ಟವನ್ನು ಕಡಿಮೆ ಮಾಡಿ ಹೈಪೋನಾಟ್ರೀಮಿಯಾಕ್ಕೆ ಕಾರಣವಾಗುತ್ತದೆ. ಇದರಿಂದ ತಲೆ ತಿರುಗುವುದು, ಆಯಾಸ, ಸುಸ್ತಿನ ಅನುಭವ ಉಂಟಾಗುತ್ತದೆ.

ದಿನಕ್ಕೆ ಎಷ್ಟು ನೀರು ಕುಡಿಯಬೇಕು?

ಪ್ರತಿಯೊಬ್ಬ ವ್ಯಕ್ತಿಯೂ ಅವರ ದೇಹದ, ವಯಸ್ಸಿನ ಆಧಾರದ ಮೇಲೆ ನೀರನ್ನು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ 4-5 ಲೀಟರ್ ನೀರು ಕುಡಿಯಲೇಬೇಕು ಎಂಬ ನಿಯಮವೇನಿಲ್ಲ. ಆರೋಗ್ಯವಂತ ವ್ಯಕ್ತಿಯು ದಿನಕ್ಕೆ 2 ಲೀಟರ್​ ನೀರನ್ನು ಕುಡಿದರೆ ಒಳ್ಳೆಯದು ಹವಾಮಾನ ಹಾಗೂ ದೈಹಿಕ ಪರಿಸ್ಥಿತಿಯ ಮೇಲೆ ಹೆಚ್ಚು ನೀರು ಕುಡಿಯುವುದು ಉತ್ತಮ.

ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುತ್ತೀರಾ ಎಂದು ತಿಳಿಯುವುದು ಹೇಗೆ?

ನಿಮ್ಮ ಮೂತ್ರವು ತಿಳಿ ಹಳದಿ ಬಣ್ಣದಲ್ಲಿದ್ದರೆ, ನೀವು ಸರಿಯಾದ ಪ್ರಮಾಣದಲ್ಲಿ ನೀರನ್ನು ಕುಡಿದಿದ್ದೀರಿ. ಹಾಗೆಯೇ, ನಿಮ್ಮ ಮೂತ್ರವು ಗಾಢ ಹಳದಿಯಾಗಿದ್ದರೆ, ನೀರನ್ನು ಸರಿಯಾಗಿ ಕುಡಿದಿಲ್ಲ ಎಂದು ತಿಳಿದುಬರುತ್ತದೆ. ಹೀಗೇನಾದರೂ ಆದಲ್ಲಿ ಮೂತ್ರಪಿಂಡಗಳ ಮೇಲೆ ಒತ್ತಡ ಉಂಟಾಗುತ್ತದೆ.
ಆದಾಗ್ಯೂ, ಕೇವಲ ನೀರು ಕುಡಿಯುವುದರಿಂದ ಮಾತ್ರ ಮೂತ್ರಪಿಂಡಗಳು ಆರೋಗ್ಯವಾಗಿ ಇರುವುದರಿಲ್ಲ. ಬದಲಿಗೆ ಆಹಾರ, ಉಪ್ಪು ಸೇವನೆ, ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಮಟ್ಟಗಳು ಮತ್ತು ದೈಹಿಕ ಚಟುವಟಿಕೆಗಳು ಮೂತ್ರ ಪಿಂಡದ ಮೇಲೆ ನೇರ ಪರಿಣಾಮವನ್ನು ಬೀರುತ್ತವೆ. ಆದರಿಂದ ಆದಷ್ಟು ಸಮತೋಲನ ಆಹಾರ, ಕಡಿಮೆ ಉಪ್ಪು ಸೇವಿಸಿರಿ ಇದು ನಿಮ್ಮ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net